ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಮಾಸ್ ಚಿತ್ರ ‘ಸತ್ಯಂ ಶಿವಂ’; ಯತಿರಾಜ್​ ನಿರ್ದೇಶನ

|

Updated on: Feb 01, 2023 | 4:40 PM

Sathyam Shivam | Kannada Movie: ಈ ಹಿಂದೆ ‘ಭಿಕ್ಷುಕ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಬುಲೆಟ್‌ ರಾಜು ಅವರು ಈಗ ‘ಸತ್ಯಂ ಶಿವಂ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಸಂಜನಾ ನಾಯ್ಡು ಈ ಚಿತ್ರಕ್ಕೆ ನಾಯಕಿ.

ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಮಾಸ್ ಚಿತ್ರ ‘ಸತ್ಯಂ ಶಿವಂ’; ಯತಿರಾಜ್​ ನಿರ್ದೇಶನ
‘ಸತ್ಯಂ ಶಿವಂ’ ಚಿತ್ರತಂಡ
Follow us on

ನಟ, ಪತ್ರಕರ್ತ, ನಿರ್ದೇಶಕ ಯತಿರಾಜ್​ (Yathiraj) ಅವರು ಹಲವು ಪ್ರಾಜೆಕ್ಟ್​ಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ (Kannada Film Industry) ಅವರಿಗೆ ಹಲವು ವರ್ಷಗಳ ಅನುಭವ ಇದೆ. ‘ಪೂರ್ಣಸತ್ಯ’ ಸಿನಿಮಾದಿಂದ ನಿರ್ದೇಶಕನಾದ ಅವರು ಈವರೆಗೂ 5 ಸಿನಿಮಾಗಳಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರ ನಿರ್ದೇಶದಲ್ಲಿ ಮೂಡಿಬರುತ್ತಿರುವ ‘ಸಂಜು’ ಚಿತ್ರಕ್ಕೆ ಇತ್ತೀಚೆಗಷ್ಟೇ ಶೂಟಿಂಗ್ ಮುಗಿದಿದೆ. ಈಗ ಯತಿರಾಜ್​ ನಿರ್ದೇಶಿಸಲಿರುವ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಸುಪಾರಿ ಕಿಲ್ಲರ್ ಕುರಿತ ಕಥಾಹಂದರ ಇರುವ ಈ ಸಿನಿಮಾಗೆ ‘ಸತ್ಯಂ ಶಿವಂ’ (Sathyam Shivam) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ವಿಶೇಷತೆ ಏನು ಎಂಬುದನ್ನು ತಿಳಿಸಲು ಇತ್ತೀಚೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಚಿತ್ರತಂಡದವರು ಅನೇಕ ವಿಚಾರಗಳನ್ನು ಹಂಚಿಕೊಂಡರು.

ಈ ಹಿಂದೆ ‘ಭಿಕ್ಷುಕ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಬುಲೆಟ್‌ ರಾಜು ಅವರು ಈಗ ‘ಸತ್ಯಂ ಶಿವಂ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ನಿರ್ಮಾಣದ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದಾರೆ. ಸಂಜನಾ ನಾಯ್ಡು ಈ ಚಿತ್ರಕ್ಕೆ ನಾಯಕಿ. ಮೈಸೂರು, ಶ್ರೀರಂಗಪಟ್ಟಣದ ಸುತ್ತಮುತ್ತ ‌ಫೆಬ್ರವರಿ 6ರಿಂದ ಚಿತ್ರೀಕರಣ ಪ್ರಾರಂಭಿಸಲಾಗುತ್ತಿದೆ.

ಇದನ್ನೂ ಓದಿ: Hondisi Bareyiri Trailer: ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್​; ಗಮನ ಸೆಳೆಯುತ್ತಿದೆ ಟ್ರೇಲರ್​

ಇದನ್ನೂ ಓದಿ
ಮುಂಬೈನಲ್ಲಿ ಒಟ್ಟಾಗಿ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ​; ಫೋಟೋ ವೈರಲ್
Swetha Changappa: ಕಿರುತೆರೆಯಲ್ಲಿ 20 ವರ್ಷ ಪೂರೈಸಿದ ಶ್ವೇತಾ ಚಂಗಪ್ಪ; ಸಿನಿಮಾದಲ್ಲೂ ನಟಿಯ ಯಶಸ್ವಿ ಪಯಣ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ

