ಖಾಲಿ ಕೂತಿಲ್ಲ ಯಶ್, ‘ಟಾಕ್ಸಿಕ್’ ಸಿನಿಮಾ ಬಗ್ಗೆ ಹೇಳಿದ್ದಿಷ್ಟು

Yash: ಫಿಟ್​ನೆಸ್ ಟ್ರೈನರ್ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್, ‘ಟಾಕ್ಸಿಕ್’ ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.

ಖಾಲಿ ಕೂತಿಲ್ಲ ಯಶ್, ‘ಟಾಕ್ಸಿಕ್’ ಸಿನಿಮಾ ಬಗ್ಗೆ ಹೇಳಿದ್ದಿಷ್ಟು
Follow us
ಮಂಜುನಾಥ ಸಿ.
|

Updated on: Feb 14, 2024 | 9:26 PM

ನಟ ಯಶ್ (Yash) ಹಲವು ವರ್ಷಗಳ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ಟಾಕ್ಸಿಕ್’ ಹೆಸರಿನ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದು, ಸಿನಿಮಾದ ಟೈಟಲ್ ಟೀಸರ್ ಮಾತ್ರವೇ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಇದೀಗ ಯಶ್​ರ ಫಿಸಿಕಲ್ ಟ್ರೈನರ್, ಗೆಳೆಯ ಕಿಟ್ಟಿಯ ಹೊಸ ಜಿಮ್ ಉದ್ಘಾಟನೆಗೆ ಯಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮದದವರೊಡನೆ ಮಾತನಾಡಿದ ಯಶ್ ‘ಟಾಕ್ಸಿಕ್’ ಸಿನಿಮಾ ಬಗ್ಗೆ ತುಸುವಷ್ಟೆ ಮಾಹಿತಿ ನೀಡಿದರು.

‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ಯೋಜನೆಗಳು ನಡೆಯುತ್ತಿವೆ. ‘ಟಾಕ್ಸಿಕ್’ ಸಿನಿಮಾವನ್ನು ಯಾವುದೇ ಕಾಂಪ್ರಮೈಸ್ ಮಾಡಲಿದ್ದೇವೆ. ಈಗ ಸದ್ಯಕ್ಕೆ ಚಿತ್ರೀಕರಣ ಇಲ್ಲವೆಂದು ನಾನು ಸುಮ್ಮನೆ ಕೂತಿಲ್ಲ, ಈಗಲೂ ಸಹ ಸಾಕಷ್ಟು ಬ್ಯುಸಿಯಾಗಿದ್ದೀನಿ’ ಎಂದಿದ್ದಾರೆ ನಟ ಯಶ್.

ಚಿತ್ರರಂಗದ ಬಗ್ಗೆ ಮಾತನಾಡಿ, ‘ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡಬಹುದು ಎಂದು ಸದಾ ಯೋಚನೆ ಮಾಡುತ್ತಾ ಇರುತ್ತೀನಿ. ಹೊಸ ಹೀರೋಗಳಿಗೆ ಬೆಂಬಲ ಮಾಡಿ‌. ನಾಲ್ಕು ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಎಲ್ಲರಿಗೂ ಬೆಂಬಲ ತೋರಿಸಿ. ಮಾಡಿದ ಸಿನಿಮಾ ಎಲ್ಲ ಚೆನ್ನಾಗಿಲ್ಲ ಅಂತಾ ಹೇಳೋದಲ್ಲ. ಮಾಡಿರೋ ಸಿನಿಮಾಗಳೆಲ್ಲ ಹಿಟ್ ಆಗುವುದಿಲ್ಲ ಎಂಬುದೂ ಸಹ ನಿಜ. ಮುಂದೆ ಬರುತ್ತಿರುವ ಸಿನಿಮಾಗಳಿಗೆ ಬೆಂಬಲ ನೀಡಿ’ ಎಂದರು.

