ಹೇಮಂತ್ ರಾವ್ ಬಿಡುಗಡೆ ಮಾಡಿದ ‘ಸಾರಾಂಶ’ ಟ್ರೇಲರ್ ಹೇಗಿದೆ ನೋಡಿ..
ಈಗಿನ ಕಾಲಕ್ಕೆ ತಕ್ಕಂತಹ ಕಥೆಯನ್ನು ಆಯ್ದುಕೊಂಡು ‘ಸಾರಾಂಶ’ ಸಿನಿಮಾ ಮಾಡಲಾಗಿದೆ. ಸೂರ್ಯ ವಸಿಷ್ಠ ಅವರು ನಿರ್ದೇಶನದ ಜೊತೆಗೆ ಒಂದು ಪ್ರಧಾನ ಪಾತ್ರವನ್ನೂ ಮಾಡಿದ್ದಾರೆ. ದೀಪಕ್ ಸುಬ್ರಮಣ್ಯ ಅವರ ಪಾತ್ರ ವಿಶಿಷ್ಟವಾಗಿ ಇರಲಿದೆ. ಶ್ರುತಿ ಹರಿಹರನ್ ಅವರು ಮಾಯಾ ಎಂಬ ಪಾತ್ರದ ಮೂಲಕ ಪ್ರೇಕ್ಷಕರನ್ನು ಎದುರಾಗಲಿದ್ದಾರೆ.
ಒಂದಷ್ಟು ಕಾರಣಗಳಿಂದ ಕನ್ನಡದ ‘ಸಾರಾಂಶ’ ಸಿನಿಮಾ (Saramsha Movie) ಕೌತುಕ ಮೂಡಿಸಿದೆ. ಫೆಬ್ರವರಿ 15ರಂದು ಬಿಡುಗಡೆ ಆಗಲಿರುವ ಈ ಸಿನಿಮಾಗೆ ಸೂರ್ಯ ವಸಿಷ್ಠ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿರುವ ಈ ಸಿನಿಮಾ ತಂಡ ಈಗ ಟ್ರೇಲರ್ (Saramsha Movie Trailer) ಬಿಡುಗಡೆ ಮಾಡಿದೆ. ಆ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶಕ ಹೇಮಂತ್ ಎಂ. ರಾವ್ (Hemanth M. Rao) ಅವರು ಇತ್ತೀಚೆಗೆ ‘ಸಾರಾಂಶ’ ಸಿನಿಮಾದ ಟ್ರೇಲರ್ ಅನಾವರಣ ಮಾಡಿ ಶುಭ ಕೋರಿದ್ದಾರೆ.
ಬಹಳ ಡಿಫರೆಂಟ್ ಆಗಿ ‘ಸಾರಾಂಶ’ ಸಿನಿಮಾದ ಟ್ರೇಲರ್ ಮೂಡಿಬಂದಿದೆ. ಇಡೀ ಸಿನಿಮಾದ ಕಥಾವಸ್ತು ಯಾವ ರೀತಿ ಇದೆ ಎಂಬುದರ ಝಲಕ್ ತೋರಿಸುವ ರೀತಿಯಲ್ಲಿ ಈ ಟ್ರೇಲರ್ ಮೂಡಿಬಂದಿದೆ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್, ಸೂರ್ಯ ವಸಿಷ್ಠ, ದೀಪಕ್ ಸುಬ್ರಮಣ್ಯ, ಶ್ವೇತಾ ಗುಪ್ತಾ ಮುಂತಾದವರು ನಟಿಸಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಭಾಗಿಯಾಗಿ ಒಂದಷ್ಟು ಮಾಹಿತಿ ಹಂಚಿಕೊಂಡರು.
