78 ಲಕ್ಷದಿಂದ 104 ಕೋಟಿ ರೂ.; ಬಜೆಟ್​ಗಿಂತ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು 100 ಕೋಟಿ ರೂಪಾಯಿ ದಾಟಿ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಸಮೀಪಿಸಿದರೂ ಚಿತ್ರದ ಗಳಿಕೆ ನಿಂತಿಲ್ಲ. ಕನ್ನಡದಲ್ಲಿ ಮಾತ್ರವಲ್ಲದೆ, ಮಲಯಾಳಂ ಮತ್ತು ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಭಾರಿ ಲಾಭ ಗಳಿಸಿದೆ.

78 ಲಕ್ಷದಿಂದ 104 ಕೋಟಿ ರೂ.; ಬಜೆಟ್​ಗಿಂತ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
ಸು ಫ್ರಮ್ ಸೋ

Updated on: Aug 18, 2025 | 7:31 AM

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ (Su From So ) ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಈ ಚಿತ್ರ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದಗ್ಯೂ ಸಿನಿಮಾದ ಅಬ್ಬರ ಮಾತ್ರ ಈವರೆಗೆ ನಿಂತಿಲ್ಲ. ಇದು ರಾಜ್ ಬಿ ಶೆಟ್ಟಿ ವೃತ್ತಿ ಜೀವನಕ್ಕೆ ಮೈಲೇಜ್ ಕೊಟ್ಟಿದೆ. ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇನ್ನೂ ಕೆಲವು ವಾರ ಸಿನಿಮಾದ ಕಲೆಕ್ಷನ್ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.

‘ಸು ಫ್ರಮ್ ಸೋ’ ನಾಲ್ಕನೇ ಭಾನುವಾರ (ಆಗಸ್ಟ್ 17) ದಾಖಲೆಯ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಭಾನುವಾರ 2.89 ಕೋಟಿ ರೂಪಾಯಿ ಹರಿದು ಬಂದಿದೆ. ಕನ್ನಡದ ಚಿತ್ರವೊಂದು ನಾಲ್ಕನೇ ವಾರ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಇನ್ನು, ಮಲಯಾಳಂನಲ್ಲೂ ಸಿನಿಮಾ ಅಬ್ಬರಿಸಿದೆ. ಚಿತ್ರಕ್ಕೆ ಕೇರಳದಿಂದ 5.22 ಕೋಟಿ ರೂಪಾಯಿ ಗಳಿಕೆ ಆಗಿದೆ. ವಿದೇಶದಿಂದ ಚಿತ್ರಕ್ಕೆ 13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ಸು ಫ್ರಮ್ ಸೋ’ ಚಿತ್ರದ ಬಜೆಟ್ 4.30 ಕೋಟಿ ರೂಪಾಯಿ. ಒಟ್ಟಾರೆ ಆಗಿ ತಂಡದವರು ಸಿನಿಮಾ ಮೇಲೆ 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಸಿನಿಮಾದ ಒಟ್ಟಾರೆ ಗಳಿಕೆ 104 ಕೋಟಿ ರೂಪಾಯಿ. ಅಂದರೆ, ಸಿನಿಮಾ ತನ್ನ ಬಜೆಟ್​ನ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದೆ. ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ಚಿತ್ರ ಮೊದಲ ದಿನದ ಗಳಿಕೆ ಕೇವಲ 78 ಲಕ್ಷ ರೂಪಾಯಿ ಆಗಿತ್ತು. ಈ ರೀತಿ ಓಪನಿಂಗ್ ಪಡೆದ ಈಗ ಸಿನಿಮಾ ಪ್ರತಿ ದಿನ 2+ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ ಅನ್ನೋದು ವಿಶೇಷ.

ಇದನ್ನೂ ಓದಿ
ಮಿಶ್ರ ಪ್ರತಿಕ್ರಿಯೆ ನಡುವೆಯೂ ದಾಖಲೆಯ ಕಲೆಕ್ಷನ್ ಮಾಡಿದ ಕೂಲಿ, ವಾರ್ 2
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ
ಸೈಫ್ ಅಲಿ ಖಾನ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್

ಇದನ್ನೂ ಓದಿ: 100 ಕೋಟಿ ರೂಪಾಯಿ ಗಳಿಸಿದ ‘ಸು ಫ್ರಮ್ ಸೋ’: ಇಷ್ಟಕ್ಕೇ ನಿಲ್ಲಲ್ಲ ಕಲೆಕ್ಷನ್

‘ಸು ಫ್ರಮ್ ಸೋ’ ಸಿನಿಮಾಗೆ ಜೆಪಿ ತುಮಿನಾಡ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಈ ಚಿತ್ರ ಶೀಘ್ರವೇ ಹಿಂದಿ ಭಾಷೆಗೂ ರಿಮೇಕ್ ಆಗಲಿದೆ ಎನ್ನಲಾಗಿದೆ. ತಮಿಳಿನಿಂದಲೂ ಸಿನಿಮಾ ರಿಮೇಕ್​ಗೆ ಬೇಡಿಕೆ ಬಂದಿದೆ. ಚಿತ್ರದ ಒಟಿಟಿ ಹಾಗೂ ಟಿವಿ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.