ನಿರ್ದೇಶಕ ಯತಿರಾಜ್​ ಹೇಳುವ ಪ್ರಕಾರ, ‘ಸತ್ಯಂ ಶಿವಂ’ ಎಂದರೆ ಎರಡು ಪಾತ್ರಗಳ ಹೆಸರಲ್ಲ. ‘ಕೊರೊನಾ ಲಾಕ್​ಡೌನ್​ ಸಾಕಷ್ಟು ಜನರ ಜೀವನ ಬದಲಿಸಿತು. ನಾನು ಆಗ ಶಾರ್ಟ್ ಫಿಲ್ಮ್​ ನಿರ್ದೇಶನ ಆರಂಭಿಸಿದೆ. 15ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಈಗ ‘ಸತ್ಯಂ ಶಿವಂ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದೇನೆ. ನಾಯಕನಿಗೆ ಸತ್ಯದ ದರ್ಶನ ಮಾಡಿಸುವ ಪಕ್ಕಾ ಮಾಸ್ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: R Chandru: ‘ಕಬ್ಜ’ ಪ್ರಚಾರಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಆರ್​. ಚಂದ್ರು ಪ್ಲ್ಯಾನ್​; ಜೋರಾಗಿದೆ ತಯಾರಿ

‘ರಾ ಕಂಟೆಂಟ್​, ರೌಡಿಸಂ, ಬ್ಲಡ್ ಎಲ್ಲವೂ ಇದರಲ್ಲಿದೆ. ಇದು ಒಬ್ಬ ಸುಪಾರಿ ಕಿಲ್ಲರ್ ಕಥೆ. ಆತ ದುಡ್ಡಿಗೋಸ್ಕರ ಏನು ಬೇಕಾದರೂ ಮಾಡುವ, ಯಾವಮಟ್ಟಕ್ಕೆ ಬೇಕಾದರೂ ಹೋಗುವವನು. ಚಿತ್ರದಲ್ಲಿ ಸಂಗೀತಾ, ವೀಣಾ ಸುಂದರ್ ಹಾಗೂ ನಾನು ಕೂಡ ನಟಿಸುತ್ತಿದ್ದೇನೆ. ನನ್ನ ಪತ್ನಿಯ ಪಾತ್ರದಲ್ಲಿ ತೇಜಸ್ವಿನಿ ನಟಿಸಲಿದ್ದಾರೆ’ ಎಂದು ಯತಿರಾಜ್​ ಹೇಳಿದ್ದಾರೆ.

ಇದನ್ನೂ ಓದಿ: Gowri Shankara: ರವಿಚಂದ್ರನ್​ ಚಿತ್ರದಲ್ಲಿ ದುಬಾರಿ ಶ್ವಾನ ನಟನೆ; 10 ಲಕ್ಷ ರೂಪಾಯಿ ಸಂಭಾವನೆ

ಈವರೆಗೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಬುಲೆಟ್ ರಾಜು ಅವರಿಗೆ ನಿರ್ಮಾಪಕನಾಗಿ ಇದು 2ನೇ ಚಿತ್ರ. ಮೊದಲು ನಿರ್ಮಾಣ ಮಾಡಿದ ‘ಭಿಕ್ಷುಕ’ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಆ ಸಿನಿಮಾದಲ್ಲಿ ಯತಿರಾಜ್ ಅವರು ಇನ್‌ಸ್ಪೆಕ್ಟರ್ ಪಾತ್ರ ಮಾಡಿದ್ದರು. ಈಗ ಇಬ್ಬರೂ ‘ಸತ್ಯಂ ಶಿವಂ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಂಜನಾ ನಾಯ್ಡು ಅವರು ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೋರ್ವ ನಟಿ ತೇಜಸ್ವಿನಿ ಅವರಿಗೂ ಪ್ರಮುಖ ಪಾತ್ರವಿದೆ. ಪೊಲೀಸ್ ಕಾನ್ಸ್​ಟೆಬಲ್​ ಪಾತ್ರದಲ್ಲಿ ಕುರಿಬಾಂಡ್ ರಂಗ ನಟಿಸುತ್ತಿದ್ದಾರೆ.

ಶ್ರೀಮತಿ ಯಶೋಧ ರಾಜ್ ಕ್ರಿಯೇಷನ್ಸ್ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಅವರ ಛಾಯಾಗ್ರಹಣವಿದೆ. ವಿ. ಮನೋಹರ್ ಸಂಗೀತ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಫೈವ್ ಸ್ಟಾರ್ ಗಣೇಶ್ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.