ಬಾಕ್ಸಾಫೀಸ್ನಲ್ಲೂ ಚರಿತ್ರೆ ಸೃಷ್ಟಿಸೋ ಶ್ರೀಮನ್ನಾರಾಯಣ!
ಅವನೇ ಶ್ರೀಮನ್ನಾರಾಯಣ.. ಕನ್ನಡ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾ. ರಿಲೀಸ್ ನಂತ್ರ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ನಾರಾಯಣನ ನಾದ ಮೊಳಗಿದೆ. ಹಾಗಿದ್ರೆ ಬಾಕ್ಸಾಫೀಸ್ನಲ್ಲಿ ನಾರಾಯಣ ಆಟ ಹೇಗಿದೆ ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ. ಎಲ್ಲಿ ನೋಡಿದ್ರೂ ಈ ಚಿತ್ರದ್ದೇ ಮ್ಯೂಸಿಕ್. ಪ್ರತಿಯೊಬ್ಬರ ಬಾಯಲ್ಲೂ ಗುನುಗೋ ಹಾಡು. ಕುಂತಲ್ಲಿ ನಿಂತಲ್ಲಿ ಕ್ರೇಜ್ ಹುಟ್ಟಿಸಿರೋದು ಹ್ಯಾಂಡ್ಸಪ್ ಸ್ಪೆಪ್. ಚರಿತ್ರೆ ಸೃಷ್ಟಿಸೋ ಅವತಾರ ಅಂತಾನೇ ಬಂದಿರೋ ಅವನೇ ಶ್ರೀಮನ್ನಾರಾಯಣ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಪ್ರೇಕ್ಷಕರನ್ನ ತುದಿಗಾಲಲ್ಲಿ […]
ಅವನೇ ಶ್ರೀಮನ್ನಾರಾಯಣ.. ಕನ್ನಡ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾ. ರಿಲೀಸ್ ನಂತ್ರ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ನಾರಾಯಣನ ನಾದ ಮೊಳಗಿದೆ. ಹಾಗಿದ್ರೆ ಬಾಕ್ಸಾಫೀಸ್ನಲ್ಲಿ ನಾರಾಯಣ ಆಟ ಹೇಗಿದೆ ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಎಲ್ಲಿ ನೋಡಿದ್ರೂ ಈ ಚಿತ್ರದ್ದೇ ಮ್ಯೂಸಿಕ್. ಪ್ರತಿಯೊಬ್ಬರ ಬಾಯಲ್ಲೂ ಗುನುಗೋ ಹಾಡು. ಕುಂತಲ್ಲಿ ನಿಂತಲ್ಲಿ ಕ್ರೇಜ್ ಹುಟ್ಟಿಸಿರೋದು ಹ್ಯಾಂಡ್ಸಪ್ ಸ್ಪೆಪ್. ಚರಿತ್ರೆ ಸೃಷ್ಟಿಸೋ ಅವತಾರ ಅಂತಾನೇ ಬಂದಿರೋ ಅವನೇ ಶ್ರೀಮನ್ನಾರಾಯಣ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಪ್ರೇಕ್ಷಕರನ್ನ ತುದಿಗಾಲಲ್ಲಿ ನಿಲ್ಲಿಸಿದೆ.
3ದಿನಕ್ಕೆ ₹30 ಕೋಟಿ ಬಾಚಿದ ನಾರಾಯಣ..! ಒಂದು ಸಿನಿಮಾ ಅಂದ್ರೆ ಪಾಜಿಟಿವ್, ನೆಗೆಟಿವ್ ಎರಡೂ ಅಂಶಗಳು ಇರೋದು ಕಾಮನ್. ಆದ್ರೆ, ಕೊನೆಗೆ ಉಳಿದುಕೊಳ್ಳೋದು ಸಿನಿಮಾಗಳಿಷ್ಟು ಅನ್ನೋ ಪ್ರಶ್ನೆ. ಆದ್ರೆ, ಬಿಗ್ ಓಪನಿಂಗ್ ಪಡೆದುಕೊಂಡ ಅವನೇ ಶ್ರೀಮನ್ನಾರಾಯಣ ಸಿನಿಮಾ ಗಳಿಕೆ ವಿಚಾರದಲ್ಲೂ ದಾಖಲೆ ಬರೆಯುತ್ತಿದೆ. ಮೊದಲ ದಿನವೇ 15 ಕೋಟಿ ರೂ.ಗೂ ಅಧಿಕ ಮೊತ್ತ ಕಲೆಹಾಕಿದ್ದ ನಾರಾಯಾಣ, ಮೂರನೇ ದಿನಕ್ಕೆ 30 ಕೋಟಿಯ ಗಡಿ ಮುಟ್ಟಿದೆ.
