ವರ್ಷಗಳ ಬಳಿಕ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಲು ರೆಡಿ ಆದ ‘ಆರ್​ಆರ್​ಆರ್’ ಸಿನಿಮಾ; ಇನ್ನೆಷ್ಟು ಕೋಟಿ ಬೇಕು?  

|

Updated on: Feb 22, 2023 | 11:09 AM

‘ಆರ್​ಆರ್​ಆರ್​’ ಸಿನಿಮಾ 2021ರ ಮಾರ್ಚ್​ 24ರಂದು ವಿಶ್ವಾದ್ಯಂತ ರಿಲೀಸ್ ಆಯಿತು. ಈ ಚಿತ್ರ ಸುಮಾರು 20 ದಿನಗಳ ಕಾಲ ಅಬ್ಬರಿಸಿತು. ಈ ಚಿತ್ರದ ವೇಗಕ್ಕೆ ಬ್ರೇಕ್ ನೀಡಿದ್ದು ‘ಕೆಜಿಎಫ್ 2’ ಸಿನಿಮಾ.

ವರ್ಷಗಳ ಬಳಿಕ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಲು ರೆಡಿ ಆದ ‘ಆರ್​ಆರ್​ಆರ್’ ಸಿನಿಮಾ; ಇನ್ನೆಷ್ಟು ಕೋಟಿ ಬೇಕು?  
ಯಶ್- ಆರ್​ಆರ್​ಆರ್ ಪೋಸ್ಟರ್
Follow us on

ಕಳೆದ ವರ್ಷ ರಿಲೀಸ್ ಆದ ಎರಡು ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ‘ಕೆಜಿಎಫ್ 2’ ಮೊದಲ ಸ್ಥಾನ ಪಡೆದರೆ, ‘ಆರ್​ಆರ್​ಆರ್​’ ಸಿನಿಮಾ (RRR Movie) ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ಈ ಎರಡೂ ಚಿತ್ರಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿವೆ. ರಾಜಮೌಳಿ ಸಿನಿಮಾದ ಕಲೆಕ್ಷನ್​ನ ‘ಕೆಜಿಎಫ್ 2’ (KGF Chapter 2) ಚಿತ್ರ ಹಿಂದಿಕ್ಕಿ ಹೊಸ ದಾಖಲೆ ಬರೆದಿತ್ತು. ಈಗ ಈ ರೇಸ್​ನಲ್ಲಿ ‘ಆರ್​ಆರ್​ಆರ್​’ ಸಿನಿಮಾ ಗೆಲ್ಲುವ ಸೂಚನೆ ಸಿಕ್ಕಿದೆ. ಜಪಾನ್​ನಲ್ಲಿ ರಾಜಮೌಳಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹೀಗಾಗಿ, ಎರಡೂ ಚಿತ್ರಗಳ ಮಧ್ಯೆ ಕೆಲವೇ ಕೋಟಿಗಳ ಅಂತರ ಇದೆ.

‘ಆರ್​ಆರ್​ಆರ್​’ ಸಿನಿಮಾ 2021ರ ಮಾರ್ಚ್​ 24ರಂದು ವಿಶ್ವಾದ್ಯಂತ ರಿಲೀಸ್ ಆಯಿತು. ಈ ಚಿತ್ರ ಸುಮಾರು 20 ದಿನಗಳ ಕಾಲ ಅಬ್ಬರಿಸಿತು. ಈ ಚಿತ್ರದ ವೇಗಕ್ಕೆ ಬ್ರೇಕ್ ನೀಡಿದ್ದು ‘ಕೆಜಿಎಫ್ 2’ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರು ರಾಕಿ ಆಗಿ ಅಬ್ಬರಿಸಿದ್ದರು. ‘ಆರ್​ಆರ್​ಆರ್​’ ಚಿತ್ರ 1100+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ ‘ಕೆಜಿಎಫ್ 2’ 1,230 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಆರ್​ಆರ್​ಆರ್​’ ಚಿತ್ರ ಜಪಾನ್​ನಲ್ಲಿ ಅಬ್ಬರಿಸುತ್ತಿದೆ.

‘ಆರ್​ಆರ್​ಆರ್​’ ಸಿನಿಮಾ ಜಪಾನ್​ನಲ್ಲಿ ಕಳೆದ ಅಕ್ಟೋಬರ್ 21ಕ್ಕೆ ರಿಲೀಸ್ ಆಯಿತು. ವಿಶೇಷ ಎಂದರೆ ಈಗಲೂ ಅಲ್ಲಿನ ಥಿಯೇಟರ್​ನಲ್ಲಿ ‘ಆರ್​ಆರ್​ಆರ್​’ ಪ್ರದರ್ಶನ ಕಾಣುತ್ತಿದೆ. ಜಪಾನ್​ನಿಂದ ಚಿತ್ರ 62 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 1206 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್ 2’ ಹಿಂದಿಕ್ಕಲು ‘ಆರ್​ಆರ್​ಆರ್​’ ಚಿತ್ರಕ್ಕೆ 24 ಕೋಟಿ ರೂಪಾಯಿ ಅವಶ್ಯಕತೆ ಇದೆ.

ಇದನ್ನೂ ಓದಿ
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

‘ಆರ್​ಆರ್​ಆರ್​’ ಸಿನಿಮಾ ಜಪಾನ್ ಬಾಕ್ಸ್ ಆಫೀಸ್​ನಲ್ಲಿ ಮತ್ತಷ್ಟು ದಿನ ಅಬ್ಬರಿಸಲಿದೆ. ಬೇರೆ ದೇಶಗಳಲ್ಲಿ ಈ ಚಿತ್ರ ರಿಲೀಸ್ ಆದರೆ ಅನಾಯಾಸವಾಗಿ ‘ಕೆಜಿಎಫ್ 2’ ಚಿತ್ರದ ಗಳಿಕೆಯನ್ನು ‘ಆರ್​ಆರ್​ಆರ್​’ ಚಿತ್ರ ಹಿಂದಿಕ್ಕಲಿದೆ. ಸ್ವಾಂತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೀವಿಸಿದವರ ಪಾತ್ರಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಕಾಲ್ಪನಿಕ ಕಥೆಯನ್ನು ‘ಆರ್​ಆರ್​ಆರ್​’ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇದೆ. ಸಿನಿಮಾದ ಅದ್ದೂರಿತನಕ್ಕೆ ಫ್ಯಾನ್ಸ್ ಮಾರು ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:06 am, Wed, 22 February 23