ಈಗಿನ ಕಾಲಕ್ಕೆ ತಕ್ಕಂತಹ ಕಥೆಯನ್ನು ಆಯ್ದುಕೊಂಡು ‘ಸಾರಾಂಶ’ ಸಿನಿಮಾ ಮಾಡಲಾಗಿದೆ. ಸೂರ್ಯ ವಸಿಷ್ಠ ಅವರು ನಿರ್ದೇಶನದ ಜೊತೆಗೆ ಒಂದು ಪ್ರಧಾನ ಪಾತ್ರವನ್ನೂ ಮಾಡಿದ್ದಾರೆ. ದೀಪಕ್ ಸುಬ್ರಮಣ್ಯ ಅವರ ಪಾತ್ರ ವಿಶಿಷ್ಟವಾಗಿ ಇರಲಿದೆ. ಶ್ರುತಿ ಹರಿಹರನ್ ಅವರು ಮಾಯಾ ಎಂಬ ಪಾತ್ರದ ಮೂಲಕ ಪ್ರೇಕ್ಷಕರನ್ನು ಎದುರಾಗಲಿದ್ದಾರೆ. ಈ ಎಲ್ಲ ಪಾತ್ರಗಳ ಪರಿಚಯ ಈ ಟ್ರೇಲರ್ನಲ್ಲಿ ಆಗಿದೆ.
ಇದನ್ನೂ ಓದಿ: ‘ಸಾರಾಂಶ’: ಕತೆಗಾರನಿಂದ ಪಾತ್ರವೋ, ಪಾತ್ರದಿಂದ ಕತೆಗಾರನೋ
ಎಲ್ಲ ಪಾತ್ರಗಳೂ ವಿಶೇಷವಾಗಿವೆ ಎಂಬುದಕ್ಕೆ ಟ್ರೇಲರ್ನಲ್ಲಿ ಸೂಚನೆ ಸಿಗುತ್ತಿದೆ. ಕನ್ನಡದ ಬಗ್ಗೆ ಬಹಳ ಪ್ರೀತಿ, ಆಸಕ್ತಿ ಇಟ್ಟುಕೊಂಡಿರುವ ಕನ್ನಡೇತರ ಪುಸ್ತಕ ಪ್ರಕಾಶಕರ ಪಾತ್ರವೂ ‘ಸಾರಾಂಶ’ ಸಿನಿಮಾದಲ್ಲಿದೆ. ಟ್ರೇಲರ್ನಲ್ಲಿ ಮುಖ್ಯವಾಗಿ 2 ಬೊಂಬೆಗಳ ಪಾತ್ರ ಗಮನ ಸೆಳೆಯುತ್ತಿವೆ. ಆ ಪಾತ್ರಗಳನ್ನು ರಾಮ್ ಪ್ರಸಾದ್ ಬಾಣಾವರ ಹಾಗೂ ಸತೀಶ್ ಕುಮಾರ್ ಮಾಡಿದ್ದಾರೆ.
‘ಸಾರಾಂಶ’ ಸಿನಿಮಾದ ಟ್ರೇಲರ್:
ರವಿ ಕಶ್ಯಪ್ ಹಾಗೂ ಆರ್.ಕೆ. ನಲ್ಲಮ್ ಅವರ ‘ವಿಭಾ ಕಶ್ಯಪ್ ಪ್ರೊಡಕ್ಷನ್ಸ್’ ಮತ್ತು ‘ಕ್ಲ್ಯಾಪ್ ಬೋರ್ಡ್ ಪ್ರೊಡಕ್ಷನ್’ ಮೂಲಕ ‘ಸಾರಾಂಶ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ಪೃಥ್ವಿ ಬನವಾಸಿ, ಸತೀಶ್ ಕುಮಾರ್, ರಾಮ್ ಮಂಜುನಾಥ್ ಮುಂತಾದವರು ಕೂಡ ನಟಿಸಿದ್ದಾರೆ. ಅಪರಾಜಿತ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರದೀಪ್ ನಾಯಕ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಅನಂತ್ ಭಾರದ್ವಾಜ್ ಅವರ ಛಾಯಾಗ್ರಹಣವಿದೆ. ಈ ಸಿನಿಮಾಗೆ ಉದಿತ್ ಹರಿತಾಸ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Thu, 1 February 24