ನಟ ರಾಕಿಂಗ್ ಸ್ಟಾರ್ ಅವರು ಪ್ಯಾನ್ ಇಂಡಿಯಾ ಸ್ಟಾರ್. ಈಗ ಅವರು ಪ್ಯಾನ್ ವರ್ಲ್ಡ್ ಸ್ಟಾರ್ ಆಗುವ ಆಲೋಚನೆಯಲ್ಲಿ ಇದ್ದಂತೆ ಕಂಡು ಬರುತ್ತದೆ. ಮೊದಲು ರಾಕಿಂಗ್ ಸ್ಟಾರ್ ಯಶ್ ಅವರು ಸಾಕಷ್ಟು ಕಷ್ಟಪಟ್ಟು ಮೇಲೆ ಬಂದರು. ಮೊದಲು ಅವರನ್ನು ಗುರುತಿಸದೇ ಇದ್ದಾಗ ಒಂದು ಚಾಲೆಂಜ್ ಮಾಡಿದ್ದರು. ಆ ಚಾಲೆಂಜ್ನ ಸ್ವೀಕರಿಸಿ ಅವರು ದೊಡ್ಡ ಸ್ಟಾರ್ ಆಗಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ.
ಯಶ್ ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದಾರೆ. ಅವರಿಗೆ ಗೆಲುವು ನೀಡಿದ್ದು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರ. ಈಗ ಅವರು ‘ಟಾಕ್ಸಿಕ್’ ಸಿನಿಮಾ ಮಾಡುತ್ತಿದ್ದು, ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಬೇರೆಯವರೂ ಈ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಬಾಲಿವುಡ್ ಮಂದಿ ಈ ಚಿತ್ರದ ಹಕ್ಕು ಪಡೆಯಲು ಹಾತೊರೆಯುತ್ತಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ಯಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
ಯಶ್ ಕಿರುತೆರೆಯಲ್ಲಿ ನಟಿಸಿದವರು. ಆ ಬಳಿಕ ಅವರು ಹಿರಿತೆರೆಯಲ್ಲಿ ಮಿಂಚಿದರು. ಮೊದಲ ಸಿನಿಮಾ ‘ಮೊಗ್ಗಿನ ಮನಸು’ ಹಿಟ್ ಆಯಿತು. ‘ಕಿರಾತಕ’, ‘ರಾಜಾಹುಲಿ’ ಅವರ ಖ್ಯಾತಿ ಹೆಚ್ಚಿಸಿತು. ಯಶ್ ಅವರಿಗೆ ಜನಪ್ರಿಯತೆ ಇಲ್ಲದಾಗ ಕೆಲವು ಮಾಧ್ಯಮಗಳಲ್ಲಿ ಅವರ ಬೈಟ್ ಹಾಕಿರಲಿಲ್ಲವಂತೆ. ಇದರಿಂದ ಬೇಸರಗೊಂಡಿದ್ದ ಅವರು ಒಂದು ಚಾಲೆಂಜ್ ಮಾಡಿದ್ದರು.
‘ಚಾನೆಲ್ನಲ್ಲಿ ನನ್ನ ಸಣ್ಣ ಬೈಟ್ ಹಾಕ್ತಾ ಇರಲಿಲ್ಲ. ಎಲ್ಲಾ ಆರ್ಟಿಸ್ಟ್ನ ಮಾತನಾಡಿಸಿದ್ದರು. ನನ್ನ ಮಾತ್ರ ಮಾತನಾಡಿಸಿರಲಿಲ್ಲ. ಸ್ಟಾರ್ ಆದ್ಮೇಲೆ ಚಾನೆಲ್ಗೆ ಕಾಲಿಡುತ್ತೇನೆ’ ಎಂದು ಯಶ್ ಬೇಸರದಲ್ಲಿ ಹೇಳಿದ್ದರು. ಆ ಬಳಿಕ ಅವರು ‘ಬಿಬಿಸಿ’, ‘ಜೂಮ್’ ಸೇರಿ ಅನೇಕ ರಾಷ್ಟ್ರೀಯ ಚಾನೆಲ್ನಲ್ಲಿ ಮಿಂಚಿದರು. ಇದನ್ನು ಯಶ್ ಅಭಿಮಾನಿಗಳು ಹಂಚಿಕೊಳ್ಳುತ್ತಾ ಇದ್ದಾರೆ.
ಇದನ್ನೂ ಓದಿ: ಯಶ್ ಅಭಿಮಾನಿಗಳು ಮೃತಪಟ್ಟ ಪ್ರಕರಣ; ವರ್ಷ ಕಳೆದರೂ ನಿಂತಿಲ್ಲ ಹೆತ್ತವರ ಕಣ್ಣೀರು
ಯಶ್ ಅವರು ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್ದಾಸ್ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರ ನಿರೀಕ್ಷೆ ಸೃಷ್ಟಿ ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಯಶ್ ಮುಂದಿನ ಸಿನಿಮಾ ‘ಟಾಕ್ಸಿಕ್’, ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.