AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನ್​ಲಾಕ್ ರಾಘವ’ ಸಿನಿಮಾ ಟ್ರೇಲರ್ ನೋಡಿ ಶುಭ ಹಾರೈಸಿದ ಸೆಲೆಬ್ರಿಟಿಗಳು

ಫೆಬ್ರವರಿ 7ರಂದು ‘ಅನ್​ಲಾಕ್ ರಾಘವ’ ಸಿನಿಮಾ ಬಿಡುಗಡೆ ಆಗುತ್ತಿದೆ. ಟ್ರೇಲರ್​ ಮೂಲಕ ಈ ಸಿನಿಮಾ ಕೌತುಕ ಮೂಡಿಸಿದೆ. ಟ್ರೇಲರ್​ ನೋಡಿದ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ. ‘ಆ್ಯಕ್ಷನ್​ ಪ್ರಿನ್ಸ್’ ಧ್ರುವ ಸರ್ಜಾ, ಖ್ಯಾತ ನಟ ಕೋಮಲ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಹಲವರು ಈ ಸಿನಿಮಾಗೆ ವಿಶ್ ಮಾಡಿದ್ದಾರೆ.

‘ಅನ್​ಲಾಕ್ ರಾಘವ’ ಸಿನಿಮಾ ಟ್ರೇಲರ್ ನೋಡಿ ಶುಭ ಹಾರೈಸಿದ ಸೆಲೆಬ್ರಿಟಿಗಳು
Dhruva Sarja, Milind Gautham
ಮದನ್​ ಕುಮಾರ್​
| Edited By: |

Updated on:Jan 28, 2025 | 11:00 AM

Share

ಹೊಸ ಹೀರೋ ಮಿಲಿಂದ್ ಗೌತಮ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮೊದಲ ಪ್ರಾಜೆಕ್ಟ್​ನಲ್ಲೇ ಅವರು ಡಿಫರೆಂಟ್ ಕಥೆ ಇರುವ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, ಮಿಲಿಂದ್ ಗೌತಮ್ ನಟಿಸಿರುವ ‘ಅನ್​ಲಾಕ್ ರಾಘವ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಿದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಕೂಡ ಈ ಸಿನಿಮಾದ ಟ್ರೇಲರ್​ ಬಗ್ಗೆ ಮಾತನಾಡುತ್ತಿದ್ದಾರೆ. ಕೋಮಲ್ ಕುಮಾರ್, ಧ್ರುವ ಸರ್ಜಾ ಮುಂತಾದವರು ‘ಅನ್​ಲಾಕ್ ರಾಘವ’ ಟ್ರೇಲರ್​ ಕಂಡು ಭೇಷ್ ಎಂದಿದ್ದಾರೆ.

‘ಮಯೂರ ಮೋಷನ್ ಪಿಕ್ಚರ್ಸ್​’ ಮೂಲಕ ‘ಅನ್​ಲಾಕ್ ರಾಘವ’ ಸಿನಿಮಾ ನಿರ್ಮಾಣ ಆಗಿದೆ. ಮಂಜುನಾಥ ಡಿ. ಹಾಗೂ ಗಿರೀಶ್ ಕುಮಾರ್​ ಅವರು ಬಂಡವಾಳ ಹೂಡಿದ್ದಾರೆ. ದೀಪಕ್ ಮಧುವನಹಳ್ಳಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 7ರಂದು ಈ ಸಿನಿಮಾ ತೆರೆಕಾಣಲಿದೆ. ಈಗ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.

‘ಅನ್​ಲಾಕ್ ರಾಘವ’ ಸಿನಿಮಾದಲ್ಲಿ ಮಿಲಿಂದ್ ಗೌತಮ್ ಅವರಿಗೆ ಜೋಡಿಯಾಗಿ ರೇಚಲ್ ಡೇವಿಡ್ ಅವರು ನಟಿಸಿದ್ದಾರೆ. ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಗಮನ ಸೆಳೆದಿದ್ದ ರೇಚಲ್ ಅವರು ಈಗ ‘ಅನ್​ಲಾಕ್ ರಾಘವ’ ಚಿತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ. ಸಿನಿಮಾ ಕಥೆ ಏನು ಎಂಬುದರ ಸುಳಿವನ್ನು ಟ್ರೇಲರ್​ನಲ್ಲಿ ನೀಡಲಾಗಿದೆ. ಈ ಟ್ರೇಲರ್​ ನೋಡಿ ಕೋಮಲ್, ಧ್ರುವ ಸರ್ಜಾ, ರಾಮಲಿಂಗ ರೆಡ್ಡಿ ಮುಂತಾದವರು ಮೆಚ್ಚಿಕೊಂಡಿದ್ದಾರೆ.

‘ಅನ್​ಲಾಕ್ ರಾಘವ’ ಟ್ರೇಲರ್​:

‘ಮಿಲಿಂದ್ ಅವರು ಹೊಸದಾಗಿ ಪರಿಚಯ ಆಗುತ್ತಿದ್ದಾರೆ. ಈ ಸಿನಿಮಾವನ್ನು ನೋಡುವ ಮೂಲಕ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ’ ಎಂದು ಕೋಮಲ್ ಹೇಳಿದ್ದಾರೆ. ‘ಒಳ್ಳೆಯ ಟ್ರೇಲರ್​ ನೋಡಿದೆ. ಇದರಲ್ಲಿ ವಿಶೇಷವಾದ ಐಡಿಯಾ ಇದೆ. ಹೊಸ ಕಲಾವಿದರ ಜೊತೆ ಸಾಕಷ್ಟು ಹಿರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇಡೀ ತಂಡಕ್ಕೆ ಆಲ್​ ದ ಬೆಸ್ಟ್​’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇದನ್ನೂ ಓದಿ: ‘ನನಗೇ ಅವಾರ್ಡ್ ಸಿಕ್ಕಷ್ಟು ಖುಷಿ ಇದೆ’; ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್​ ನೆನೆದ ಸುದೀಪ್

ಈ ಸಿನಿಮಾದ ಟ್ರೇಲರ್​ನಲ್ಲಿ ಆ್ಯಕ್ಷನ್​, ಥ್ರಿಲ್ಲರ್​, ಕಾಮಿಡಿ, ಲವ್​ಸ್ಟೋರಿಯ ಝಲಕ್ ಕಾಣಿಸಿದೆ. ಆ್ಯಕ್ಷನ್ ಮೂಲಕ ಮಿಲಿಂದ್ ಗಮನ ಸೆಳೆಯುತ್ತಿದ್ದಾರೆ. ಮನರಂಜನೆಯ ಪೂರ್ತಿ ಪ್ಯಾಕೇಜ್ ಹೇಗಿದೆ ತಿಳಿಯಲು ಫೆಬ್ರವರಿ 7ರಂದು ಸಿನಿಮಾ ನೋಡಬೇಕು. ಶೋಭರಾಜ್, ಅವಿನಾಶ್, ಸಾಧುಕೋಕಿಲ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:05 pm, Mon, 27 January 25

Follow Us
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