Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಮುಂದಿನ ಚಿತ್ರಗಳ ಬಗ್ಗೆ ಹುಟ್ಟಿದೆ ಬ್ಯಾಕ್ ಟು ಬ್ಯಾಕ್ ವದಂತಿ; ಟಾಲಿವುಡ್ ಅಂಗಳದಿಂದ ಹೊಸ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹೆಸರು ಸಾಕಷ್ಟು ಸುದ್ದಿಯಲ್ಲಿ ಇದೆ. ಅವರು ನಿತೇಶ್ ತಿವಾರಿಯ ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಒಂದು ಸಿನಿಮಾದಲ್ಲಿ ರಾವಣ ಮತ್ತೊಂದು ಸಿನಿಮಾದಲ್ಲಿ ಅವರು ಹನುಮಂತನ ಪಾತ್ರ ಮಾಡಿದರೆ ಜನರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಹುಟ್ಟಿದೆ.

ಯಶ್ ಮುಂದಿನ ಚಿತ್ರಗಳ ಬಗ್ಗೆ ಹುಟ್ಟಿದೆ ಬ್ಯಾಕ್ ಟು ಬ್ಯಾಕ್ ವದಂತಿ; ಟಾಲಿವುಡ್ ಅಂಗಳದಿಂದ ಹೊಸ ಸುದ್ದಿ
ಯಶ್-ಹನುಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Feb 14, 2024 | 10:20 AM

ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಕೆಜಿಎಫ್ 2’ ಬಳಿಕ ಭರ್ಜರಿ ಖ್ಯಾತಿ ಪಡೆದರು. ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಹಲವು ವದಂತಿಗಳು ಹುಟ್ಟಿಕೊಂಡಿವೆ. ಈ ಮೊದಲು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ಅವರು ರಾವಣನ ಪಾತ್ರ ಮಾಡುತ್ತಾರೆ ಎನ್ನಲಾಗಿತ್ತು. ಈಗ ಕೇಳಿ ಬರುತ್ತಿರುವ ಹೊಸ ಸುದ್ದಿ ಏನೆಂದರೆ ‘ಜೈ ಹನುಮಾನ್’ ಚಿತ್ರದಲ್ಲಿ ಯಶ್ ಹನುಮಂತನ ಪಾತ್ರ ಮಾಡುತ್ತಾರಂತೆ.

ಪ್ರಶಾಂತ್ ವರ್ಮ ನಿರ್ದೇಶನದ ತೆಲುಗು ಸಿನಿಮಾ ‘ಹನುಮಾನ್’ ಜನವರಿ 12ರಂದು ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಬಾಕ್ಸ್ ಆಫೀಸ್​ ಗಳಿಕೆ 300 ಕೋಟಿ ರೂಪಾಯಿ ದಾಟಿದೆ. ಈ ಚಿತ್ರಕ್ಕೆ ಪ್ರಶಾಂತ್ ವರ್ಮ ಸೀಕ್ವೆಲ್ ಸಿದ್ಧಪಡಿಸುತ್ತಿದ್ದಾರೆ. ಅವರು ಈ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಪಾತ್ರವರ್ಗದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹನುಮಂತನ ಪಾತ್ರ ಮಾಡಲು ಯಶ್​ ಅವರನ್ನು ಪ್ರಶಾಂತ್ ವರ್ಮ ಪರಿಗಣಿಸಿದ್ದಾರೆ.

‘ಹನುಮಾನ್ ಸಿನಿಮಾದಲ್ಲಿ ಹನುಮಂತ ಹೆಸರಿನ ಪಾತ್ರ ಮಾಡಿದ್ದರು ತೇಜ ಸಜ್ಜಾ. ಸೀಕ್ವೆಲ್​ನಲ್ಲಿ ಅವರ ಪಾತ್ರ ಇದೇ ರೀತಿ ಮುಂದುವರಿಯಲಿದೆ. ಲಾರ್ಡ್ ಹನುಮಾನ್ ಪಾತ್ರ ಕೂಡ ಸೀಕ್ವೆಲ್​ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಪಾತ್ರಕ್ಕೆ ನಿರ್ದೇಶಕರು ಯಶ್​ನ ಪರಿಗಣಿಸಿದ್ದಾರೆ. ತೇಜ ಸಜ್ಜಾ ಹನುಮಂತನ ಭಕ್ತನಾಗಿಯೇ ಮುಂದುವರಿಯಲಿದ್ದಾರೆ’ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಶಾರುಖ್​ ಖಾನ್​? ನಡೆದಿದೆ ದೊಡ್ಡ ಪ್ಲ್ಯಾನ್​

ಸದ್ಯ ಯಶ್ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದೆ. ಅವರು ನಿತೇಶ್ ತಿವಾರಿಯ ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎನ್ನುವ ಸುದ್ದಿ ಇದೆ. ಒಂದು ಸಿನಿಮಾದಲ್ಲಿ ರಾವಣ ಮತ್ತೊಂದು ಸಿನಿಮಾದಲ್ಲಿ ಅವರು ಹನುಮಂತನ ಪಾತ್ರ ಮಾಡಿದರೆ ಜನರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಇವೆಲ್ಲವೂ ಅಂತೆಕಂತೆ ಹಂತದಲ್ಲಿ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