AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನ ವೃತ್ತಿ ಬದುಕಿಗೆ 40 ವರ್ಷ; ಕಲರ್ಸ್ ವೇದಿಕೆ ಮೇಲೆ ಉತ್ಸವ

Shivarajkumar: ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಕಲರ್ಸ್ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಅವರ ಮೊದಲ ಚಿತ್ರ ‘ಆನಂದ’ 39ನೇ ವಾರ್ಷಿಕೋತ್ಸವವನ್ನೂ ಈ ಕಾರ್ಯಕ್ರಮದಲ್ಲಿ ಆಚರಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಶಿವಣ್ಣನ ವೃತ್ತಿ ಬದುಕಿಗೆ 40 ವರ್ಷ; ಕಲರ್ಸ್ ವೇದಿಕೆ ಮೇಲೆ ಉತ್ಸವ
ಶಿವಣ್ಣ
ರಾಜೇಶ್ ದುಗ್ಗುಮನೆ
|

Updated on: Jun 04, 2025 | 1:03 PM

Share

ಶಿವರಾಜ್​ಕುಮಾರ್ (Shivarajkumar) ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 40 ವರ್ಷಗಳು ಕಳೆದಿವೆ. ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ವೇದಿಕೆ ಸಿದ್ಧವಾಗಿದೆ. ಅವರ ನಟನೆಯ ‘ಆನಂದ್’ ಚಿತ್ರ ರಿಲೀಸ್ ಆಗಿ 39 ವರ್ಷಗಳು ಕಳೆದಿವೆ. ಶಿವಣ್ಣ  ಅವರು ಈ ಚಿತ್ರವನ್ನು ಅವರು ಒಪ್ಪಿಕೊಂಡು 4 ದಶಕ ಕಳೆದಿದೆ. ಈ ಖುಷಿಯನ್ನು ಕಲರ್ಸ್ ಕನ್ನಡ ವೇದಿಕೆ ಮೇಲೆ ಸಂಭ್ರಮಿಸಲಾಗಿದೆ. ಆ ಸಂದರ್ಭದ ಪ್ರೋಮೋ ರಿಲೀಸ್ ಆಗಿದೆ.

ಶಿವರಾಜ್​ಕುಮಾರ್ ನಟಿಸಿದ ಮೊದಲ ಚಿತ್ರ ‘ಆನಂದ್’. ಈ ಸಿನಿಮಾ 1986ರ ಜೂನ್ 19ರಂದು ರಿಲೀಸ್ ಆಯಿತು. ಸಿಂಗೀತಮ್ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶನ ಮಾಡಿದರು. ಈ ಸಿನಿಮಾಗೆ ಸುಧಾ ರಾಣಿ ನಾಯಕಿ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮ ಥಿಯೇಟರ್​ನಲ್ಲಿ ಬರೋಬ್ಬರಿ 38 ವಾರ ಪ್ರದರ್ಶನ ಕಂಡಿತ್ತು.

ಇದನ್ನೂ ಓದಿ
Image
ದಾಖಲೆ ಭರ್ಜರಿ ದಾಖಲೆ... ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
Image
ಖುಷಿ ತಡೆಯಲಾರದೆ ತಣ್ಣೀರು ಸುರಿದು ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ
Image
RCB ಮ್ಯಾಚ್ ನೋಡುತ್ತಲೇ ಮುಗಿದಯೋಯ್ತು ವೈಷ್ಣವಿ ‘ಸಂಗೀತ್’ ಕಾರ್ಯಕ್ರಮ
Image
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಶಿವರಾಜ್​ಕುಮಾರ್ ಅವರ ಈ ವಿಶೇಷ ಮೈಲಿಗಲ್ಲನ್ನು ಕಲರ್ಸ್ ಕನ್ನಡ ವಾಹಿನಿ ಸಂಭ್ರಮಿಸುತ್ತಿದೆ. ಕಲರ್ಸ್ ಕನ್ನಡ ಆರಂಭ ಆಗಿ 1 ದಶಕ ಕಳೆದಿದೆ. ಈ ದಶಕದ ಸಂಭ್ರವನ್ನು ವಾಹಿನಿ ಅದ್ದೂರಿಯಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮನಿಸಿದ್ದರು. ಶಿವರಾಜ್​ಕುಮಾರ್ ಕೂಡ ವೇದಿಕೆ ಏರಿದ್ದಾರೆ.

ಶಿವರಾಜ್​ಕುಮಾರ್ ಅವರು ಗ್ರ್ಯಾಂಡ್ ಆಗಿ ವೇದಿಕೆ ಏರಿದ್ದಾರೆ. ‘ಶಿವಣ್ಣ 40’ ಎಂಬ ಲೈನ್ ಮೂಲಕ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ‘ಅಣ್ಣಾವ್ರು ಹೋದ ಮೇಲೆ ಆ ಪ್ರೀತಿ-ಅಭಿಮಾನ ಶಿವಣ್ಣನಿಗೆ ಸಿಕ್ಕಿದೆ’ ಎಂದು ದುನಿಯಾ ವಿಜಯ್ ಅವರು ಹೇಳಿದರು. ‘ನೀವು ಬಂಗಾರದ ಮನುಷ್ಯ’ ಎಂದು ಬಾಯ್ತುಂಬ ಹೊಗಳಿದರು ತಾರಾ. ಶಿವಣ್ಣ ಎನರ್ಜಿಟಿಕ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ಸಂಜೆ 7ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಜೊತೆ ನಟಿಸಿದ ಈ ನಟಿ ಈಗ ಐಟಿ ಉದ್ಯೋಗಿ

ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಸುದ್ದಿ ಆದರು. ಕಮಲ್ ಹಾಸನ್ ಅವರು ವೇದಿಕೆ ಮೇಲೆ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳುವಾಗ ಶಿವರಾಜ್​ಕುಮಾರ್ ಅಲ್ಲಿಯೇ ಇದ್ದರು. ಆದರೆ, ಇದನ್ನು ಅವರು ವಿರೋಧಿಸಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.