‘ಹೆವಿ ಕೆಲಸಕ್ಕೆ ನಾಂದಿ’; ಅನುರಾಗ್ ಕಶ್ಯಪ್ ಜೊತೆ ಫೋಟೋ ಹಾಕಿ ಹುಳ ಬಿಟ್ಟ ಭಟ್ರು

ಯೋಗರಾಜ್ ಭಟ್ ಮತ್ತು ಅನುರಾಗ್ ಕಶ್ಯಪ್ ಅವರ ಸಹಯೋಗದ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಭಟ್ ಅವರು ಹಂಚಿಕೊಂಡ ಫೋಟೋ ಮತ್ತು ಪೋಸ್ಟ್ "ಹೆವಿ ಕೆಲಸಕ್ಕೆ ನಾಂದಿ" ಎಂಬ ಮಾತುಗಳಿಂದ ಹೊಸ ಚಿತ್ರದ ಸಾಧ್ಯತೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಇಬ್ಬರೂ ಅನುಭವಿ ನಿರ್ದೇಶಕರು ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ.

‘ಹೆವಿ ಕೆಲಸಕ್ಕೆ ನಾಂದಿ’; ಅನುರಾಗ್ ಕಶ್ಯಪ್ ಜೊತೆ ಫೋಟೋ ಹಾಕಿ ಹುಳ ಬಿಟ್ಟ ಭಟ್ರು
ಯೋಗರಾಜ್ ಭಟ್-ಅನುರಾಗ್ ಕಶ್ಯಪ್

Updated on: Jul 14, 2025 | 7:34 AM

ಯೋಗರಾಜ್ ಭಟ್ ಅವರು ಕನ್ನಡದಲ್ಲಿ ಭಿನ್ನ ಸಿನಿಮಾಗಳನ್ನು ನೀಡಿ ಗಮನ ಸೆಳೆದವರು. ಅನುರಾಗ್ ಕಶ್ಯಪ್ (Anurag Kashyap) ಅವರು ಬಾಲಿವುಡ್​ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಈಗ ಇವರಿಬ್ಬರೂ ಒಂದಾಗಿದ್ದಾರೆ. ಈ ರೀತಿ ಭೇಟಿ ಆದಾಗ ಹೊಸ ಸಿನಿಮಾ ಬಗ್ಗೆ ಚರ್ಚೆ ಆಗುತ್ತದೆ. ಈಗಲೂ ಹಾಗೆ ಚರ್ಚೆ ಆಗಿದೆ. ಇದಕ್ಕೆ ಯೋಗರಾಜ್ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದ ಪೋಸ್ಟ್ ಕಾರಣ. ಇಬ್ಬರೂ ಸೇರಿ ಒಟ್ಟಾಗಿ ಕೆಲಸ ಮಾಡುವ ಸೂಚನೆ ನೀಡಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

‘ನಮಸ್ತೆ, ವಿಶೇಷ ವ್ಯಕ್ತಿ. ವಿಶೇಷ ಸ್ನೇಹಜೀವಿ. ಅದ್ಭುತ ಭೇಟಿ. ಹೆವಿ ಕೆಲಸವೊಂದಕ್ಕೆ ನಾಂದಿ. ಜೈ ಅನುರಾಗ್ ಕಶ್ಯಪ್. ಜೈ ಸ್ನೇಹ. ಜೈ ಸಿನಿಮಾ. ಜೈ ಜನತೆ’ ಎಂದು ಯೋಗರಾಜ್ ಭಟ್ ಬರೆದುಕೊಂಡಿದ್ದಾರೆ. ‘ಹೆವಿ ಕೆಲವೊಂದಕ್ಕೆ ನಾಂದಿ’ ಎಂಬ ಸಾಲುಗಳು ಸಾಕಷ್ಟು ಗಮನ ಸೆಳೆದಿವೆ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
ಸೂತಕದ ಮನೆಯಲ್ಲೂ ಸೆಲ್ಫಿ ಹುಚ್ಚು; ತಾಳ್ಮೆ ಕಳೆದುಕೊಂಡು ಕೂಗಾಡಿದ ರಾಜಮೌಳಿ
ಕೋಟಾ ಶ್ರೀನಿವಾಸ್ ರಾವ್ ಕನ್ನಡದಲ್ಲಿ ನಟಿಸಿದ್ದ ಸಿನಿಮಾಗಳು ಯಾವುವು ಗೊತ್ತೆ?
ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ; ಅನಾರೋಗ್ಯದಿಂದ ವಿಧಿವಶ
ಶಿವಣ್ಣ ಹುಟ್ಟಿದ ಬಳಿಕ ಸಂಜೆಯಿಂದ ಬೆಳಗ್ಗಿನವರೆಗೆ ಸ್ವೀಟ್ ಹಂಚಿದ್ದ ರಾಜ್​

ಯೋಗರಾಜ್ ಭಟ್ ಮಾಡಿದ ಪೋಸ್ಟ್

ಇದೆ ಸಾಮ್ಯತೆ..

ಯೋಗರಾಜ್ ಭಟ್ ಹಾಗೂ ಅನುರಾಗ್ ಮಧ್ಯೆ ಕೆಲವು ಸಾಮ್ಯತೆ ಇದೆ. ಯೋಗರಾಜ್ ಭಟ್ ಅವರ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ ಈಗಲೂ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಆ ಚಿತ್ರ ಮಾಡಿದ ದಾಖಲೆಗಳು ಹಲವು. ಇನ್ನು, ‘ಗಾಳಿಪಟ’, ‘ಗಾಳಿಪಟ 2’ ರೀತಿಯ ಹಲವು ಯಶಸ್ವಿ ಸಿನಿಮಾಗಳನ್ನು ಯೋಗರಾಜ್ ಭಟ್ ನೀಡಿದ್ದಾರೆ. ಅವರು ನಟನಾಗಿಯೂ ಗಮನ ಸೆಳೆದಿದ್ದು ಇದೆ. ಭಟ್ರು ಹೊಸ ತಂಡದ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸುತ್ತಾರೆ.

ಇದನ್ನೂ ಓದಿ: ಬಾಲಿವುಡ್​ ಬಳಿಕ ತಮಿಳು ಸಿನಿಮಾರಂಗದ ಬಗ್ಗೆ ಅನುರಾಗ್ ಟೀಕೆ

ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ಚಿತ್ರ ಈಗಿನ ಕಾಲಕ್ಕೂ ಮೆಚ್ಚುಗೆ ಪಡೆದಿರುವ ಸಿನಿಮಾ. ಅವರು ಈ ರೀತಿಯ ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನಾಗಿಯೂ ಅನುರಾಗ್ ಮಿಂಚಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಕಲಾವಿದರ ಜೊತೆ ಕೆಲಸ ಮಾಡಲು ಅನುರಾಗ್ ಆದ್ಯತೆ ನೀಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.