ವಿಜಯಲಕ್ಷ್ಮಿ ಟೆಂಪಲ್ ರನ್: ಬಳ್ಳಾರಿಯ ವಿಶೇಷ ದೇವಾಲಯಕ್ಕೆ ಭೇಟಿ

ವಿಜಯಲಕ್ಷ್ಮಿ ಅವರು ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ದೇವಿಗೆ ಉಡಿ ತುಂಬುವ ಕಾರ್ಯ ಮಾಡಿದ್ದಾರೆ. ದೇವಾಲಯಕ್ಕೆ ಹರಕೆಯೊಂದನ್ನು ವಿಜಯಲಕ್ಷ್ಮಿ ದರ್ಶನ್ ತೀರಿಸಿದ್ದಾರೆ. ವಿಜಯಲಕ್ಷ್ಮಿ ಅವರು ದೇವಾಲಯದ ಪೂಜೆ ಮುಗಿಸಿ, ಬೆಂಗಳೂರಿಗೆ ಮರಳಿದ್ದಾರೆ. ವಿಜಯಲಕ್ಷ್ಮಿ ಅವರು ವಿಶೇಷ ಪೂಜೆ ಮಾಡಿಸುತ್ತಿರುವ ಫೋಟೊಗಳು, ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ.

ವಿಜಯಲಕ್ಷ್ಮಿ ಟೆಂಪಲ್ ರನ್: ಬಳ್ಳಾರಿಯ ವಿಶೇಷ ದೇವಾಲಯಕ್ಕೆ ಭೇಟಿ
Vijayalakshmi Darshan

Updated on: Nov 29, 2026 | 10:09 PM

ಮುಖ್ಯಾಂಶಗಳು

  • ವಿಜಯಲಕ್ಷ್ಮಿ ದರ್ಶನ್ ಟೆಂಪಲ್ ರನ್
  • ಬಳ್ಳಾರಿಯ ಕನಕದುರ್ಗಮ್ಮ ದೇವಾಲಯಕ್ಕೆ ಭೇಟಿ
  • ವಿಶೇಷ ಮಹತ್ವ ಉಳ್ಳ ದೇವಾಲಯ ಅದು

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಜಾರಿಯಲ್ಲಿದೆ. ಇದರ ನಡುವೆ ನಟ ದರ್ಶನ್​​ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಜೈಲಿನ ಹೊರಗೆ ಚಿಕಿತ್ಸೆ ಪಡೆದುಕೊಳ್ಳಲು ದರ್ಶನ್ ಇಚ್ಛಿಸಿದ್ದಾರೆ. ಆದರೆ ನ್ಯಾಯಾಲಯವು ದರ್ಶನ್ ಕೋರಿಕೆಯನ್ನು ಪೂರ್ಣವಾಗಿ ಒಪ್ಪಿಲ್ಲ. ತೀರ ಅಗತ್ಯ ಬಿದ್ದರಷ್ಟೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್ ಪಡೆಯಬಹುದಾಗಿದೆ. ದರ್ಶನ್, ಜೈಲಿನ ಒಳಗೆ ನೋವಿನೊಟ್ಟಿಗೆ ಹೋರಾಡುತ್ತಿದ್ದಾರೆ. ಹೊರಗೆ, ದರ್ಶನ್​ ಯೋಗಕ್ಷೇಮ, ಬಿಡುಗಡೆಯನ್ನು ಪ್ರಾರ್ಥಿಸಿ ವಿಜಯಲಕ್ಷ್ಮಿ ಅವರು ತಮ್ಮ ಟೆಂಪಲ್ ರನ್ ಮುಂದುವರೆಸಿದ್ದಾರೆ.

ವಿಜಯಲಕ್ಷ್ಮಿ ಅವರು ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ದೇವಿಗೆ ಉಡಿ ತುಂಬುವ ಕಾರ್ಯ ಮಾಡಿದ್ದಾರೆ. ದೇವಾಲಯಕ್ಕೆ ಹರಕೆಯೊಂದನ್ನು ವಿಜಯಲಕ್ಷ್ಮಿ ದರ್ಶನ್ ತೀರಿಸಿದ್ದಾರೆ. ವಿಜಯಲಕ್ಷ್ಮಿ ಅವರು ದೇವಾಲಯದ ಪೂಜೆ ಮುಗಿಸಿ, ಬೆಂಗಳೂರಿಗೆ ಮರಳಿದ್ದಾರೆ. ವಿಜಯಲಕ್ಷ್ಮಿ ಅವರು ವಿಶೇಷ ಪೂಜೆ ಮಾಡಿಸುತ್ತಿರುವ ಫೋಟೊಗಳು, ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ.

Loading...

ವಿಜಯಲಕ್ಷ್ಮಿ ದರ್ಶನ್ ಅವರು ಇತ್ತೀಚೆಗಷ್ಟೆ ಚೌಳಿಹಳ್ಳಿಯ ಕರಿಕಲ್ಲಮ್ಮ ದೇವಾಲಯಕ್ಕೆ ಸಹ ಭೇಟಿ ನೀಡಿದ್ದರು. ಅಲ್ಲಿಯೂ ಸಹ ವಿಜಯಲಕ್ಷ್ಮಿ ಅವರು ವಿಶೇಷ ಪೂಜೆ ಮಾಡಿಸಿದ್ದರು. ಆ ಸಮಯದಲ್ಲಿ ದೇವಿಯ ಪೂರ್ತಿ ವಿಜಯಲಕ್ಷ್ಮಿ ಸುತ್ತ ಸುತ್ತಿ ಆಶೀರ್ವಾದ ಮಾಡಿತ್ತು. ಅದಕ್ಕೂ ಹಿಂದೆ ವಿಜಯಲಕ್ಷ್ಮಿ ಅವರು ಆನೆಕಲ್​​ನ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದು ಮಾತ್ರವೇ ಅಲ್ಲದೆ ರಾಜ್ಯ ಮತ್ತು ಬೇರೆ ರಾಜ್ಯಗಳ ಹಲವಾರು ದೇವಾಲಯಗಳಿಗೆ ವಿಜಯಲಕ್ಷ್ಮಿ ದರ್ಶನ್ ಅವರು ಭೇಟಿ ನೀಡುತ್ತಲ್ಲೇ ಇದ್ದಾರೆ. ದರ್ಗಾಕ್ಕೆ ಸಹ ಭೇಟಿ ನೀಡಿದ್ದರು. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಂಧನ ಆದಾಗಿನಿಂದಲೂ ವಿಜಯಲಕ್ಷ್ಮಿ ಅವರು ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಪ್ರದೋಶ್​​ ಜಾಮೀನು ಅರ್ಜಿ ವಜಾ

ಇದೀಗ ಭೇಟಿ ನೀಡಿರುವ ಕನಕ ದುರ್ಗಮ್ಮ ದೇವಾಲಯಕ್ಕೆ ವಿಶೇಷ ಮಹತ್ವ ಇದೆ. ಹಾವಿನ ಹುತ್ತದಲ್ಲಿ ಉದ್ಭವವಾದ ಶಕ್ತಿ ದೇವತೆ ಎಂಬ ನಂಬಿಕೆಯಿದೆ. ಉದ್ಬವ ಮೂರ್ತಿಯ ಬೆನ್ನಿಗೆ ಹತ್ತು ಕಣ್ಣುಗಳಿಂದ ಅಲಂಕಾರ ಮಾಡಿ ಪೂಜೆ ಮತ್ತು ದರ್ಶನ ಮಾಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us