100 ಕೋಟಿಯತ್ತ ನಾರಾಯಣ ಓಟ..! ಕನ್ನಡದಲ್ಲಿ ಮಾತ್ರ ರಿಲೀಸ್ ಆದ ನಾರಾಯಣ ನಿರೀಕ್ಷೆಗೂ ಮೀರಿದ ಮೊತ್ತ ಹಾಕ್ತಿದೆ. ಈಗಾಗ್ಲೆ, ಲಾಭದಲ್ಲಿರೋ ಸಿನಿಮಾ ತಂಡ, 100 ಕೋಟಿಯ ಗಡಿಮುಟ್ಟುವ ತವಕದಲ್ಲಿದೆ. 7ನೇ ದಿನಕ್ಕೆ ಸಿನಿಮಾ ಮಿಸ್ಸಿಲ್ಲದೇ 100 ಕೋಟಿ ರೂ. ಗಳಿಸುತ್ತೆ ಅನ್ನೋ ಮಹತ್ತರ ಆಕಾಂಕ್ಷೆಯಲ್ಲಿದೆ ಚಿತ್ರತಂಡ.
ಇನ್ನೂ ಹೊರ ದೇಶಗಳಲ್ಲೂ ನಾರಾಯಣ ಅಬ್ಬರ ಜೋರಾಗಿದೆ. ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹೊರ ದೇಶಗಳಲ್ಲಿ ಕನ್ನಡದ ನಾರಾಯಣನಿಗೆ ದೊಡ್ಡ ಸ್ವಾತಗ ಸಿಕ್ಕಿದೆ. ಜೊತೆಗೆ ಹೊಸ ವರ್ಷಕ್ಕೆ 2020 ಜನವರಿ 1ಕ್ಕೆ ನಾರಾಯಣ ತೆಲುಗಿನಲ್ಲಿ ತೆರೆಗೆ ಬರಲಿದ್ದಾನೆ. ನಂತ್ರ ಜನವರಿ 3ಕ್ಕೆ ತಮಿಳು, ಮಲಯಾಳಂ ಮತ್ತು ಜನವರಿ 17ಕ್ಕೆ ಹಿಂದಿಯಲ್ಲಿ ನಾರಾಯಣ ಆಟ ಶುರುವಾಗಲಿದೆ.
ಇದೇ ಮೊದಲ ಬಾರಿಗೆ ನಾರಾಯಣನ ಮೂಲಕ ಕನ್ನಡ ಸಿನಿಮಾವೊಂದ್ರಲ್ಲಿ ಸಾಕಷ್ಟು ಹೊಸ ಪ್ರಯೋಗಗಳನ್ನ ಮಾಡಲಾಗಿದೆ. ಮ್ಯೂಜಿಕ್, ಮೇಕಿಂಗ್, ಗ್ರಾಫಿಕ್ಸ್ ವಿಭಾಗಗಳಲ್ಲಿ ಈ ಟೀಂ ಹೊಸ ಪ್ರಯೋಗ ಮಾಡಿದೆ. ಕನ್ನಡದಲ್ಲಿ ಸಕ್ಸಸ್ ಕಂಡ ನಾರಾಯಣನ ಆಟ ಪರಭಾಷೆಗಳಲ್ಲೂ ಮೋಡಿ ಮಾಡುತ್ತಾ ನೋಡ್ಬೇಕಿದೆ.
Published On - 6:40 am, Mon, 30 December 19