AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naresh: ಪವಿತ್ರಾ ಲೋಕೇಶ್​​ಗೆ​ ಪ್ರೀತಿಯಿಂದ ನರೇಶ್ ಏನಂತ ಕರೀತಾರೆ? ಬಯಲಾಯ್ತು ನಿಕ್​ ನೇಮ್​

Pavitra Lokesh: ‘ಮತ್ತೆ ಮದುವೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಅವರಿಗೆ ಹಲವು ಪ್ರಶ್ನೆಗಳು ಎದುರಾಗುತ್ತಿವೆ.

Naresh: ಪವಿತ್ರಾ ಲೋಕೇಶ್​​ಗೆ​ ಪ್ರೀತಿಯಿಂದ ನರೇಶ್ ಏನಂತ ಕರೀತಾರೆ? ಬಯಲಾಯ್ತು ನಿಕ್​ ನೇಮ್​
ಪವಿತ್ರಾ ಲೋಕೇಶ್, ನರೇಶ್
ಮದನ್​ ಕುಮಾರ್​
|

Updated on: May 25, 2023 | 7:15 AM

Share

ನಟಿ ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ (​Naresh) ನಡುವೆ ಪ್ರೀತಿ ಚಿಗುರಿದ್ದು ಗೊತ್ತಿರುವ ವಿಚಾರ. ಆದರೆ ಈ ಜೋಡಿಯ ಬಗ್ಗೆ ತಿಳಿಯದೇ ಇರುವ ಅನೇಕ ಸಂಗತಿಗಳು ಇವೆ. ಆ ಎಲ್ಲ ವಿಚಾರಗಳು ‘ಮತ್ತೆ ಮದುವೆ’ (​Matthe Maduve) ಸಿನಿಮಾದಲ್ಲಿ ರಿವೀಲ್​ ಆಗುವ ಸಾಧ್ಯತೆ ಇದೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಮೋಷನ್​ ಸಲುವಾಗಿ ಅನೇಕ ಮಾಧ್ಯಮಗಳಿಗೆ ನರೇಶ್​ ಮತ್ತು ಪವಿತ್ರಾ ಲೋಕೇಶ್​ (​Pavitra Lokesh) ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾಗುತ್ತಿವೆ. ಪವಿತ್ರಾ ಲೋಕೇಶ್​ಗೆ ನರೇಶ್​ ಅವರು ಪ್ರೀತಿಯಿಂದ ಏನಂತ ಕರೀತಾರೆ? ಈ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ. ‘ನಾನು ಪವಿತ್ರಾ ಅವರನ್ನು ಮುದ್ದಾಗಿ ಅಮೂಲ್​ ಅಂತ ಕರೆಯುತ್ತೇನೆ’ ಎಂದು ನರೇಶ್​ ಹೇಳಿದ್ದಾರೆ. ಆ ವಿಡಿಯೋ ವಿಡಿಯೋ ವೈರಲ್​ ಆಗಿದೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಪ್ರೇಮ ಚಿಗುರಿದೆ ಎನ್ನಲಾಗಿತ್ತು. ಇದಕ್ಕೆ ನರೇಶ್ ಪತ್ನಿ ರಮ್ಯಾ ರಘುಪತಿ ಅವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಈಗ ಇದೇ ವಿಚಾರ ಇಟ್ಟುಕೊಂಡು ‘ಮತ್ತೆ ಮದುವೆ’ ಸಿನಿಮಾ ಸಿದ್ಧಗೊಂಡಂತಿದೆ. ಟೀಸರ್ ಮತ್ತು ಟ್ರೇಲರ್​ ಮೂಲಕ ಈ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಮೇ 26ರಂದು ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ‘ಮತ್ತೆ ಮದುವೆ’ ಚಿತ್ರಕ್ಕೆ ತಾವೇ ಡಬ್ ಮಾಡಿದ ನರೇಶ್; ಕಾರಣ ತಿಳಿಸಿದ ಹೀರೋ

ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಇರುವ ಸಂಬಂಧ ಎಂಥದ್ದು ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಅವರ ಕಡೆಯಿಂದಲೂ ಸ್ಪಷ್ಟನೆ ಇಲ್ಲ. ಇಬ್ಬರೂ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಇಬ್ಬರೂ ಒಟ್ಟಾಗಿ ‘ಮತ್ತೆ ಮದುವೆ’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆದಾಗ ಒಂದು ಪ್ರಶ್ನೆ ಎದುರಾಗಿತ್ತು. ‘ನೀವಿಬ್ಬರೂ ಗೆಳೆಯರೇ ಅಥವಾ ಅದಕ್ಕಿಂತಲೂ ಹೆಚ್ಚೇ?’ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನರೇಶ್, ‘ನಮ್ಮ ಹೃದಯಗಳ ಮಧ್ಯೆ ಮದುವೆ ಆಗಿದೆ, ನಾವು ಖುಷಿಯಿಂದ ಇದ್ದೇವೆ’ ಎಂದಿದ್ದರು.

ಇದನ್ನೂ ಓದಿ: ‘ನನಗೆ ಕನ್ನಡ ಗೊತ್ತು, ಶಿವರಾಜ್​ಕುಮಾರ್ ನನ್ನ ಕ್ಲಾಸ್​ಮೇಟ್ ಆಗಿದ್ರು’; ನರೇಶ್

ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಆ ಪ್ರೀತಿಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅಡ್ಡಿಯಾಗಿ ನಿಂತಿದ್ದು ಯಾಕೆ? ಈ ಮೂವರ ಜಗಳವು ಬೀದಿ ರಂಪವಾಗಿದ್ದು ಹೇಗೆ? ಮೈಸೂರು ಹೋಟೆಲ್​ನಲ್ಲಿ ಮಾಧ್ಯಮಗಳ ಎದುರಲ್ಲೇ ನಡೆದ ಹೈಡ್ರಾಮಾ ಹೇಗಿತ್ತು? ಇಂಥ ಹಲವು ಘಟನೆಗಳ ಝಲಕ್​ ಅನ್ನು ‘ಮತ್ತೆ ಮದುವೆ’ ಟ್ರೇಲರ್​ನಲ್ಲಿ ತೋರಿಸಲಾಗಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More