ಹೀರೋಗಳೇ ವಿಲನ್ ಆದಾಗ: ಈ ಸಿನಿಮಾಗಳ ಬಗ್ಗೆ ಮೂಡಿದೆ ನಿರೀಕ್ಷೆ..

ಯಶ್, ಸಂಜಯ್ ದತ್, ಸುದೀಪ್ ಸೇರಿ ಅನೇಕ ಸ್ಟಾರ್ ಹೀರೋಗಳು ನೆಗೆಟಿವ್ ಶೇಡ್​ನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈ ಸಾಲಿನಲ್ಲಿ ಇನ್ನೂ ಕೆಲವು ಹೀರೋಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹೀರೋಗಳೇ ವಿಲನ್ ಆದಾಗ: ಈ ಸಿನಿಮಾಗಳ ಬಗ್ಗೆ ಮೂಡಿದೆ ನಿರೀಕ್ಷೆ..
ಹೀರೋಗಳೇ ವಿಲನ್ ಆದಾಗ: ಈ ಸಿನಿಮಾಗಳ ಬಗ್ಗೆ ಮೂಡಿದೆ ನಿರೀಕ್ಷೆ..
Edited By:

Updated on: Jan 30, 2024 | 7:56 AM

ಇತ್ತೀಚೆಗೆ ಹೀರೋಗಳು ನೆಗೆಟಿವ್ ಶೇಡ್​ನ ಪಾತ್ರದಲ್ಲಿ ಮಿಂಚೋ ಟ್ರೆಂಡ್ ಜೋರಾಗಿದೆ. ಸ್ಟಾರ್ ಹೀರೋಗಳು ವಿಲನ್ ಪಾತ್ರ ಮಾಡಿ ಗಮನ ಸೆಳೆಯುತ್ತಿದ್ದಾರೆ. ಹೀರೋಗಳು ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಈಗಾಗಲೇ ಯಶ್, ಸುದೀಪ್ (Sudeep)​, ಸಂಜಯ್ ದತ್ ಸೇರಿ ಅನೇಕ ಸ್ಟಾರ್ ಹೀರೋಗಳು ನೆಗೆಟಿವ್ ಶೇಡ್​ನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈ ಸಾಲಿನಲ್ಲಿ ಇನ್ನೂ ಹಲವು ಹೀರೋಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಪೃಥ್ವಿರಾಜ್ ಸುಕುಮಾರನ್..

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾ ಈ ವರ್ಷ ಈದ್ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರನ್ನು ವಿಲನ್ ಆಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಸಲಾರ್’ ಚಿತ್ರದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ.

ಕಮಲ್ ಹಾಸನ್

ಕಮಲ್ ಹಾಸನ್ ಅವರು ‘ವಿಕ್ರಮ್’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡರು. ಈ ಸಿನಿಮಾದಲ್ಲಿ ಅವರಿಗೆ ಭಿನ್ನ ಪಾತ್ರ ಇತ್ತು. ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.  ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಪ್ರಭಾಸ್ ನಟನೆಯ, ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಇದೆ.

ರಿಷಬ್ ಸಹಾನಿ

ರಿಷಬ್ ಸಹಾನಿ ಅವರು ‘ಫೈಟರ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಈ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟಿದೆ. ಸಿದ್ದಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ.

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಅವರು ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ನೆಗೆಟಿವ್ ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಸಮಸ್ಯೆ ಆಗಿತ್ತು. ಹೀಗಾಗಿ, ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಬಾಬಿ ಡಿಯೋಲ್

‘ಅನಿಮಲ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು ಬಾಬಿ ಡಿಯೋಲ್. ಈಗ ಈ ರೀತಿಯ ಪಾತ್ರಗಳೇ ಅವರನ್ನು ಹೆಚ್ಚು ಹುಡುಕಿ ಬರುತ್ತಿವೆ. ಸೂರ್ಯ ನಟನೆಯ ‘ಕಂಗುವ’ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇದು ತಮಿಳು ಆ್ಯಕ್ಷನ್ ಥ್ರಿಲ್ಲರ್ ಡ್ರಾಮಾ. ಈ ಚಿತ್ರವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಬಿ ಡಿಯೋಲ್ ಪಾತ್ರದ ಝಲಕ್ ತೋರಿಸಲಾಗಿದೆ.

ಫಹಾದ್ ಫಾಸಿಲ್

ಮಲಯಾಳಂ ನಟ ಫಹಾದ್ ಫಾಸಿಲ್ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕೆ ನೆಗೆಟಿವ್ ಶೇಡ್​ ಇದೆ.

ಯಶ್

‘ರಾಮಾಯಣ’ ಸಿನಿಮಾದಲ್ಲಿ ‘ಕೆಜಿಎಫ್ ’ ಸ್ಟಾರ್ ಯಶ್ ರಾವಣನ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ‘ಕೆಜಿಎಫ್’ ಚಿತ್ರದಲ್ಲಿ ಅವರು ಗ್ಯಾಂಗ್​ಸ್ಟರ್ ಆಗಿ ಕಾಣಿಸಿಕೊಂಡು ಗಮನ ಸೆಳೆದರು.

 ಸಂಜಯ್ ದತ್

ನಟ ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದರು. ಇದಾದ ಬಳಿಕ ಅದೇ ರೀತಿಯ ಪಾತ್ರಗಳು ಅವರನ್ನು ಹುಡುಕಿ ಬರುತ್ತಿವೆ ಅನ್ನೋದು ವಿಶೇಷ. ‘ಬಿಗ್ ಬುಲ್’ನಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಕನ್ನಡದ ‘ಕೆಡಿ’ ಚಿತ್ರದಲ್ಲೂ ಅವರು ಮಾಡುತ್ತಿರುವುದು ವಿಲನ್ ಪಾತ್ರ ಎನ್ನಲಾಗುತ್ತಿದೆ.

ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಸಿನಿಮಾಗಳನ್ನು ಒಪ್ಪಿ ನಟಿಸೋದು ಕಡಿಮೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಅಭಿಮಾನಿಗಳ ಸಾವಿನ ನೋವಿನಿಂದ ಯಶ್​ ಇನ್ನೂ ಹೊರಬಂದಿಲ್ಲ’: ಆಪ್ತರ ಹೇಳಿಕೆ

ಇಮ್ರಾನ್ ಹಷ್ಮಿ

ಇಮ್ರಾನ್ ಹಷ್ಮಿ ಸೀರಿಯಲ್ ಕಿಸ್ಸರ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಟೈಗರ್ 3’ ಚಿತ್ರದಲ್ಲಿ ಇಮ್ರಾನ್ ನೆಗೆಟಿವ್ ಪಾತ್ರ ಮಾಡಿದ್ದರು. ಈಗ ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೂ ಅವರು ವಿಲನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