AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಡೀ ಕೇಸ್ ಆಗಲು ನೀವೇ ಕಾರಣ ಅಲ್ಲವೇ’; ಪವಿತ್ರಾ ಗೌಡಗೆ ಸುಪ್ರೀಂ ಜಡ್ಜ್ ಪ್ರಶ್ನೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ರದ್ದುಗೊಳಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪವಿತ್ರಾ ಅವರ ಪಾತ್ರದ ಬಗ್ಗೆ ಪ್ರಶ್ನಿಸಿದೆ. ಹೈಕೋರ್ಟ್‌ನ ವಿವೇಚನೆಯ ಕೊರತೆಯನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ. ಅಂತಿಮ ಆದೇಶ ಕಾಯ್ದಿರಿಸಲಾಗಿದೆ.

‘ಇಡೀ ಕೇಸ್ ಆಗಲು ನೀವೇ ಕಾರಣ ಅಲ್ಲವೇ’; ಪವಿತ್ರಾ ಗೌಡಗೆ ಸುಪ್ರೀಂ ಜಡ್ಜ್ ಪ್ರಶ್ನೆ
ಪವಿತ್ರಾ
ರಾಜೇಶ್ ದುಗ್ಗುಮನೆ
|

Updated on: Jul 24, 2025 | 3:07 PM

Share

ರೇಣುಕಾ ಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ದರ್ಶನ್ (Darshan), ಪವಿತ್ರಾ ಸೇರಿದಂತೆ ಏಳು ಆರೋಪಿಗಳ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ರದ್ದು ಮಾಡುವಂತೆ ಸರ್ಕಾರ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹಲವು ಅಭಿಪ್ರಾಯಗಳನ್ನು ಹೊರಹಾಕಿದೆ. ಇಡೀ ಪ್ರಕರಣ ನಡೆಯಲು ನೀವೇ ಕಾರಣ ಅಲ್ಲವೇ ಎಂದು ಪವಿತ್ರಾಗೆ ನೇರವಾಗಿ ಕೇಳಿದೆ. ಸದ್ಯ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.

ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲೆ, ‘ಪವಿತ್ರಾ ಗೌಡ ಅವರಿಂದ ರೇಣುಕಾಸ್ವಾಮಿಗೆ ಒಂದೇ ಒಂದು ಗಾಯವೂ ಆಗಿಲ್ಲ. ಚಪ್ಪಲಿಯಿಂದ ಹೊಡೆದಿದ್ದಾರೆಂಬ ಒಂದು ಹೇಳಿಕೆ ಮಾತ್ರವಿದೆ’ ಎಂದು ವಾದಿಸಿದರು. ಇದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅಸಮಾಧಾನ. ‘ಈ ಕೇಸ್ ಆಗಲು ನೀವೇ ಕಾರಣ ಅಲ್ಲವೇ?. ನೀವಿಲ್ಲದಿದ್ದರೆ A2 ದರ್ಶನ್ ಆಸಕ್ತಿ ವಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಆಗಲು ನೀವೇ ಕಾರಣ ಅಲ್ಲವಾ’ ಎಂದು ನೇರವಾಗಿ ಕೇಳಿದರು.

‘ನಾವು ಆರೋಪಿಗೆ ಶಿಕ್ಷೆ ನೀಡುವುದಿಲ್ಲ, ದೋಷಮುಕ್ತ ಮಾಡುವುದಿಲ್ಲ. ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ’ ಎಂದು ಸುಪ್ರೀಂಕೋರ್ಟ್​ನ ಪೀಠ ಹೇಳಿದೆ. ದರ್ಶನ್​ ಹಾಗೂ ಇತರರಿಗೆ ಜಾಮೀನು ನೀಡುವಾಗ ಹೈಕೊರ್ಟ್ ವಿವೇಚನೆ ಬಳಸಿಲ್ಲ ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯವಾಗಿದೆ.

ಇದನ್ನೂ ಓದಿ
Image
ದರ್ಶನ್​ಗೆ​ ಜಾಮೀನು ಕೊಟ್ಟ ಹೈಕೋರ್ಟ್ ಬಗ್ಗೆ ಅಸಮಾಧಾನ ಹೊರಹಾಕಿದ ಸುಪ್ರೀಂ
Image
ದರ್ಶನ್ ಕೇಸ್​ನಲ್ಲಿ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
Image
ರಾಮಾಚಾರಿ ಪಾತ್ರ ಕೊನೆ; ಕೊಲೆಯಲ್ಲಿ ಅಂತ್ಯವಾಯ್ತು ಕ್ಯಾರೆಕ್ಟರ್
Image
ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?

ಇದನ್ನೂ ಓದಿ: ದರ್ಶನ್​ಗೆ​ ಜಾಮೀನು ಕೊಟ್ಟ ಹೈಕೋರ್ಟ್ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದ ಸುಪ್ರೀಂ

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ1 ಆರೋಪಿ ಆಗಿದ್ದಾರೆ. ಇಡೀ ಪ್ರಕರಣ ನಡೆಯಲು ಪರೋಕ್ಷವಾಗಿ ಇವರೇ ಕಾರಣ. ಪವಿತ್ರಾ ಕೋರಿಕೆ ಮೇರೆಗೆ ದರ್ಶನ್ ಈ ಕೊಲೆ ಮಾಡಿಸಿದರು ಎಂಬ ಆರೋಪ ಇದೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ

ದರ್ಶನ್ ಕೇಸ್​ನಲ್ಲಿ ಹೈಕೋರ್ಟ್ ಆದೇಶ ನೀಡುವಾಗ ವಿವೇಚನೆ ಬಳಸಿಲ್ಲ ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿದೆ. ‘ಹೈಕೋರ್ಟ್ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಆದೇಶ ನೀಡಿದೆ ಅಲ್ಲವೇ? ಹೈಕೋರ್ಟ್ ಆದೇಶ ನೀಡಿರುವ ರೀತಿ ನಮಗೆ ನೋವನ್ನು ತಂದಿದೆ. ಟ್ರಯಲ್ ಕೋರ್ಟ್ ಜಡ್ಜ್ ತಪ್ಪು ಮಾಡುತ್ತಾರೆಂದರೆ ನಂಬಬಹುದು. ಆದರೆ, ಹೈಕೋರ್ಟ್ ಜಡ್ಜ್​ಗಳಿಂದ ಆ ರೀತಿ ಆಗಬಾರದು’ ಎಂಬ ರೀತಿಯಲ್ಲಿ ತೀರ್ಪು ನೀಡಿದೆ.

(ವರದಿ: ರಮೇಶ್ ಎಂ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.