ದರ್ಶನ್-ಸುದೀಪ್ ಜೊತೆ ಹಳೆ ನೆನಪು ಹಂಚಿಕೊಂಡ ನಟಿ
Darshan-Sudeep: ದರ್ಶನ್ ಹಾಗೂ ಸುದೀಪ್ ಒಂದಾಗಬೇಕೆಂಬ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಇದೀಗ ನಟಿಯೊಬ್ಬರು ದರ್ಶನ್ ಹಾಗೂ ಸುದೀಪ್ ಜೊತೆಗಿನ ಹಳೆ ನೆನಪು ಹಂಚಿಕೊಂಡಿದ್ದಾರೆ.
ದರ್ಶನ್ (Darshan) ಹಾಗೂ ಸುದೀಪ್ ಕನ್ನಡ ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ನಟರು. ಇಬ್ಬರಿಗೂ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇಬ್ಬರೂ ಸಹ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಸೇವೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಸಿನಿಮಾಗಳ ಮೂಲಕ ಮನರಂಜನೆ, ಸ್ಪೂರ್ತಿ ನೀಡುತ್ತಲೇ ಬಂದಿದ್ದಾರೆ. ಒಂದು ಸಮಯದಲ್ಲಿ ಗಳಸ್ಯ-ಕಂಠಸ್ಯ ಸ್ನೇಹಿತರಾಗಿದ್ದ ಈ ಇಬ್ಬರೂ, ಭಿನ್ನಾಭಿಪ್ರಾಯದಿಂದಾಗಿ ಈಗ ಗೆಳೆಯರಾಗಿ ಉಳಿದಿಲ್ಲ. ಹಾಗೆಂದು ವೈರಿಗಳೇನೂ ಆಗಿಲ್ಲ. ಈ ಇಬ್ಬರೂ ಮತ್ತೆ ಹಿಂದಿನಂತೆ ಗೆಳೆಯರಾಗಬೇಕೆಂಬ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ.
ಇಬ್ಬರೂ ಆತ್ಮೀಯ ಗೆಳೆಯರಲ್ಲದೇ ಇದ್ದರೂ ಸಹ ಪರಸ್ಪರರ ಸಿನಿಮಾಗಳನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆ ಆದ ದರ್ಶನ್ರ ‘ಕಾಟೇರ’ ಸಿನಿಮಾ ವೀಕ್ಷಿಸಿದ ಸುದೀಪ್, ಮೆಚ್ಚುಗೆ ವ್ಯಕ್ತಪಡಿಸಿದ್ದರು. ದರ್ಶನ್ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಗಳನ್ನು ಸುದೀಪ್ ನೀಡಿದ್ದರು. ಈ ಇಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಸಹ ಇತ್ತೀಚೆಗೆ ಹರಿದಾಡಲು ಆರಂಭಿಸಿವೆ. ಅದರ ಬೆನ್ನಲ್ಲೆ ನಟಿಯೊಬ್ಬರು, ದರ್ಶನ್ ಹಾಗೂ ಸುದೀಪ್ ಜೊತೆಗಿನ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Sudeep on Darshan: ದರ್ಶನ್ ಜೊತೆ ಸಮಸ್ಯೆಯೇ ಇಲ್ಲ; ನೇರ ಮಾತುಗಳಲ್ಲಿ ಹೇಳಿದ ಕಿಚ್ಚ ಸುದೀಪ್
ರೇಖಾ ಎಂದರೆ ಥಟ್ಟನೆ ನೆನಪಾಗುವುದಿಲ್ಲ ಆದರೆ ‘ಸ್ಪರ್ಷ ರೇಖಾ’ ಎಂದರೆ ಕಣ್ಣರಳಿ, ನಗು ಮೂಡದ ಕನ್ನಡ ಸಿನಿಮಾ ಪ್ರೇಮಿ ಇರಲಿಕ್ಕಿಲ್ಲ. ತಮ್ಮ ನಟನೆ, ಸೌಂದರ್ಯ, ನೃತ್ಯದಿಂದ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಲ್ಲಿ ಸ್ಥಾನ ಭದ್ರ ಮಾಡಿಕೊಂಡಿರುವ ನಟಿ ಸ್ಪರ್ಷ ರೇಖಾ, ಕನ್ನಡದ ಇಬ್ಬರು ಸೂಪರ್ ಸ್ಟಾರ್ಗಳಿಗೂ ನಾಯಕಿ. ದರ್ಶನ್ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಹಾಗೂ ಸುದೀಪ್ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಸ್ಪರ್ಷ’ ಎರಡರಲ್ಲೂ ನಾಯಕಿ ರೇಖಾ.
View this post on Instagram
ಸುದೀಪ್ ಹಾಗೂ ದರ್ಶನ್ ಇಬ್ಬರೊಟ್ಟಿಗೂ ಆತ್ಮೀಯ ಗೆಳೆತನವನ್ನು ಈಗಲೂ ಮುಂದುವರೆಸಿರುವ ರೇಖಾ, ಇಂದು ಇಬ್ಬರೂ ನಟರೊಟ್ಟಿಗೆ ತಮ್ಮ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ‘ಮೆಜೆಸ್ಟಿಕ್’ ಹಾಗೂ ‘ಸ್ಪರ್ಷ’ ಸಿನಿಮಾದ ಚಿತ್ರಗಳನ್ನು ರೇಖಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಗುಡ್ ಓಲ್ಡ್ ಮೆಮೊರೀಸ್’ (ಒಳ್ಳೆಯ ಹಳೆ ನೆನಪುಗಳು) ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Wed, 31 January 24