
‘ಸು ಫ್ರಮ್ ಸೋ’ (Su From So Movie) ಸಿನಿಮಾನ ಇಷ್ಟಪಟ್ಟವರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅನೇಕರು ಈ ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಸಿನಿಮಾ ಮಂದಿರಕ್ಕೆ ಕಾಲಿಡದ ಅನೇಕರು ಈ ಚಿತ್ರ ವೀಕ್ಷಣೆಗೆ ಥಿಯೇಟರ್ನತ್ತ ಹೋಗಿ ಬಂದಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾದ ಅಬ್ಬರ ಇನ್ನೆಷ್ಟು ದಿನ ಹೀಗೆಯೇ ಮುಂದುವರಿಯಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆ ರೀತಿಯಲ್ಲಿ ಚಿತ್ರದ ಕಲೆಕ್ಷನ್ ಆಗುತ್ತಿದೆ. ಹೀಗಿರುವಾಗಲೇ ‘ಸು ಫ್ರಮ್ ಸೋ’ ಸಿನಿಮಾ ತಂಡದವರು ಈ ಚಿತ್ರ ಇಷ್ಟಪಟ್ಟವರಿಗೆ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಎಲ್ಲರಿಗೂ ಇಷ್ಟ ಆಗುವ ರೀತಿಯಲ್ಲಿ ಇದೆ. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದ ವ್ಯಕ್ತಿಗಳವರೆಗೆ ಎಲ್ಲರೂ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾದಲ್ಲಿ ಬರೋ ರವಿ ಅಣ್ಣನ ಪಾತ್ರ, ಬಾವನ ಪಾತ್ರ, ರಾಜ್ ಬಿ ಶೆಟ್ಟಿ ಪಾತ್ರ ಹೆಚ್ಚು ಹಿಡಿಸಿದೆ. ಇನ್ನು, ಭಾನು ಪಾತ್ರ ಮನಸ್ಸಿಗೆ ನಾಟುತ್ತದೆ. ಈ ಪಾತ್ರಕ್ಕೆ ಸಂಬಂಧಿಸಿದ ವಿಚಾರದಲ್ಲೇ ತಂಡದವರು ಸರ್ಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾನುವಾರ ‘ಸು ಫ್ರಮ್ ಸೋ’ ಊಹೆಗೂ ಮೀರಿದ ಕಲೆಕ್ಷನ್; ಪಂಡಿತರ ಲೆಕ್ಕಾಚಾರ ತಲೆಕೆಳಗೆ
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಭಾನು ಹಾಗೂ ರವಿ ಅಣ್ಣನ ಪ್ರೇಮ ಕಥೆ ಕೂಡ ಹೈಲೈಟ್. ಈ ಪ್ರೇಮವನ್ನು ಮತ್ತಷ್ಟು ಚೆಂದಗೊಳಿಸೋದು ‘ಸ್ಕೂಟರ್..’ ಸಾಂಗ್. ಈ ಹಾಡು ಯಾವಾಗ ರಿಲೀಸ್ ಆಗುತ್ತದೆ ಎಂದು ಪ್ರೇಕ್ಷಕರು ಕಾಯುತ್ತಲೇ ಇದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ‘ಸ್ಕೂಟರ್’ ಹಾಡು ರಿಲೀಸ್ ಆಗಿ ಲಕ್ಷಾಂತರ ವೀಕ್ಷಣೆ ಪಡೆದಿದೆ. ಈ ಮೂಲಕ ‘ಸು ಫ್ರಮ್ ಸೋ’ ಸಿನಿಮಾ ಇಷ್ಟಪಟ್ಟವರು ಈ ಹಾಡನ್ನು ಕೂಡ ಇಷ್ಟಪಡುತ್ತಿದ್ದಾರೆ.
ಅನೇಕ ಲವ್ಸ್ಟೋರಿಗಳು ಬಂದು ಹೋಗಿವೆ. ಆದರೆ, ‘ಸು ಫ್ರಮ್ ಸೋ’ ಚಿತ್ರದ ಭಾನು ಹಾಗೂ ರವಿ ಅಣ್ಣನ ಲವ್ಸ್ಟೋರಿ ಭಿನ್ನವಾಗಿ ನಿಲ್ಲುತ್ತದೆ. ಇದನ್ನು ಅನೇಕರು ಪ್ರಬುದ್ಧ ಲವ್ಸ್ಟೋರಿ ಎಂದು ಕರೆದಿದ್ದಾರೆ. ಇಡೀ ಚಿತ್ರದ ತೂಕವನ್ನು ಹೆಚ್ಚಿಸುವಲ್ಲಿ ಇವರ ಪ್ರೇಮ ಕಥೆ ಇದೆ. ಅದೇ ರೀತಿ ಚಿತ್ರದ ಹಾಡು ಕೂಡ ಗಮನ ಸೆಳೆಯುವಂತಿದೆ. ಈ ಹಾಡನ್ನು ಅನೇಕರು ಇಷ್ಟಪಟ್ಟು ಕೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.