ವಿದೇಶದಲ್ಲೂ ‘ಸು ಫ್ರಮ್ ಸೋ’ ಸಿನಿಮಾ ಅಬ್ಬರ; ಅಬ್ಬಬ್ಬಾ ಇಷ್ಟೊಂದು ಗಳಿಕೆಯೇ?

‘ಸು ಫ್ರಮ್ ಸೋ’ ಸಿನಿಮಾ ಕರ್ನಾಟಕದಲ್ಲಿ ಅಪಾರ ಯಶಸ್ಸು ಕಂಡ ನಂತರ ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಲಯಾಳಂ ಡಬ್ಬಿಂಗ್ ಜೊತೆಗೆ ಇತರ ರಾಜ್ಯಗಳಲ್ಲೂ ಪ್ರದರ್ಶನಗೊಂಡಿರುವ ಈ ಚಿತ್ರ ಈಗಾಗಲೇ ವಿದೇಶದಲ್ಲಿ 5 ಲಕ್ಷ ಡಾಲರ್‌ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲೂ ಸಿನಿಮಾ ಅಬ್ಬರಿಸುತ್ತಿದೆ.

ವಿದೇಶದಲ್ಲೂ ‘ಸು ಫ್ರಮ್ ಸೋ’ ಸಿನಿಮಾ ಅಬ್ಬರ; ಅಬ್ಬಬ್ಬಾ ಇಷ್ಟೊಂದು ಗಳಿಕೆಯೇ?
ಸು ಫ್ರಮ್ ಸೋ

Updated on: Aug 06, 2025 | 12:06 PM

‘ಸು ಫ್ರಮ್ ಸೋ’ ಸಿನಿಮಾ (Su From So) ಕರ್ನಾಟಕದಲ್ಲಿ ಅಬ್ಬರಿಸುತ್ತಿರುವ ಸಂದರ್ಭದಲ್ಲೇ ಕೇರಳಕ್ಕೆ ತೆರಳಿದೆ. ಮಲಯಾಳಂ ಭಾಷೆಗೆ ಸಿನಿಮಾ ಡಬ್ ಆಗಿ ತೆರೆ ಕಂಡಿದೆ. ಇದರ ಜೊತೆಗೆ ಮುಂಬೈ, ಹೈದರಾಬಾದ್ ಮೊದಲಾದ ಕಡೆಗಳಲ್ಲಿ ಕನ್ನಡ ಭಾಷೆಯಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗ ವಿದೇಶದಲ್ಲಿ ಅಬ್ಬರಿಸುತ್ತಿದೆ. ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿದ ಈ ಚಿತ್ರ ಈಗ ವಿದೇಶಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಚಿತ್ರನ್ನು ಅಲ್ಲಿಯ ಜನರು ಇಷ್ಟಪಟ್ಟಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ವಿದೇಶದಲ್ಲಿ ಆಗಸ್ಟ್ 1ರಿಂದ ರಿಲೀಸ್ ಆಗಿದೆ. ಕಳೆದ ಐದು ದಿನಗಳಲ್ಲಿ ಸಿನಿಮಾ ಅಲ್ಲಿ ಬರೋಬ್ಬರಿ 5 ಲಕ್ಷ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ, ಭಾರತೀಯ ರೂಪಾಯಿ ಪ್ರಕಾರ ಸುಮಾರು 4.38 ಕೋಟಿ ರೂಪಾಯಿ ಆಗಲಿದೆ. ಸಿನಿಮಾದ ಬಜೆಟ್ ನಾಲ್ಕು ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈಗ ಈ ಸಿನಿಮಾ ವಿದೇಶ ಒಂದರಲ್ಲೇ ಬಜೆಟ್​ಗೂ ಮೀರಿದ ಕಲೆಕ್ಷನ್ ಮಾಡಿದೆ.

‘ಸು ಫ್ರಮ್ ಸೋ’ ಚಿತ್ರವನ್ನು ಜನರು ಕೊಂಡಾಡುತ್ತಾ ಇದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲು ಹಲವು ಕಾರಣಗಳು ಇವೆ. ಈ ಸಿನಿಮಾದ ಮೇಕಿಂಗ್ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಹಳ್ಳಿಯಲ್ಲಿ ನಡೆಯೋ ಕಥೆ ಮನಸ್ಸಿಗೆ ನಾಟುವಂತೆ ಇದೆ. ಅಲ್ಲದೆ, ಹಾಸ್ಯದ ಮೂಲಕ ಒಂದು ಗಂಭೀರ ವಿಚಾರವನ್ನು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ
ಜೂ. ಎನ್​ಟಿಆರ್​ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್

‘ಸು ಫ್ರಮ್ ಸೋ’ ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ನಿರ್ಮಾಣ ಇದೆ. ಜೆಪಿ ತುಮಿನಾಡ್ ಅವರು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ಜೆಪಿ ತುಮಿನಾಡ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ತನಿಷ್ಕಾ ಶೆಟ್ಟಿ, ಪುಷ್ಪರಾಜ್ ಬೋಳಾರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್​​ನಲ್ಲಿ 42 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಿಂದ ನಿರ್ಮಾಪಕರು ದೊಡ್ಡ ಲಾಭ ಕಂಡಿದ್ದಾರೆ. ಇನ್ನೂ ಕೆಲವು ವಾರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.