ಕರಿಕಲ್ಲಮ್ಮ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಆಪ್ತರಾಗಿದ್ದ ಧನ್ವೀರ್ ನಡುವೆ ಬಿರುಕು ಮೂಡಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮತ್ತು ದರ್ಶನ್ ಕಡೆಯವರು ಹಲವು ದೂರುಗಳನ್ನು ದಾಖಲಿಸಿದ್ದಾರೆ. ದರ್ಶನ್ ಅಂತೂ ಧನ್ವೀರ್ ಅವರು ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಹೆಸರನ್ನು ಎಲ್ಲಿಯೂ ಬಳಸದಂತೆ ನಿರ್ಬಂಧಕಾಜ್ಞೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಚಾಲ್ತಿಯಲ್ಲಿರುವಾಗ ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷವಾದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಕರಿಕಲ್ಲಮ್ಮ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
Vijayalakshmi Darshan

Updated on: Nov 03, 2026 | 6:33 PM

ಮುಖ್ಯಾಂಶಗಳು

  • ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ
  • ತುಮಕೂರಿನ ಕರಿಕಾಲಮ್ಮ ದೇವಾಲಯಕ್ಕೆ ಭೇಟಿ ನಿಡಿದ ವಿಜಯಲಕ್ಷ್ಮಿ
  • ಪತಿ ದರ್ಶನ್​ ಬಿಡುಗಡೆಗೆ ಪ್ರಾರ್ಥನೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಲು ಬಿರುಸಿನಿಂದ ನಡೆಯುತ್ತಿದೆ. ಆರೋಪಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾದ ಬಳಿಕವಂತೂ ಪ್ರಕರಣಕ್ಕೆ ದೊಡ್ಡ ಮಟ್ಟದ ತಿರುವು ಬಂದಿದೆ. ಸಾಕ್ಷ್ಯಗಳ ವಿಚಾರಣೆ ಚಾಲ್ತಿಯಲ್ಲಿದೆ. ಇದರ ನಡುವೆ ಇತ್ತೀಚೆಗಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಆಪ್ತರಾಗಿದ್ದ ಧನ್ವೀರ್ ನಡುವೆ ಬಿರುಕು ಮೂಡಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮತ್ತು ದರ್ಶನ್ ಕಡೆಯವರು ಹಲವು ದೂರುಗಳನ್ನು ದಾಖಲಿಸಿದ್ದಾರೆ. ದರ್ಶನ್ ಅಂತೂ ಧನ್ವೀರ್ ಅವರು ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಹೆಸರನ್ನು ಎಲ್ಲಿಯೂ ಬಳಸದಂತೆ ನಿರ್ಬಂಧಕಾಜ್ಞೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಚಾಲ್ತಿಯಲ್ಲಿರುವಾಗ ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷವಾದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದ ಶ್ರೀ ಕರಿಕಲ್ಲಮ್ಮ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಅವರು ಭೇಟಿ ನೀಡಿದ್ದಾರೆ. ದರ್ಶನ್ ಅವರ ಆರೋಗ್ಯ ಸುಧಾರಣೆ, ಪ್ರಕರಣದಿಂದ ಬಿಡುಗಡೆ, ಸಂಕಷ್ಟಗಳಿಂದ ದೂರ ಸೇರಿದಂತೆ ಹಲವು ವಿಷಯಗಳಿಗಾಗಿ ವಿಜಯಲಕ್ಷ್ಮಿ ಅವರು ಇಲ್ಲಿ ವಿಶೇಷ ಹರಕೆ ಹೊತ್ತಿದ್ದಾರೆ ಎನ್ನಲಾಗುತ್ತಿದೆ. ವಿಜಯಲಕ್ಷ್ಮಿ ಅವರು ಈ ಹಿಂದೆಯೂ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದೀಗ ಕರಿಕಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್

ಕರಿಕಲ್ಲಮ್ಮ ದೇವಿಯು, ಬೇಡಿದ ವರವನ್ನು ಕೊಡುವ ದೇವತೆ ಎಂಬ ಪ್ರತೀತಿ ಇದೆ. ಕಠಿಣ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಅಥವಾ ಕಾನೂನು ಸಂಕಷ್ಟಗಳು ಎದುರಾದಾಗ ದೇವಿಯ ಸನ್ನಿಧಿಗೆ ಬಂದು ಹರಕೆ ಹೊತ್ತರೆ ಅವು ಶೀಘ್ರವಾಗಿ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಇದೀಗ ವಿಜಯಲಕ್ಷ್ಮಿ ಅವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರು ದೇವಾಲಯಕ್ಕೆ ಬಂದಾಗ ಹಲವಾರು ಮಂದಿ ಅವರನ್ನು ಕಾಣಲು ದೇವಾಲಯದಲ್ಲಿ ನೆರೆದಿದ್ದರು. ಈ ವೇಳೆ ದರ್ಶನ್ ಪರವಾಗಿ ಕೆಲವರು ಘೋಷಣೆಗಳನ್ನು ಸಹ ಕೂಗಿದರು. ವಿಜಯಲಕ್ಷ್ಮಿ ಅವರು ಈ ಹಿಂದೆಯೂ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಹೊರರಾಜ್ಯದ ದೇವಾಲಯಗಳಿಗೂ ಸಹ ಅವರು ಭೇಟಿ ನೀಡಿ ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ. ದರ್ಶನ್​​ಗೆ ಜಾಮೀನು ಸಿಕ್ಕಿ ಹೊರಬಂದಿದ್ದಾಗ, ಇಬ್ಬರೂ ಒಟ್ಟಿಗೆ ಕೆಲ ದೇವಾಲಯಗಳಿಗೆ ಭೇಟಿ ನೀಡಿದ್ದರು. ದರ್ಶನ್ ಅವರು ಕೇರಳದ ಒಂದು ವಿಶೇಷ ದೇವಾಲಯಕ್ಕೂ ಸಹ ಹೋಗಿ ಬಂದಿದ್ದರು.

Vijayalakshmi Visit: ದರ್ಶನ್​ಗೋಸ್ಕರ ಹರಕೆ ಹೊತ್ತ ವಿಜಯಲಕ್ಷ್ಮೀಗೆ ಕರಿಕಲ್ಲಮ್ಮ ದೇವಿ ಆಶೀರ್ವದಿಸಿದ ರೀತಿ ನೋಡಿ

ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದು, ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ನಟ ದರ್ಶನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಸಹ ದರ್ಶನ್ ಅವರು ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೀಗ ಮತ್ತೆ ಅವರು ಬೆನ್ನು ನೋವು ಬಂದಿರುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Tue, 3 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us