Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ?

ಸಣ್ಣ ವಯಸ್ಸಿನಲ್ಲೇ ಬೇಬಿ ಶಾಮಿಲಿ ಅವರು ರಾಷ್ಟ್ರಪ್ರಶಸ್ತಿ ಬಾಚಿಕೊಂಡರು. ಬಾಲ ಕಲಾವಿದೆಯಾಗಿದ್ದಾಗ ಸಿಕ್ಕ ಬೇಡಿಕೆ ಅವರಿಗೆ ನಾಯಕಿ ಆದ ಬಳಿಕ ಸಿಗಲಿಲ್ಲ. ಈಗ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಇದ್ದಾರೆ. ಈಗ ಅವರಿಗೆ 36 ವರ್ಷ ವಯಸ್ಸು. ಅವರು ಈಗ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ?
ಬೇಬಿ ಶಾಮಿಲಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Feb 17, 2024 | 9:52 AM

ಬೇಬಿ ಶಾಮಿಲಿ (Baby Shamili) ಹೆಸರು ಬಹುತೇಕ ಎಲ್ಲರಿಗೂ ಚಿರಪರಿಚಿತ. 90ರ ದಶಕದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಶಾಮಿಲಿ. ಬಾಲ ಕಲಾವಿದೆಯಾಗಿ ಅವರು ಮಾಡಿದ ಮೋಡಿ ತುಂಬಾನೇ ದೊಡ್ಡದು. ಅವರು ಹುಟ್ಟಿದ್ದು 1987ರ ಜುಲೈ 10ರಂದು. ಅವರು ಜನಿಸಿದ್ದು ತಮಿಳುನಾಡಿನಲ್ಲಿ. ನಂತರ 1989ರಲ್ಲಿ ಅಂದರೆ ಎರಡೇ ವರ್ಷಕ್ಕೆ ‘ರಾಜನದೈ’ ಸಿನಿಮಾದಲ್ಲಿ ನಟಿಸಿದರು. 1990ರಲ್ಲಿ ಬೇಬಿ ಶಾಮಿಲಿ ಅವರು ‘ಅಂಜಲಿ’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾದ ನಟನೆಗೆ ರಾಷ್ಟ್ರ (National Film Award) ಹಾಗೂ ತಮಿಳುನಾಡು ರಾಜ್ಯ ಪ್ರಶಸ್ತಿ ಸಿಕ್ಕಿತು. ಅದೇ ವರ್ಷ ರಿಲೀಸ್ ಆದ ಮಲಯಾಳಂನ ‘ಮಲೂಟ್ಟಿ’ ಚಿತ್ರಕ್ಕೆ ಕೇರಳ ರಾಜ್ಯ ಪ್ರಶಸ್ತಿ ಸಿಕ್ಕಿತು. ಅದೇ ವರ್ಷ ಕನ್ನಡದ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ (State Award)  ಲಭಿಸಿತು. ಒಂದೇ ವರ್ಷ ಮೂರು ರಾಜ್ಯ ಹಾಗೂ ಒಂದು ರಾಷ್ಟ್ರ ಪ್ರಶಸ್ತಿ ಗಳಿಸಿ ಮಿಂಚಿದರು ಅವರು.

‘ಭೈರವಿ’, ‘ಪೋಲಿಸ್ ಲಾಕಪ್’, ‘ಕಾದಂಬರಿ’, ಹೂವು ಹಣ್ಣು ಮೊದಲಾದ ಕನ್ನಡದ ಚಿತ್ರಗಳಲ್ಲಿ ಅವರು ನಟಿಸಿದರು. 2000ನೇ ಇಸವಿವರೆಗೆ ಬಾಲ ಕಲಾವಿದೆಯಾಗಿ ಮಿಂಚಿದರು. ನಂತರ ಅವರು ನಾಯಕಿ ಆಗಬೇಕು ಎಂದು ಕನಸು ಕಂಡರು. 9 ವರ್ಷ ಗ್ಯಾಪ್ ಕೊಟ್ಟು ಅಂದರೆ 2009ರಲ್ಲಿ ತೆಲುಗಿನ ‘ಒಯೇ’ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡರು. ಬಾಲ ಕಲಾವಿದೆಯಾಗಿ ಅವರನ್ನು ನೋಡಿದ್ದಕ್ಕೂ ನಾಯಕಿ ಆಗಿ ಅವರನ್ನು ನೋಡುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಇತ್ತು. ಅವರ ಮೇಲಿದ್ದ ಕ್ರೇಜ್ ಸಂಪೂರ್ಣವಾಗಿ ಹೋಗಿತ್ತು. ಹೀಗಾಗಿ ಅವರ ಸಿನಿಮಾ ಯಶಸ್ಸು ಕಾಣಲೇ ಇಲ್ಲ.

ಇದನ್ನೂ ಓದಿ: ‘ಮೊದಲು ಮಣ್ಣು ಹೊರುವುದು ಕಲಿಯಲಿ’: ಚಿತ್ರರಂಗಕ್ಕೆ ಮಗನ ಎಂಟ್ರಿ ಬಗ್ಗೆ ದರ್ಶನ್​ ಮಾತು

ನಂತರ ಮತ್ತೆ ಏಳು ವರ್ಷ ಗ್ಯಾಪ್ ತೆಗೆದುಕೊಂಡರು. ಆಗಲೂ ಗೆಲುವು ಸಿಗಲಿಲ್ಲ. ನಂತರ ತಮಿಳು ಹಾಗೂ ತೆಲುಗಿನಲ್ಲಿ ತಲಾ ಒಂದು ಸಿನಿಮಾ ಮಾಡಿದರು. ಆದರೆ, ಅದೃಷ್ಟ ಲಕ್ಷ್ಮೀ ಅವರ ಮನೆ ಕದ ತಟ್ಟಲೇ ಇಲ್ಲ. ಶಾಮಿಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸುಮಾರು 3 ಲಕ್ಷ ಹಿಂಬಾಲಕರು ಇದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: ಜನಪ್ರಿಯ ಬಾಲನಟಿ ಬೇಬಿ ಶಾಮಿಲಿ ಈಗ ಹೀಗಾಗಿದ್ದಾರೆ ನೋಡಿ

ಶಾಮಿಲಿಗೆ ಇದೆ ಹವ್ಯಾಸ: ಶಾಮಿಲಿ ಪೇಂಟಿಂಗ್ ಮಾಡುವ ಹವ್ಯಾಸ ಇತ್ತು. ಅದನ್ನೇ ವೃತ್ತಿಯಾಗಿ ಬದಲಾಯಿಸಿಕೊಂಡಿದ್ದಾರೆ. ಶಾಮಿಲಿ ಅವರು ಪೇಂಟಿಂಗ್ ಮಾಡುತ್ತಾರೆ. ಇದನ್ನು ಮಾರಾಟ ಮಾಡುತ್ತಾರೆ. ಅವರ ಕಲ್ಪನೆಗಳನ್ನು ಖಾಲಿ ಹಾಳೆಗಳಲ್ಲಿ ಮೂಡಿಸುತ್ತಾರೆ. ಅವರು ಬಿಡಿಸೋ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು