2019ರಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಕಮಾಲ್ ಮಾಡಿದ ಬೆಡಗಿಯರು
2019 ಸ್ಟಾರ್ ನಟಿಯರದ್ದೇ ಕರಾಮತ್ತು. ಹೊಸಬರಿಗೂ ಅದೃಷ್ಟ ಕೈ ಹಿಡಿದಿತ್ತು. ಅದ್ರಲ್ಲೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುರಸುಂದರಿಯರಿಗೆ ಈ ವರ್ಷ ಸುಗ್ಗಿಕಾಲ. ಸೂಪರ್ಸ್ಟಾರ್ಗಳಾಗ್ಬೇಕು ಅಂತ ಕನಸು ಹೊತ್ತು ಬಂದವ್ರಿಗೆ ಹೊಸ ಹರುಷ. ಹೌದು. ಸ್ಟಾರ್ ಪಟ್ಟಕ್ಕೇರಿರೋರಿಗೆ. ಸ್ಟಾರ್ ಆಗ್ಬೇಕು ಅಂತಿರೋರಿಗೆ 2019 ನಿರಾಸೆ ಮಾಡಿಲ್ಲ. ಸೂಪರ್ ಸ್ಟಾರ್ಗಳಿಗೆ ಒಂದು ಕಾಲ ಆದ್ರೆ. ಹೊಸ ಪ್ರತಿಭೆಗಳಿಗೆ ಒಂದು ಕಾಲ. ಅದ್ರಲ್ಲೂ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸಿದ ಸುಂದರಿಯರಿಗೆ 2019 ಸುಗ್ಗಿ. ಹಾಗಿದ್ರೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ […]
2019 ಸ್ಟಾರ್ ನಟಿಯರದ್ದೇ ಕರಾಮತ್ತು. ಹೊಸಬರಿಗೂ ಅದೃಷ್ಟ ಕೈ ಹಿಡಿದಿತ್ತು. ಅದ್ರಲ್ಲೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುರಸುಂದರಿಯರಿಗೆ ಈ ವರ್ಷ ಸುಗ್ಗಿಕಾಲ. ಸೂಪರ್ಸ್ಟಾರ್ಗಳಾಗ್ಬೇಕು ಅಂತ ಕನಸು ಹೊತ್ತು ಬಂದವ್ರಿಗೆ ಹೊಸ ಹರುಷ.
ಹೌದು. ಸ್ಟಾರ್ ಪಟ್ಟಕ್ಕೇರಿರೋರಿಗೆ. ಸ್ಟಾರ್ ಆಗ್ಬೇಕು ಅಂತಿರೋರಿಗೆ 2019 ನಿರಾಸೆ ಮಾಡಿಲ್ಲ. ಸೂಪರ್ ಸ್ಟಾರ್ಗಳಿಗೆ ಒಂದು ಕಾಲ ಆದ್ರೆ. ಹೊಸ ಪ್ರತಿಭೆಗಳಿಗೆ ಒಂದು ಕಾಲ. ಅದ್ರಲ್ಲೂ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸಿದ ಸುಂದರಿಯರಿಗೆ 2019 ಸುಗ್ಗಿ. ಹಾಗಿದ್ರೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹೊಸ ನಟಿಯಱರು? ಇವರಲ್ಲಿ ಸೋತಿದ್ಯಾರು? ಗೆದ್ದಿದ್ಯಾರು? ಅನ್ನೋದನ್ನ ಇಲ್ಲಿ ನೋಡಿ
ಸ್ಯಾಂಡಲ್ವುಡ್ನಲ್ಲಿ ಮಿಂಚಿದ ಸುಂದರಿಯರು: ಕಳೆದ ವರ್ಷಕ್ಕೆ ಹೋಲಿಸಿದ್ರೆ 2019 ಸ್ಯಾಂಡಲ್ವುಡ್ ಜಾಗತೀಕ ಮಟ್ಟದಲ್ಲಿ ಮಿಂಚಿದೆ. ಒಂದೇ ವರ್ಷದಲ್ಲಿ ಸೀಮಿತವಾಗಿದ್ದ ತನ್ನ ಮಾರುಕಟ್ಟೆಯನ್ನ ವಿಸ್ತರಿಸಿಕೊಂಡಿದೆ. ಇದೇ ವೇಳೆ ಸ್ಯಾಂಡಲ್ವುಡ್ಗೆ ಹೊಸ ನಟಿಯರು ಲಗ್ಗೆ ಇಟ್ಟಿದ್ದಾರೆ. ಈ ನಟಿಯರೆಲ್ಲ ಸೂಪರ್ಸ್ಟಾರ್ಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಸ್ಟಾರ್ಗಳ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐವರು ನಟಿಯರ ಡಿಟೈಲ್ಸ್ ಇಲ್ಲಿದೆ. ಆದ್ರೆ, ಅದಕ್ಕೂ ಮುನ್ನ ಈ ಐವರು ನಟಿಯರಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಸಂಚಲನ ಸೃಷ್ಟಿಸಿದ್ದೇಗೆ ಅನ್ನೋದನ್ನ ತಿಳೀರಿ.
ಶ್ರೀನಿಧಿ ಶೆಟ್ಟಿ: ಕೆಜಿಎಫ್.. ಸ್ಯಾಂಡಲ್ವುಡ್ನ ಹೆಮ್ಮೆ. ರಾಕಿಂಗ್ ಸ್ಟಾರ್ ಅನ್ನ ನ್ಯಾಷನಲ್ ಸ್ಟಾರ್ ಮಾಡಿದ ಸಿನಿಮಾ. 2018ರ ಡಿಸೆಂಬರ್ ಕೊನೆ ತಿಂಗಳಲ್ಲಿ ಕೆಜಿಎಫ್ ವಿಶ್ವದಾದ್ಯಂತ ಆರ್ಭಟಿಸಿತ್ತು. ಇದೇ ಸಿನಿಮಾದ ಮೂಲಕ ಕನ್ನಡಕ್ಕೆ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿಯ ಆಗಮನವಾಯ್ತು. ಆಕೆಯೇ ಶ್ರೀನಿಧಿ ಶೆಟ್ಟಿ.
2016ರಲ್ಲಿ ಶ್ರೀನಿಧಿ ಶೆಟ್ಟಿ ಮಿಸ್ ದಿವಾ ಸ್ಫರ್ಧೆಯಲ್ಲಿ ಭಾಗವಹಿಸಿದ್ರು. ಈ ಸ್ಪರ್ಧೆಯಲ್ಲಿ ಶ್ರೀನಿಧಿ ಶೆಟ್ಟಿ ಮಿಸ್ ಸೂಪರ್ನ್ಯಾಚುಲರ್ ಆಗಿ ಹೊರಹೊಮ್ಮಿದ್ರು. ಇಲ್ಲಿಂದ ಸಾಕಷ್ಟು ಸಿನಿಮಾ ಆಫರ್ಗಳು ಈಕೆಯನ್ನ ಹುಡ್ಕೊಂಡು ಬಂದಿತ್ತು. ಆದ್ರೆ ಶ್ರೀನಿಧಿ ಕನ್ನಡದ ಕೆಜಿಎಫ್ ಸಿನಿಮಾವನ್ನ ಮಾಡಿಕೊಂಡಿದ್ರು. ಹೀಗಾಗಿ ಮೊದಲ ಸಿನಿಮಾದಲ್ಲೇ ಕನ್ನಡದಲ್ಲಿ ಭರವಸೆ ಮೂಡಿಸಿದ ನಟಿಯರ ಪಟ್ಟಿಯಲ್ಲಿ ಶ್ರೀನಿಧಿ ಶೆಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿ ಅದೃಷ್ಟ ಖುಲಾಯಿಸಿದೆ. ಒಂದ್ಕಡೆ ಕೆಜಿಎಫ್ ಚಾಪ್ಟರ್ ಟು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದ್ಕಡೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ನಟಿಸುತ್ತಿರೋ ಕೋಬ್ರಾ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ 2019 ಶ್ರೀನಿಧಿ ಶೆಟ್ಟಿಗೆ ಮರೆಯಲಾಗದ ವರ್ಷ.
ಶ್ರೀಲೀಲಾ: ಸ್ಮೈಲಿಂಗ್ ಫೇಸು. ಚಾರ್ಮಿಂಗ್ ಕಣ್ಣು. ಪಟಪಟ ಮಾತಾಡೋ ಮಾತಿನಮಲ್ಲಿ. ಎಂತಹ ಪಾತ್ರಕ್ಕೂ ಒಗ್ಗಿಕೊಳ್ಳುವ ಚೆಲುವೆ. ಶ್ರೀಲೀಲಾ. ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿದ್ದ ನಟಿ. ಚೊಚ್ಚಲ ಸಿನಿಮಾ ಮುಗಿಯೋದ್ರೊಳಗೆ ಮತ್ತೊಂದು ಸಿನಿಮಾ ಗಿಟ್ಟಿಸಿಕೊಂಡು ಹುಬ್ಬೇರಿಸಿದ ಚಂದುಳ್ಳಿ ಚೆಲುವೆ. ಪಿಯುಸಿ ಓದುತ್ತಿರುವಾಗ್ಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬ್ಯೂಟಿ.
ಶ್ರೀಲೀಲಾರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಎ.ಪಿ ಅರ್ಜುನ್. ಕಿಸ್ ಸಿನಿಮಾಗಾಗಿ ಎ.ಪಿ ಅರ್ಜುನ್ ಹೊಸಬರ ಹುಡುಕಾಟದಲ್ಲಿದ್ರು. ಆಗ ಅರ್ಜುನ್ ಕಣ್ಣಿಗೆ ಬಿದ್ದಿದ್ದೇ ಶ್ರೀಲೀಲಾ. ಆದ್ರೆ ಕಿಸ್ ಸಿನಿಮಾದ ಚಿತ್ರೀಕರಣ ವಿಳಂಬ ಆಗಿದ್ರಿಂದ ಸಿನಿಮಾ ಬಿಡುಗಡೆನೂ ಮುಂದೂಡಲ್ಪಟ್ಟಿತ್ತು. ಇದೇ ಗ್ಯಾಪ್ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಹೀಗಾಗಿ ಒಂದೇ ವರ್ಷ. ಒಂದು ತಿಂಗಳ ಅಂತರದಲ್ಲಿ ಶ್ರೀಲೀಲಾ ನಟಿಸಿದ ಕಿಸ್ ಹಾಗೂ ಭರಾಟೆ ಎರಡೂ ಸಿನಿಮಾಗಳು ರಿಲೀಸ್ ಆಯ್ತು. ಶ್ರೀಲೀಲಾ ನಟಿಸಿದ ಚೊಚ್ಚಲ ಸಿನಿಮಾ ಬಾಕ್ಸಾಫೀಸ್ನಲ್ಲಿ ಜಾದು ಮಾಡಲಿಲ್ಲ. ಆದ್ರೆ ಎರಡನೇ ಸಿನಿಮಾ ಭರಾಟೆ 12 ಕೋಟಿ ಲಾಭ ಗಳಿಸಿದೆ. ಹೀಗಾಗಿ ಭರಾಟೆ ಮೂಲಕ ಶ್ರೀಲೀಲಾ ಮೊದಲ ಗೆಲುವು ಕಂಡಿದ್ದಾರೆ.
ತಾನ್ಯ ಹೋಪ್: ತಾನ್ಯ ಹೋಪ್. ಕನ್ನಡ ಚಿತ್ರರಂಗದ ಬಸಣ್ಣಿ. ದಾಸನೊಂದಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಮಹಾರಾಣಿ. ಯಜಮಾನನ ಅರಗಿಣಿ. ಯಜಮಾನ. ಈ ವರ್ಷದ ಮೊದಲ ಬ್ಲಾಕ್ಬಸ್ಟರ್ ಸಿನಿಮಾ. ಬಾಕ್ಸಾಫೀಸ್ನಲ್ಲಿ 60 ಕೋಟಿ ದೋಚಿದ ಸಿನಿಮಾ. ಹೀಗಾಗಿ ಯಜಮಾನ ಈ ವರ್ಷ ಗಮನ ಸೆಳೆದ ಮೊದಲ ಕನ್ನಡ ಸಿನಿಮಾ. ಇದೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ತಾನ್ಯ ಹೋಪ್.
ಯಜಮಾನ ಸಿನಿಮಾಗೂ ಮುನ್ನ ತಾನ್ಯ ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ತಾನ್ಯಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಯಜಮಾನ ಸಿನಿಮಾ. ಯಜಮಾನ ಬಿಡುಗಡೆಗೂ ಮುನ್ನ ತಾನ್ಯ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದ್ದಾರೆ. ಉಪ್ಪಿಗೆ ನಾಯಕಿಯಾರಾಗಿದ್ದ ಮೂವರಲ್ಲಿ ತಾನ್ಯ ಕೂಡ ಒಬ್ಬರು. ಆದ್ರೆ, ಹೋಮ್ ಮಿನಿಸ್ಟರ್ ಬಿಡುಗಡೆಗೂ ಮುನ್ನವೇ ತಾನ್ಯ ನಟಿಸಿದ ಯಜಮಾನ, ಅಮರ್ ಹಾಗೂ ಉದ್ಘರ್ಷ ಚಿತ್ರಗಳು ಬಿಡುಗಡೆಯಾಗಿವೆ. ಅದ್ರಲ್ಲೂ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿನಯದ ಮೊದಲ ಸಿನಿಮಾ ಅಮರ್ಗೂ ನಾಯಕಿಯಾಗಿದ್ದರು.
ತಾನ್ಯ ಹೋಪ್.. ಯಜಮಾನ, ಅಮರ್ ಹಾಗೂ ಉದ್ಘರ್ಷ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಈ ಮೂರು ಸಿನಿಮಾಗಳಲ್ಲಿ ದರ್ಶನ್ ಜೊತೆ ನಟಿಸಿದ ಯಜಮಾನ ಬಿಟ್ರೆ ಉಳಿದೆರಡು ಚಿತ್ರಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ಆದ್ರೂ ತಾನ್ಯಾ ಕನ್ನಡದಲ್ಲಿ ಚಿತ್ರರಂಗದಲ್ಲಿ ಹೊಸ ಭರವಸೆ ಸೃಷ್ಟಿಸಿದ್ದಾರೆ.
