
ರಾಕಿಂಗ್ ಸ್ಟಾರ್ ಯಶ್ (Yash) ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅವರ ಬರ್ತ್ಡೇ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಈ ಟೀಸರ್ ಈವರೆಗೆ 83 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಟೀಸರ್ ನೋಡಿದ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈ ಟ್ವೀಟ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಯಶ್ ಹಾಗೂ ಸುದೀಪ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಇದು ಅಭಿಮಾನಿಗಳ ವಲಯದಲ್ಲಿ ಇರುವ ಚರ್ಚೆ. ಆದರೆ, ಇದನ್ನು ಅವರು ಸುಳ್ಳು ಮಾಡಿದ್ದಾರೆ. ಈ ಮೊದಲು ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರೂ ಪರಸ್ಪರ ಹಗ್ ಮಾಡಿದ್ದು ಇದೆ. ಈಗ ‘ಟಾಕ್ಸಿಕ್’ ವಿಷಯದಲ್ಲಿ ಇವರ ಬಂಧ ಮತ್ತೆ ಸಾಬೀತಾಗಿದೆ.
ಟೀಸರ್ ರಿಲೀಸ್ ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ‘ಯಶ್ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದರು. ಈ ಟ್ವೀಟ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್ಗೆ ಸುದೀಪ್ ವಿಶ್
‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಅವರು ಉತ್ತರಿಸಿದ್ದಾರೆ.
ಸುದೀಪ್ ಹಾಗೂ ಯಶ್ ಪರಪಸ್ಪರ ಪ್ರತಿಕ್ರಿಯೆ ನೀಡಿಕೊಂಡ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾಂಧವ್ಯ ಹೀಗೆಯೇ ಮುಂದುವರಿದರೆ ಚಿತ್ರರಂಗಕ್ಕೆ ಸಹಕಾರಿ ಆಗಲಿದೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.