
ಯಶ್ ಅಭಿನಯದ ‘ಟಾಕ್ಸಿಕ್‘ ಜಾಗತಿಕ ಗಳಿಕೆ 328 ಕೋಟಿ ರೂಪಾಯಿ ತಲುಪಿದೆ. 9ನೇ ದಿನದ ಬಾಕ್ಸ್ ಆಫೀಸ್ ಅಲ್ಲಿ ಸಾಧಾರಣ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ 150 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಓಪನಿಂಗ್ ಪಡೆದುಕೊಂಡಿತ್ತು. ಎರಡನೇ ವಾರದಲ್ಲಿ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿದೆ. ಪ್ರಸ್ತುತ ಭಾರತದಲ್ಲಿ ಈ ಚಿತ್ರದ ಒಟ್ಟು ನೆಟ್ ಗಳಿಕೆ 239.30 ಕೋಟಿ ರೂಪಾಯಿಗೆ ತಲುಪಿದ್ದರೆ, ಭಾರತದ ಒಟ್ಟು ಗ್ರಾಸ್ ಗಳಿಕೆ 285.70 ಕೋಟಿ ರೂಪಾಯಿ ಆಗಿದೆ.
ಚಿತ್ರವು 9ನೇ ದಿನ ದೇಶಾದ್ಯಂತ 10,863 ಶೋಗಳಿಂದ 4.25 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿದೆ. ವಿದೇಶದ ಮಾರುಕಟ್ಟೆಯಲ್ಲೂ ಸಿನಿಮಾ ಸಾಧಾರಣ ಗಳಿಕೆ ಕಾಯ್ದುಕೊಂಡಿದ್ದು, 9ನೇ ದಿನ 1 ಕೋಟಿ ರೂಪಾಯಿ ಗಳಿಸಲಷ್ಟೇ ಸಾಧ್ಯವಾಗಿದೆ.
ವಿದೇಶದ ಗಳಿಕೆ 42.75 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ಭಾಷಾವಾರು ಲೆಕ್ಕಾಚಾರದಲ್ಲಿ, 9ನೇ ದಿನದ 4.25 ಕೋಟಿ ರೂಪಾಯಿ ಗಳಿಕೆಯಲ್ಲಿ ಹಿಂದಿ ಆವೃತ್ತಿಯು 2.85 ಕೋಟಿ ರೂಪಾಯಿ ಕೊಡುಗೆ ನೀಡುವ ಮೂಲಕ ಮುಂಚೂಣಿಯಲ್ಲಿದ್ದರೆ, ಮೂಲ ಕನ್ನಡ ಆವೃತ್ತಿಯಿಂದ 1.04 ಕೋಟಿ ರೂಪಾಯಿ ಹರಿದುಬಂದಿದೆ. ಉಳಿದಂತೆ ತೆಲುಗಿನಲ್ಲಿ 20 ಲಕ್ಷ ರೂಪಾಯಿ, ತಮಿಳಿನಲ್ಲಿ 15 ಲಕ್ಷ ರೂಪಾಯಿ ಹಾಗೂ ಮಲಯಾಳಂನಲ್ಲಿ 1 ಲಕ್ಷ ರೂಪಾಯಿ ಬಿಸಿನೆಸ್ ಮಾಡಿದೆ.
ಮೊದಲ ವಾರಾಂತ್ಯದ ನಂತರ ವಾರದ ದಿನಗಳಲ್ಲಿ ಶೋಗಳ ಸಂಖ್ಯೆ ಹಾಗೂ ಪ್ರೇಕ್ಷಕರ ಆಕ್ಯುಪೆನ್ಸಿ ತಗ್ಗಿದ್ದರೂ, 2ನೇ ವಾರಾಂತ್ಯಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಬಾಕ್ಸ್ ಆಫೀಸ್ ಗಳಿಕೆ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತದ ಮಾರುಕಟ್ಟೆಯಲ್ಲೂ ಚಿತ್ರ ಸ್ಥಿರ ಪ್ರದರ್ಶನ ಕಾಣುತ್ತಿರುವುದು ಯಶ್ ಅವರ ಜಾಗತಿಕ ಮಾರುಕಟ್ಟೆಯ ತಾಕತ್ತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ: ‘ನಾನೇ ಟಿಕೆಟ್ ಬುಕ್ ಮಾಡಿಕೊಂಡು ಟಾಕ್ಸಿಕ್ ನೋಡಿದೆ’: ಶಿವಣ್ಣ ಫಸ್ಟ್ ರಿಯಾಕ್ಷನ್
‘ಟಾಕ್ಸಿಕ್’ ಸಿನಿಮಾದ ಇಂಗ್ಲಿಷ್ ವರ್ಷನ್ ಇಂದು (ಸೆಪ್ಟೆಂಬರ್ 4) ತೆರೆಗೆ ಬಂದಿದೆ. ಇದನ್ನು ವಿದೇಶಿಗರು ಮೆಚ್ಚಿಕೊಂಡರೆ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Fri, 4 September 26