‘ಓಂ’ ಕ್ಲೈಮ್ಯಾಕ್ಸ್​ನಲ್ಲಿ ವಿನಯ್ ರಾಜ್​ಕುಮಾರ್-ಯುವ ಇದ್ರು; ಯಾವ ದೃಶ್ಯ ಎಂದು ಊಹಿಸುತ್ತೀರಾ?

|

Updated on: Feb 12, 2024 | 7:34 AM

‘ಓಂ’ ಸಿನಿಮಾ ರಿಲೀಸ್ ಆಗಿ 29 ವರ್ಷಗಳು ಕಳೆಯುತ್ತಾ ಬಂದಿದೆ. ಈ ಚಿತ್ರದಲ್ಲಿ ವಿನಯ್ ನಟಿಸಿದ್ದರು. ‘ಜೋಡಿ ನಂಬರ್ 1’ ಗ್ರ್ಯಾಂಡ್ ಫಿನಾಲೆಗೆ ವಿನಯ್ ರಾಜ್​ಕುಮಾರ್ ಆಗಮಿಸಿದ್ದರು. ಈ ವೇಳೆ ಅವರು ಅಪರೂಪದ ವಿಚಾರ ರಿವೀಲ್ ಮಾಡಿದ್ದರು. ಈ ವಿಡಿಯೋ ಮತ್ತೆ ವೈರಲ್ ಆಗಿದೆ.

‘ಓಂ’ ಕ್ಲೈಮ್ಯಾಕ್ಸ್​ನಲ್ಲಿ ವಿನಯ್ ರಾಜ್​ಕುಮಾರ್-ಯುವ ಇದ್ರು; ಯಾವ ದೃಶ್ಯ ಎಂದು ಊಹಿಸುತ್ತೀರಾ?
‘ಓಂ’ ಕ್ಲೈಮ್ಯಾಕ್ಸ್​ನಲ್ಲಿ ವಿನಯ್ ರಾಜ್​ಕುಮಾರ್-ಯುವ ಇದ್ರು (Credit: Sri Ganesh Videos )
Follow us on

ವಿನಯ್ ರಾಜ್​ಕುಮಾರ್ (Vinay Rajkumar) ಹಾಗೂ ಯುವ ರಾಜ್​ಕುಮಾರ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿನಯ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಶುಕ್ರವಾರ (ಫೆಬ್ರವರಿ 9) ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ವಿನಯ್ ನಟನೆಗೂ ಮೆಚ್ಚುಗೆ ಸಿಕ್ಕಿದೆ. ಇದರಿಂದ ವಿನಯ್ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಅವರು ಭರವಸೆಯ ನಟ ಎನಿಸಿಕೊಂಡಿದ್ದಾರೆ. ಅವರು ‘ಓಂ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದರು. ಈ ವಿಚಾರವನ್ನು ವಿನಯ್ ಅವರು ಈ ಮೊದಲು ಹೇಳಿಕೊಂಡಿದ್ದರು.

ಈ ಮೊದಲು ‘ಜೋಡಿ ನಂಬರ್ 1’ ಗ್ರ್ಯಾಂಡ್ ಫಿನಾಲೆಗೆ ವಿನಯ್ ರಾಜ್​ಕುಮಾರ್ ಅವರು ಆಗಮಿಸಿದ್ದರು. ಈ ವೇಳೆ ಅವರು ಈ ವಿಚಾರ ರಿವೀಲ್ ಮಾಡಿದ್ದರು. ವೇದಿಕೆ ಮೇಲೆ ಇದ್ದ ನಿರೂಪಕಿ, ವಿನಯ್ ಎದುರು ಒಂದು ಪ್ರಶ್ನೆ ಇಟ್ಟರು. ‘ಶಿವರಾಜ್​ಕುಮಾರ್ ಅವರ ಯಾವ ಸಿನಿಮಾ ರಿಮೇಕ್ ಮಾಡಿದ್ರೆ ನೀವು ಹೀರೋ ಆಗೋಕೆ ಇಷ್ಟಪಡ್ತೀರಾ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಓಂ ಸಿನಿಮಾ ಕೊನೆಯಲ್ಲಿ ನಾನು ನನ್ನ ತಮ್ಮ ಬರ್ತೀವಿ. ಪ್ರೇಮಾ ಒಬ್ಬರನ್ನು ಎತ್ತಿಕೊಂಡು ಇರ್ತಾರೆ, ದೊಡ್ಡಪ್ಪ (ಶಿವರಾಜ್​ಕುಮಾರ್) ಒಬ್ಬರನ್ನು ಎತ್ತಿಕೊಂಡಿರುತ್ತಾರೆ. ಅದು ನಾನು ಹಾಗೂ ಯುವ. ಆ ಚಿತ್ರನ ರಿಮೇಕ್ ಮಾಡಿದರೆ ನಾನು ನಟಿಸುತ್ತೇನೆ’ ಎಂದಿದ್ದರು ವಿನಯ್. ಈ ಮೂಲಕ ಅಪರೂಪದ ಮಾಹಿತಿ ರಿವೀಲ್ ಮಾಡಿದ್ದರು.

‘ಓಂ’ ಸಿನಿಮಾ ರಿಲೀಸ್ ಆಗಿ 29 ವರ್ಷಗಳು ಕಳೆಯುತ್ತಾ ಬಂದಿವೆ. ಈ ಚಿತ್ರ ರಿಲೀಸ್ ಆಗಿದ್ದು 1995ರ ಮೇ 19ರಂದು. ಉಪೇಂದ್ರ ಅವರು ಗ್ಯಾಂಗ್​ಸ್ಟರ್ ಕಥೆಯನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದರು. ಶಿವರಾಜ್​ಕುಮಾರ್ ಹಾಗೂ ಪ್ರೇಮಾ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ನೂರಾರು ಬಾರಿ ರಿಲೀಸ್ ಆಗಿ ದಾಖಲೆ ಬರೆದಿದೆ. ಈ ಚಿತ್ರದ ಟಿವಿ ಹಕ್ಕು ಮಾರಾಟ ಆಗಿದ್ದು 2015ರಲ್ಲಿ. ಅದೂ 10 ಕೋಟಿ ರೂಪಾಯಿಗೆ ಅನ್ನೋದು ವಿಶೇಷ. ಸಿನಿಮಾ ರಿಲೀಸ್ ಆಗಿ 20 ವರ್ಷಗಳ ಬಳಿಕ ಈ ಮೊತ್ತಕ್ಕೆ ಸಿನಿಮಾದ ಟಿವಿ ಹಕ್ಕು ಮಾರಾಟ ಆಗಿದ್ದು ಅದೇ ಮೊದಲು.

ಇದನ್ನೂ ಓದಿ: ‘ಚಿಕ್ಕಪ್ಪನ ಮಿಸ್ ಮಾಡಿಕೊಳ್ತಾ ಇದೀನಿ, ಅವರು ಈಗ ಇರಬೇಕಿತ್ತು’; ಭಾವುಕರಾದ ವಿನಯ್ ರಾಜ್​ಕುಮಾರ್

ವಿನಯ್ ರಾಜ್​ಕುಮಾರ್ ಅವರು ‘ಒಂದು ಸರಳ ಪ್ರೇಮಕಥೆ’ ಗೆದ್ದ ಖುಷಿಯಲ್ಲಿ ಇದ್ದಾರೆ. ಈ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನ ಇದೆ. ‘ರಾಧಾಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದಾರೆ. ಸ್ವಾದಿಷ್ಟಾ ಕೂಡ ಈ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ ಅವರು ವಿನಯ್ ತಂದೆ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:33 am, Mon, 12 February 24