AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮುರಳಿ ಹೊಸ ಸಿನಿಮಾ ಘೋಷಣೆ, ಬಹುಪರಾಕ್ ಅಲ್ಲ ಇದು ಬರೀ ‘ಪರಾಕ್’

SriMurali: ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ‘ಬಘೀರ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇದೇ ದಿನ ಅವರ ನಟನೆಯ ಹೊಸ ಸಿನಿಮಾ ‘ಪರಾಕ್’ನ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ.

ಶ್ರೀಮುರಳಿ ಹೊಸ ಸಿನಿಮಾ ಘೋಷಣೆ, ಬಹುಪರಾಕ್ ಅಲ್ಲ ಇದು ಬರೀ ‘ಪರಾಕ್’
ಪರಾಕ್
Follow us
ಮಂಜುನಾಥ ಸಿ.
|

Updated on: Dec 17, 2023 | 4:44 PM

ಇಂದು (ಡಿಸೆಂಬರ್ 17) ನಟ ಶ್ರೀಮುರಳಿ (SriMurali) ಹುಟ್ಟುಹಬ್ಬ. ಈ ಪ್ರಯುಕ್ತ ಶ್ರೀಮುರಳಿ ತಮ್ಮ ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ಕೆಲ ತಿಂಗಳಷ್ಟೆ ಅವರ ಅತ್ತಿಗೆ ನಿಧನ ಹೊಂದಿದ್ದರು, ಹಾಗಿದ್ದರೂ ಸಹ ನೋವನ್ನು ಬದಿಗಿಟ್ಟು ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಶ್ರೀಮುರಳಿ ಹುಟ್ಟುಹಬ್ಬದ ವಿಶೇಷವಾಗಿ ‘ಬಘೀರ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇದೀಗ ಇದೇ ದಿನ ಶ್ರೀಮುರಳಿಯ ಹೊಸ ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ.

ಯುವಕರ ಪ್ರತಿಭಾವಂತ ತಂಡವೊಂದು ಶ್ರೀಮುರಳಿ ಜೊತೆ ಕೈಜೋಡಿಸಿದೆ. ರೋರಿಂಗ್ ಸ್ಟಾರ್ ಹುಟ್ಟುಹಬ್ಬದ ವಿಶೇಷಾಗಿ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಟೈಟಲ್ ಪೋಸ್ಟರ್ ಭಿನ್ನವಾಗಿದ್ದು, ಹಲವು ಪ್ರಶ್ನೆಗಳನ್ನು ಮೂಡಿಸುವಂತಿದೆ. ಹೊಸ ನಿರ್ದೇಶಕ ಹಾಲೇಶ್ ಕೋಗುಂಡಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು ಸಿನಿಮಾಕ್ಕೆ ‘ಪರಾಕ್’ ಎಂದು ಹೆಸರಿಡಲಾಗಿದೆ.

ಈಗಾಗಲೇ ಕೆಲವು ಶಾರ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಅನುಭವ ಇರುವ ಹಾಲೇಶ್ ‘ಪರಾಕ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್​ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ. ಈ ಸಿನಿಮಾ ಆಕ್ಷನ್ ಜೊತೆಗೆ ನಿಗೂಡ ಥ್ರಿಲ್ಲರ್ ಕತೆಯನ್ನು ಒಳಗೊಂಡಿರಲಿದೆ. ‘ಪರಾಕ್’ ಸಿನಿಮಾವನ್ನು ಬ್ರ್ಯಾಂಡ್ ಕೋ-ಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್​ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ:‘ನಿಮ್ಮನ್ನು ನೋಡಲು ನಾನು ಕಾಯ್ತಾ ಇರ್ತೀನಿ‘; ಬರ್ತ್​ಡೇ ದಿನ ಅಭಿಮಾನಿಗಳ ಆಮಂತ್ರಿಸಿದ ಶ್ರೀಮುರಳಿ

ಬಹುತೇಕ ದಾವಣಗೆರೆಯ ಪ್ರತಿಭೆಗಳೇ ಒಂದಾಗಿ ‘ಪರಾಕ್’ ಸಿನಿಮಾ ಮಾಡುತ್ತಿರುವುದು ವಿಶೇಷ. ಸಿನಿಮಾದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಶ್ರೀಮುರಳಿ ರೆಕ್ಕೆಯುಳ್ಳ ಏಂಜಲ್​ ರೀತಿ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಒಂದು ರೆಕ್ಕೆ ಏಂಜಲ್​ನ ರೆಕ್ಕೆಯಂತಿದ್ದರೆ ಮತ್ತೊಂದು ರೆಕ್ಕೆ ಬಂದೂಕುಗಳಿಂದ ಮಾಡಲಾಗಿದೆ. ಒಟ್ಟಾರೆ ಸಖತ್ ಹೊಸ ಅವತಾರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ‘ಪರಾಕ್’ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

ಇನ್ನು ಶ್ರೀಮುಯರಳಿಯ ‘ಬಘೀರ’ ಸಿನಿಮಾದ ಟೀಸರ್ ಇಂದು (ಡಿಸೆಂಬರ್ 17) ಬಿಡುಗಡೆ ಆಗಿದೆ. ಭರ್ಜರಿ ಆಕ್ಷನ್ ವುಳ್ಳ ಈ ಸಿನಿಮಾಕ್ಕೆ ಕತೆ ಬರೆದಿರುವುದು ಪ್ರಶಾಂತ್ ನೀಲ್, ನಿರ್ಮಾಣ ಹೊಂಬಾಳೆ ಫಿಲ್ಮ್ಸ್​ ಅವರದ್ದು, ನಿರ್ದೇಶನವನ್ನು ಡಾ ಸೂರಿ ಮಾಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