ಇದನ್ನೂ ಓದಿ:ಯಶ್ ಮುಂದಿನ ಚಿತ್ರಗಳ ಬಗ್ಗೆ ಹುಟ್ಟಿದೆ ಬ್ಯಾಕ್ ಟು ಬ್ಯಾಕ್ ವದಂತಿ; ಟಾಲಿವುಡ್ ಅಂಗಳದಿಂದ ಹೊಸ ಸುದ್ದಿ

‘ಚಾಲೆನ್ ನವರು ಹೊಸಬರ ಸಿನಿಮಾಗಳ ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತೆ. ರೈಟ್ಸ್ ವಿಚಾರದ ಬಗ್ಗೆ ಚಿತ್ರರಂಗದವರು ಋಣಾತ್ಮಕವಾಗಿ ಯೋಚನೆ ಮಾಡುವುದು ಬೇಡ. ಪ್ರಶಾಂತ್ ನೀಲ್ ‘ಉಗ್ರಂ’ ಸಿನಿಮಾ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತಗೊಂಡಿರಲಿಲ್ಲ. ಆದರೆ ಸಿನಿಮಾ ಬಿಡುಗಡೆ ಆದಮೇಲೆ ಎಲ್ಲರೂ ಮಾತನಾಡಿದರು’ ಎಂದಿದ್ದಾರೆ ಯಶ್.

ಗೆಳೆಯ ಕಿಟ್ಟಿ ಬಗ್ಗೆ ಮಾತನಾಡಿದ ಯಶ್, ‘ನನ್ನ ಕುಟುಂಬದ ಜೊತೆ ಕಳೆಯುವ ಸಮಯಕ್ಕಿಂತಲೂ ಕಿಟ್ಟಿ ಜೊತೆಗೆ ಹೆಚ್ಚು ಸಮಯ ಕಳೆದಿದ್ದೀನಿ. ಕಿಟ್ಟಿ ಶಿಸ್ತಿನ ಮನುಷ್ಯ. ಸರಿಯಾದ ಟೈಂಗೆ ಬರುತ್ತಾರೆ, ವರ್ಕೌಟ್​ನಲ್ಲೂ ಬಹಳ ಶಿಸ್ತು. ನಾನು ಸಿನಿಮಾಗಳಲ್ಲಿ ಚೆನ್ನಾಗಿ ಕಂಡರೂ ಅವರೇ ಕಾರಣ. ನಾನು ಚೆನ್ನಾಗಿ ಕಾಣದೇ ಇದ್ದರೂ ಸಹ ಅವರೇ ಕಾರಣ’ ಎಂದರು. ಕತ್ರಗುಪ್ಪೆ ಏರಿಯಾ ಬಗ್ಗೆ ಮಾತನಾಡಿದ ಯಶ್, ‘ಈ ಏರಿಯಾ ಬಹಳ ಚೆನ್ನಾಗಿ ಗೊತ್ತು, ಬಹಳ ದಿನಗಳ ಬಳಿಕ ಇಲ್ಲಿಗೆ ಬಂದಿದ್ದೀನಿ. ಇಲ್ಲಿ ಒಂದು ಮನೆ ಇದೆ. ನನ್ನ ಸಹೋದರಿ ಇರುವುದು ಸಹ ಇಲ್ಲೆ. ಇಂದು ವ್ಯಾಲೆಂಟೈನ್ಸ್ ಡೇ ಎನ್ನುವುದು ಗೊತ್ತಿರಲಿಲ್ಲ. ಇವರು ಕರೆದರು ಬಂದುಬಿಟ್ಟೆ, ಈಗ ಮನೆಗೆ ಹೋಗಿ ಕುಟುಂಬದವರ ಜೊತೆ ಸೆಲೆಬ್ರೇಟ್ ಮಾಡಬೇಕು’ ಎಂದರು ಯಶ್. ಹೋಗುವ ಮುಂಚೆ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಶ್, ‘ಚುನಾವಣೆ ಬಗ್ಗೆ ನಾನೇನು ಮಾತಾಡಲ್ಲ‌. ನನ್ನ ಯೋಚನೆ, ಗುರಿ ಬೇರೆನೇ ಇದೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