2019ರ ಟಾಪ್ ಟ್ರೆಂಡಿಂಗ್ ಸಾಂಗ್ಸ್​ಗಳ ಹಿನ್ನೋಟ

2019ರ ಟಾಪ್ ಟ್ರೆಂಡಿಂಗ್ ಸಾಂಗ್ಸ್​ಗಳ ಹಿನ್ನೋಟಸಿನಿಪ್ರೇಮಿಗಳು ಸಿನಿಮಾ ಬರೋಕು ಮುಂಚೆ ಸಿನಿಮಾದ ಹಾಡಿಗಳಿಗೆ ಫಿದಾ ಆಗ್ತಾರೆ. ಅದರಂತೆ 2019 ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಅತಿ ಹೆಚ್ಚು ವೀವ್ಸ್ ಪಡೆದುಕೊಂಡ ಹಾಗೂ ಅತಿ ಹೆಚ್ಚು ಸಿನಿಪ್ರೇಮಿಗಳ ಬಾಯಿಯಲ್ಲಿ ಗುನುಗುತ್ತಿದ್ದ ಹಾಡುಗಳು ಯಾವ್ಯಾವು ಗೊತ್ತಾ? ಅದರ ಸ್ಪೆಷಲ್ ಏನು?..ಟ್ರೆಂಡ್ ಆಗಿದ್ದಾದ್ರು ಹೇಗೆ? ಇಲ್ಲಿ ಓದಿ. ಸಾಂಗ್ಸ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ಅದರಲ್ಲೂ ಪ್ರೇಮಿಗಳಿಗೆ ಒಂದು ಹೆಜ್ಜೆ ಜಾಸ್ತೀನೆ ಇಷ್ಟ ಆಗುತ್ತೆ. ಯಾಕಂದ್ರೆ ಹಾಡುಗಳನ್ನ ಕೇಳ್ತಾ ಇಮಾಜಿನೇಷನ್ ಲೋಕಕ್ಕೆ […]

2019ರ ಟಾಪ್ ಟ್ರೆಂಡಿಂಗ್ ಸಾಂಗ್ಸ್​ಗಳ ಹಿನ್ನೋಟ
Follow us
ಸಾಧು ಶ್ರೀನಾಥ್​
|

Updated on:Nov 19, 2020 | 12:13 AM

2019ರ ಟಾಪ್ ಟ್ರೆಂಡಿಂಗ್ ಸಾಂಗ್ಸ್​ಗಳ ಹಿನ್ನೋಟಸಿನಿಪ್ರೇಮಿಗಳು ಸಿನಿಮಾ ಬರೋಕು ಮುಂಚೆ ಸಿನಿಮಾದ ಹಾಡಿಗಳಿಗೆ ಫಿದಾ ಆಗ್ತಾರೆ. ಅದರಂತೆ 2019 ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಅತಿ ಹೆಚ್ಚು ವೀವ್ಸ್ ಪಡೆದುಕೊಂಡ ಹಾಗೂ ಅತಿ ಹೆಚ್ಚು ಸಿನಿಪ್ರೇಮಿಗಳ ಬಾಯಿಯಲ್ಲಿ ಗುನುಗುತ್ತಿದ್ದ ಹಾಡುಗಳು ಯಾವ್ಯಾವು ಗೊತ್ತಾ? ಅದರ ಸ್ಪೆಷಲ್ ಏನು?..ಟ್ರೆಂಡ್ ಆಗಿದ್ದಾದ್ರು ಹೇಗೆ? ಇಲ್ಲಿ ಓದಿ.

ಸಾಂಗ್ಸ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ಅದರಲ್ಲೂ ಪ್ರೇಮಿಗಳಿಗೆ ಒಂದು ಹೆಜ್ಜೆ ಜಾಸ್ತೀನೆ ಇಷ್ಟ ಆಗುತ್ತೆ. ಯಾಕಂದ್ರೆ ಹಾಡುಗಳನ್ನ ಕೇಳ್ತಾ ಇಮಾಜಿನೇಷನ್ ಲೋಕಕ್ಕೆ ಹೋಗುವವೇ ಹೆಚ್ಚು. ಸದ್ಯದಲ್ಲಿ ಎಲ್ಲರ ಮನ ತಟ್ಟಿದ, ಹೆಚ್ಚು ಕ್ರೇಜ್ ಹುಟ್ಟು ಹಾಕಿದ, ಎಲ್ಲರ ಬಾಯಲ್ಲೂ ಹೆಚ್ಚು ಗುನುಗುವಂತೆ ಮಾಡಿದ ಸಾಂಗ್ಸ್ ಯಾವುದು ಅಂತ ನೋಡೊಣ.

ಸಿಂಗದ ಚಿತ್ರದ ಶಾನೆ ಟಾಪ್ ಆಗವಳೆ: 2019ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ವೀಸ್ಸ್ ಪಡೆದುಕೊಂಡ ಹಾಡುಗಳಲ್ಲಿ ಸಿಂಗ ಚಿತ್ರದ ಶಾನೆ ಟಾಪಾಗವಳೆ ಹಾಡು ಎಲ್ಲರ ಮನ ಗೆದ್ದಿತ್ತು. ಎಲ್ಲರ ಬಾಯಲ್ಲೂ ಗುನುಗುವಂತೆ ಮೋಡಿ ಮಾಡಿತ್ತು.