ಸನಾ ತಿಮ್ಮಯ್ಯ: ಸನಾ ತಿಮ್ಮಯ್ಯ.. ಒಡೆಯನ ಅರಗಿಣಿ.. ಕೊಡಗಿನ ಕುವರಿ.. ಸ್ಯಾಂಡಲ್ವುಡ್ಗೆ ಸ್ಟಾರ್ ಎಂಟ್ರಿಕೊಟ್ಟ ಸುಂದರಿ. ಸನಾ ತಿಮ್ಮಯ್ಯ ಸಿನಿಮಾಗೆ ಕಾಲಿಡೋಕೂ ಮುನ್ನ ಮಾಡಲಿಂಗ್ನಲ್ಲಿ ಬ್ಯುಸಿಯಾಗಿದ್ರು. ಮಾಡಲ್ ಆಗಿದ್ರೂ ದರ್ಶನ್ ಅಂತಹ ಸ್ಟಾರ್ ನಟನ ಜೊತೆ ನಟಿಸ್ತೀನಿ ಅನ್ನೋದು ಗೊತ್ತಿರ್ಲಿಲ್ಲ. ಆದ್ರೆ ಸಿನಿಮಾಗಳಿಗೆ ನಾಯಕಿಯಾಗ್ಬೇಕು ಅನ್ನೋ ಆಸೆ ಇದ್ದೇ ಇತ್ತು. ಇದೇ ವೇಳೆ ದರ್ಶನ್ 52ನೇ ಸಿನಿಮಾ ಒಡೆಯ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತು.
ಒಡೆಯನಿಗೆ ಮತ್ತೊಂದು ಹೊಸ ಪ್ರತಿಭೆ. ಅಸಲಿಗೆ ಮಾಡಲ್ ಆಗಿರೋ ಸನಾಗೆ ದರ್ಶನ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಸನಾ ತಿಮ್ಮಯ್ಯಗೆ ಒಡೆಯ ಸಿನಿಮಾ ಸಿಗಲು ಕಾರಣ ದರ್ಶನ್ ತಾಯಿ ಮೀನಾ ತೂಗುದೀಪ. ಮೀನಾ ತೂಗುದೀಪ ಅವರ ಸಲಹೆಯ ಮೇರೆಗೆ ಸನಾ ತಿಮ್ಮಯ್ಯ ಒಡೆಯ ಚಿತ್ರಕ್ಕೆ ಆಯ್ಕೆ ಆಗಿದ್ದರು. ಈಗ ಒಡೆಯ ರಾಜ್ಯಾದ್ಯಂತ ತೆರೆಕಂಡಿದೆ. ಹೀಗಾಗಿ ಸನಾ ಮೇಲೆ ಸ್ಯಾಂಡಲ್ವುಡ್ ಮಂದಿ ಕಣ್ಣಿಟ್ಟಿದ್ದಾರೆ.
ಶ್ರುತಿ ಪ್ರಕಾಶ್: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಶ್ರುತಿ ಪ್ರಕಾಶ್. ಈ ವರ್ಷ ಶ್ರುತಿ ಪ್ರಕಾಶ್ ಲಂಡನ್ನಲ್ಲಿ ಲಂಬೋಧರ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಎಂಟ್ರಿಕೊಟ್ಟಿದ್ರು. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ನಟಿಸಿದ್ದರು. ಹೀಗಾಗಿ ಲಂಡನ್ನಲ್ಲಿ ಲಂಬೋಧರ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಭರವಸೆ ಮೂಡಿಸಿದ್ರೂ, ಬಾಕ್ಸಾಫೀಸ್ನಲ್ಲಿ ಜಾದು ಮಾಡ್ಲಿಲ್ಲ.
ಲಂಡನ್ನಲ್ಲಿ ಲಂಭೋಧರ ಸಿನಿಮಾ ಗೆಲ್ಲದೇ ಹೋದ್ರೂ, ಶ್ರುತಿ ಪ್ರಕಾಶ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಶ್ರುತಿ ಪ್ರಕಾಶ್ ಈಗ ಕನ್ನಡದ ನಾಲ್ಕು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ 2020ರಲ್ಲಿ ಶ್ರುತಿ ಪ್ರಕಾಶ್ ಸ್ಯಾಂಡಲ್ವುಡ್ನ ಭರವಸೆಯ ನಟಿ ಆಗಿ ಹೊರಹೊಮ್ಮೋದ್ರಲ್ಲಿ ಅನುಮಾನವಿಲ್ಲ.
Published On - 11:38 am, Mon, 30 December 19