‘ಯಾವನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೆ ಚೆನ್ನಾಗಿರಲ್ಲ’: ಚುನಾವಣಾ ರಿಸಲ್ಟ್ ಬಳಿಕ ಉಪೇಂದ್ರ ಖಡಕ್​ ಮಾತು

ಆಂಧ್ರ ಪ್ರದೇಶದಲ್ಲಿ ಪವನ್​ ಕಲ್ಯಾಣ್​ ಅವರು ಚುನಾವಣೆ ಗೆದ್ದಿದ್ದಾರೆ. ಇದನ್ನು ಮುಂದಿಟ್ಟುಕೊಂಡು ನೆಟ್ಟಿಗರು ಉಪೇಂದ್ರ ಅವರ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ‘ಕನ್ನಡಿಗರು ಉಪೇಂದ್ರರನ್ನು ಗೆಲ್ಲಿಸೋದು ಯಾವಾಗ?’ ಅಂತ ಟ್ರೋಲ್​ ಪುಟದಲ್ಲಿ ಪ್ರಶ್ನೆ ಮಾಡಲಾಗಿದೆ. ಇದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಉಪೇಂದ್ರ ಅವರು ಈ ರೀತಿ ಹೇಳಿದ್ದಾರೆ.

‘ಯಾವನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೆ ಚೆನ್ನಾಗಿರಲ್ಲ’: ಚುನಾವಣಾ ರಿಸಲ್ಟ್ ಬಳಿಕ ಉಪೇಂದ್ರ ಖಡಕ್​ ಮಾತು
ಉಪೇಂದ್ರ
Follow us
ಮದನ್​ ಕುಮಾರ್​
|

Updated on: Jun 06, 2024 | 3:30 PM

‘ರಿಯಲ್​ ಸ್ಟಾರ್​’ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷದ (Uttama Prajakeeya Party) ಮೂಲಕ ರಾಜಕೀಯದ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೂಕ್ತ ಜನಬೆಂಬಲ ಸಿಕ್ಕಿಲ್ಲ. ಅತ್ತ, ಆಂಧ್ರ ಪ್ರದೇಶ ಚುನಾವಣೆಯಲ್ಲಿ ಕೆಲವು ಸೆಲೆಬ್ರಿಟಿಗಳು ಗೆಲುವು ಕಂಡಿದ್ದಾರೆ. ನಟ ಪವನ್ ಕಲ್ಯಾಣ್ (Pawan Kalyan)​ ಅವರು ಜಯಭೇರಿ ಬಾರಿಸಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಕೆಲವು ನೆಟ್ಟಿಗರು ಉಪೇಂದ್ರ ಅವರಿಗೆ ಹೋಲಿಗೆ ಮಾಡಿದ್ದಾರೆ. ಈ ಪೋಸ್ಟ್​ಗೆ ಸಂಬಂಧಿಸಿದಂತೆ ಉಪೇಂದ್ರ (Upendra) ಪ್ರತಿಕ್ರಿಯೆ ನೀಡಿದ್ದಾರೆ. ಅವರ ಬರಹ ಎಲ್ಲರ ಗಮನ ಸೆಳೆಯುತ್ತಿದೆ. ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಪವನ್​ ಕಲ್ಯಾಣ್​ ಅವರನ್ನು ಗೆಲ್ಲಿಸಲು ತೆಲುಗು ಜನ 14 ವರ್ಷ ತೆಗೆದುಕೊಂಡರು. ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ’ ಎಂದು ಟ್ರೋಲ್​ ಪುಟದವರ ಪೋಸ್ಟ್​ ಮಾಡಿದ್ದನ್ನು ಉಪೇಂದ್ರ ಹಂಚಿಕೊಂಡಿದ್ದಾರೆ. ಜನರ ಈ ಮಾತಿಗೆ ತಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ಅವರು ಕ್ಯಾಪ್ಷನ್​ ಮೂಲಕ ತಿಳಿಸಿದ್ದಾರೆ.

‘ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್.. ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂಥಾ ನಿಸ್ವಾರ್ಥ! ಎಂಥಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ. ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ’ ಎಂದು ಬರೆದುಕೊಂಡಿದ್ದಾರೆ ಉಪೇಂದ್ರ.

ಇದನ್ನೂ ಓದಿ: ‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ

‘ನೆಕ್ಸ್ಟ್ ಎಲೆಕ್ಷನ್​ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ ನೀವ್ ಎಮೋಷನಲ್ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡ್ರಿ. ಕಷ್ಟ ಪಡ್ರಿ. ಆಮೇಲೆ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲ್ಲರಪ್ಪೋ. ಈ ದಡ್ ನನ್ ಮಗಂಗೇ ಯಾವೋನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲ’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.