ಯಜಮಾದ ಚಿತ್ರದ ಬಸಣ್ಣಿ ಬಾ: ಈ ವರ್ಷದ ಟಾಪ್ 2 ನಲ್ಲಿ ಯಜಮಾನ ಚಿತ್ರದ ಬಸಣ್ಣಿ ಬಾ ಹಾಡು ಪಡ್ಡೆ ಹುಡುಗರ ಹಾರ್ಟ್ ಫೇವರೆಟ್ ಆದ ಹಾಡಾಗಿದ್ದು, ಸಭೆ ಸಮಾರಂಭಗಳಲ್ಲಿ ಬಸಣ್ಣಿ ಬಾ ಹಾಡಿಗೆ ಯುವಕರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಕಿಸ್ ಚಿತ್ರದ ನೀನೆ ಮೊದಲು ನೀನೆ ಕೊನೆ: ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟ ಮತ್ತು ನಟಿಯ ಕಿಸ್ ಚಿತ್ರದ ನೀನೆ ಮೊದಲ ನೀನೆ ಕೊನೆ ಚಿತ್ರದ ಹಾಡು ಸಾಕಷ್ಟು ಸಂಚನ ಮೂಡಿಸಿತ್ತು. ಅದರಲ್ಲೂ ಪ್ರೇಮಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾದ ಹಾಡಾಗಿದೆ. ಹೀಗಾಗಿ 2019 ರಲ್ಲಿ ಟಾಪ್ 3 ಸ್ಥಾನ ಗಿಟ್ಟಿಸಿಕೊಂಡಿದೆ.

ಪೈಲ್ವಾನ್ ಚಿತ್ರದ ದೊರೆಸಾನಿ: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ದೊರೆಸಾನಿ ಹಾಡು ಕೂಡ ಬಹಳಷ್ಟು ವೀವ್ಸ್ ಪಡೆದುಕೊಂಡ ಹಾಡಾಗಿದೆ. ಯುಟ್ಯೂಬ್ ನಲ್ಲಿ 13ಮಿಲಿಯನ್ ವೀವ್ಸ್ ಪಡೆದು ಅಭಿಮಾನಿಗಳ ಮನೆಗೆದ್ದಿದೆ.

ಅಮರ್ ಚಿತ್ರದ ಮರೆತು ಹೋದೆನು: ಅಭಿಷೇಕ್ ಅಂಬರೀಶ್ ನಟನೆಯ, ಸಂಚಿತ್ ಹೆಗ್ಡೆ ಕಂಠದಿಂದ ಮೂಡಿಬಂದ ಅಮರ್ ಚಿತ್ರದ ಹಾಡು ಎಲ್ಲರ ಬಾಯಲ್ಲಿ ಗುನುಗುವಂತೆ ಮಾಡಿತ್ತು. ಹೆಚ್ಚು ವೀವ್ಸ್ ಪಡೆದುಕೊಳ್ಳದಿದ್ರು ಆಡೀಯೋ ಸಾಂಗ್ ಮಾತ್ರ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ.

ಹ್ಯಾಂಡ್ಸ್ ಅಪ್: ಹ್ಯಾಂಡ್ಸ್ ಅಪ್…. ಈಗ ಎಲ್ಲರೂ ಹ್ಯಾಂಡ್ಸ್ ಅಪ್ ಅಂತಿದ್ದಾರೆ. ಇನ್ನು ತೆರೆಕಾಣಲಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈ ಹಾಡಿನಲ್ಲಿ ರಕ್ಷಿತ್ ಶೆಟ್ಟಿ ಆಟಿಟ್ಯೂಡ್ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಹೀಗಾಗಿ ಎಲ್ಲರೂ ಹ್ಯಾಂಡ್ಸ್ ಅಪ್ ಹಾಡಿನ ಚಾಂಲೇಜ್ ತೆಗೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡ್ತಿದ್ದಾರೆ.

ಇನ್ನೂ ಜನ ಸಾಮಾನ್ಯರು ಮಾತ್ರವಲ್ಲದೆ ಸಿನಿಮಾ ನಟ ನಟಿಯರು ಕೂಡ ಈ ಚಾಲೆಂಜ್ ಸ್ವೀಕರಿಸಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಸದ್ಯ ಈ ಹಾಡು ಟಾಪ್ ಒನ್ ಸ್ಥಾನದಲ್ಲಿ ಸದ್ದು ಮಾಡ್ತಿದ್ದು, ಯುಟ್ಯೂಬ್ ನಲ್ಲಿ ರಿಲೀಸ್ ಆದ ಹನ್ನೊಂದು ದಿನಕ್ಕೆ 32,34,674 ವೀವ್ಸ್ ಪಡೆದುಕೊಂಡಿದೆ.

ಒಟ್ಟಾರೆ 2019ರಲ್ಲಿ ಕನ್ನಡದ ಹಾಡುಗಳು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿವೆ. ರಿಲೀಸ್ ಆಗಿ ದಿನಗಳು ಕಳೆದ್ರೂ ಇನ್ನು ಸಿನಿಪ್ರೇಮಿಗಳ ಬಾಯಿಯಲ್ಲಿ ಈಗಲೂ ಗುನುಗುವಂತೆ ಮಾಡಿದೆ.

Published On - 11:26 am, Sun, 29 December 19

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್