ವೆಕೇಶನ್ ಮೂಡ್ನಲ್ಲಿ ರಾಧಿಕಾ ಪಂಡಿತ್-ಯಶ್; ಸ್ಟಾರ್ ದಂಪತಿ ತೆರಳಿದ್ದು ಯಾವ ದೇಶಕ್ಕೆ?
Yash - Radhika Pandit: ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಮೊಗ್ಗಿನ ಮನಸು’ ಸಿನಿಮಾ ಮೂಲಕ. ಈ ಚಿತ್ರ ತೆರೆಗೆ ಬಂದು 14 ವರ್ಷ ಕಳೆದಿದೆ. ಇದನ್ನು ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದರು.
ಯಶ್ (Yash) ಅವರ ‘ಕೆಜಿಎಫ್ 2’ ತೆರೆಗೆ ಬಂದು ಮೂರು ತಿಂಗಳ ಮೇಲಾಗಿದೆ. ಅವರ ಮುಂದಿನ ಸಿನಿಮಾ ‘ಯಶ್ 19’ರ ಬಗ್ಗೆ ಅಪ್ಡೇಟ್ ಪಡೆಯಲು ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ರಾಧಿಕಾ ಪಂಡಿತ್-ಯಶ್ ವಿದೇಶಕ್ಕೆ ಹಾರಿದ್ದಾರೆ. ಯಶ್ ಜತೆ ವೆಕೇಶನ್ ಕಳೆಯುತ್ತಿರುವ ಫೋಟೋಗಳನ್ನು ರಾಧಿಕಾ ಪಂಡಿತ್ (Radhika Pandit) ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿದೆ. ಬ್ಯೂಟಿಫುಲ್ ಕಪಲ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಮೊಗ್ಗಿನ ಮನಸು’ ಸಿನಿಮಾ ಮೂಲಕ. ಈ ಚಿತ್ರ ತೆರೆಗೆ ಬಂದು 14 ವರ್ಷ ಕಳೆದಿದೆ. ಇದನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದರು. ಇದಾದ ಬೆನ್ನಲ್ಲೇ ಅವರು ಯಶ್ ಜತೆ ವಿದೇಶಕ್ಕೆ ಹಾರಿದ್ದಾರೆ. ಈ ದಂಪತಿ ತೆರಳಿದ್ದು ಸ್ಲೊವೇನಿಯಾ ದೇಶಕ್ಕೆ.
ಸ್ಲೋವೆನಿಯಾ ಇರೋದು ಯುರೋಪ್ನಲ್ಲಿ. ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚ್ ಎದುರು ರಾಧಿಕಾ ಪಂಡಿತ್ ಹಾಗೂ ಯಶ್ ಪೋಸ್ ನೀಡಿದ್ದಾರೆ. ‘ಕೆಜಿಎಫ್’ ತೆರೆಗೆ ಬಂದ ನಂತರದಲ್ಲಿ ಯಶ್ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಆದರೆ, ‘ಕೆಜಿಎಫ್ 2’ ರಿಲೀಸ್ ಆಗಿ ಮೂರು ತಿಂಗಳು ಕಳೆದರೂ ಅವರು ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಲ್ಲ.
ನರ್ತನ್ ಜತೆಗಿನ ಸಿನಿಮಾ ವಿಳಂಬ ಆಗುತ್ತಿದ್ದು, ಯಶ್ ಅವರು ‘ಕೆಜಿಎಫ್ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ, ಈ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಈಗ ಅವರು ಗಡ್ಡಕ್ಕೆ ಕತ್ತರಿ ಹಾಕಿಲ್ಲ ಎಂಬ ವಿಚಾರದಿಂದ ಅವರು ‘ಕೆಜಿಎಫ್ 3’ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ.
View this post on Instagram
ಇದನ್ನೂ ಓದಿ: Yash: ಯಶ್ ಹೀರೋ ಆಗಿ ಕಳೆಯಿತು 14 ವರ್ಷ; ‘ರಾಕಿಂಗ್ ಸ್ಟಾರ್’ ಪಾಲಿಗೆ ಜುಲೈ 18 ಸ್ಪೆಷಲ್ ದಿನ
ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಈ ಮೊದಲು ಹಲವು ಕಡೆಗಳಲ್ಲಿ ವೆಕೇಶನ್ಗೆ ತೆರಳಿದ್ದರು. ಕೆಲ ವರ್ಷಗಳ ಹಿಂದೆ ಈ ದಂಪತಿ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದರು. ‘ಕೆಜಿಎಫ್ 2’ ತೆರೆಕಂಡ ನಂತರ ಯಶ್ ಹಾಗೂ ರಾಧಿಕಾ ಪಂಡಿತ್ ಗೋವಾಗೆ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.
Published On - 9:22 pm, Wed, 20 July 22