ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ; ವೆಡ್ಡಿಂಗ್ ಆ್ಯನಿವರ್ಸರಿ ದಿನವೇ ಸಿಹಿ ಸುದ್ದಿ
ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅವರು ತಾಯಿ ಆಗಿದ್ದಾರೆ. ಮೊದಲ ಮಗುವಿಗೆ ಅವರು ಜನ್ಮ ನೀಡಿದ್ದಾರೆ. ಇಂದು (ಜನವರಿ 26) ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ದಂಪತಿ ಕಡೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಇವರ ಮನೆಗೆ ಹೊಸ ಸದಸ್ಯನ ಆಗಮನ ಆಗಿದೆ. ಹರಿಪ್ರಿಯಾ ಅವರು ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ಆಗಮನದಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ ಆಗಿರುವ ಹರಿಪ್ರಿಯಾ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಿಯಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಈ ಖುಷಿಯ ಸುದ್ದಿಯನ್ನು ವಸಿಷ್ಠ ಸಿಂಹ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಆ ಮೂಲಕ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ.
View this post on Instagram
ವಿಶೇಷ ಏನೆಂದರೆ, ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನಾಂಕದಲ್ಲೇ ಗಂಡು ಮಗು ಜನಿಸಿದೆ. ಹೌದು, ಈ ಜೋಡಿಯ ಮದುವೆ ನೆರವೇರಿದ್ದು 2023ರ ಜನವರಿ 26ರಂದು. ಸರಿಯಾಗಿ 2 ವರ್ಷದ ಬಳಿಕ, ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನ ಆಗಿದೆ. ‘ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ’ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ರೆಸಾರ್ಟ್ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಪರಸ್ಪರ ಪ್ರೀತಿಸಿ ಮದುವೆ ಆದವರು. ಚಿತ್ರರಂಗದಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಹರಿಪ್ರಿಯಾ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡಿದರು. ಪ್ರೆಗ್ನೆಂಟ್ ಎಂಬುದು ತಿಳಿದ ನಂತರ ಅವರು ಸಿನಿಮಾ ಕೆಲಸಗಳಿಂದ ಅಂತರ ಕಾಪಾಡಿಕೊಂಡರು. ಚಿತ್ರರಂಗದಲ್ಲಿ ಅವರಿಗೆ ತುಂಬ ಬೇಡಿಕೆ ಇದೆ. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಹರಿಪ್ರಿಯಾ ಫೇಮಸ್ ಆಗಿದ್ದಾರೆ. ಅದೇ ರೀತಿ, ವಸಿಷ್ಠ ಸಿಂಹ ಕೂಡ ತುಂಬ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Sun, 26 January 25