AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗುವಿನ ಕಿಕ್ ಕೊಡುತ್ತಿದೆ ರಾಮನ ಸಂಕಷ್ಟ; ಸೀತಾ ಮುಗ್ಧತೆಗೆ ಕರಗಿದ ನಾಯಕ

ಸೂರಿ ಹಾಗೂ ಅಶೋಕ್ ಮಾಡುತ್ತಿರುವ ಕೀಟಲೆಯಿಂದ ರಾಮ್​ಗೆ ಫಜೀತಿ ಆಗುತ್ತಿದೆ. ಇದನ್ನು ನೋಡಿ ಸೂರಿ-ಅಶೋಕ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.  

ನಗುವಿನ ಕಿಕ್ ಕೊಡುತ್ತಿದೆ ರಾಮನ ಸಂಕಷ್ಟ; ಸೀತಾ ಮುಗ್ಧತೆಗೆ ಕರಗಿದ ನಾಯಕ
ಸೀತಾ-ರಾಮ ಧಾರಾವಾಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 03, 2023 | 8:51 AM

Share

ಮಗಳನ್ನು ಮಲಗಿಸಲು ಸೀತಾ (Seetha) ಕಥೆ ಹೇಳುವ ಮೂಲಕ ಸುಳ್ಳು ಹೇಳಬಾರದು ಎಂದು ಹೇಳಿಕೊಡುತ್ತಿದ್ದಾಳೆ. ಆದರೆ ತಾನು ಇವತ್ತು ಸುಳ್ಳು ಹೇಳಿರುವುದು ನೆನಪಾಗಿ ‘ನಾನು ನಿನ್ನ ಫ್ರೆಂಡ್​ಗಾಗಿ ಇವತ್ತು ಸುಳ್ಳು ಹೇಳಿಬಿಟ್ಟೆ. ಪಾಪ ಏನ್ ಕಷ್ಟನೋ ಏನೋ? ಒಂಟಿಯಾಗಿರುವವರ ನೋವು ಅವರಿಗೆ ಮಾತ್ರ ಗೊತ್ತು’ ಎಂದು ಮಗಳಿಗೆ ಹೇಳುವಷ್ಟರಲ್ಲಿ, ಅವಳು ನಿದ್ದೆಗೆ ಜಾರಿದ್ದಳು. ಇನ್ನು ಮನೆಯಲ್ಲಿ ಒಬ್ಬನೇ ಆಫೀಸ್ ಕೆಲಸ ಮಾಡುತ್ತಾ ಕುಳಿತಿರುವ ಮೊಮ್ಮಗನ ಬಳಿ, ತಾತ ಬಂದು ಸೀತಾ ಬಗ್ಗೆ ಮಾತನಾಡುತ್ತಿದ್ದಾನೆ. ಆದರೆ ರಾಮ್ ಅದಾವುದನ್ನು ತಲೆಗೆ ಹಾಕಿಕೊಳ್ಳದವನಂತೆ ಕೆಲಸ ಮಾಡಿದ್ದಾನೆ. ಇನ್ನು ಯಾವಾಗ ಅವನಿಗೆ ಮದುವೆ ಆಗುವ ಮನಸ್ಸು ಬರತ್ತೋ ಆ ಸಮಯಕ್ಕಾಗಿ ನಾವು ಕಾಯಬೇಕಾಗಿದೆ.

ಸೀತಾಳಿಗೆ ಯಾರಾದರೂ ಬಾಳ ಸಂಗಾತಿ ಸಿಕ್ಕಿದ್ದರೇ ಅವಳು ಚೆನ್ನಾಗಿ ಇರಬಹುದಿತ್ತು ಎಂಬ ಆಸೆ ಸಿಹಿಯ ತಾತ, ಅಜ್ಜಿಯದ್ದು. ಮದುವೆಯಾಗಲು ಲಾಯರ್ ತಯಾರಿದ್ದಾನೆ. ಒಂದು ನೆಪ ಹೇಳಿ ಸೀತಾಳನ್ನು ಭೇಟಿಯಾಗಲು ಆತ ಬಂದಿದ್ದಾನೆ. ಅವನ ಮಾತನ್ನು ತಿರಸ್ಕರಿಸಿ ಸೀತಾ ಮುಂದೆ ನಡೆದಿದ್ದಾಳೆ.

ಆಫೀಸ್​​ನಲ್ಲಿ ಬೋನಸ್ ವಿಷಯವಾಗಿ ನಡೆದಿದ್ದ ಮಾತುಕತೆ ಮುಕ್ತಾಯವಾಗಿ, ಎಲ್ಲರಿಗೂ ಬೋನಸ್ ಸಿಗುವಂತಾಗಿದೆ. ಆದರೆ ರಾಮ್ ಬಾಸ್ ಅನ್ನೋದು ಗೊತ್ತಿಲ್ಲದಿರುವ ಸೀತಾ, ತಮಗೆಲ್ಲಾ ಸಿಕ್ಕ ಬೋನಸ್ ಅವರಿಗೂ ಸಿಗಬೇಕೆಂಬ ಆಸೆಯಿಂದ, ಸೂರ್ಯ ಪ್ರಕಾಶ್ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾಳೆ. ಅವಳ ಬೇಡಿಕೆಗೆ ಬಾಸ್ ಕೂಡ ಅಸ್ತು ಎಂದಿದ್ದಾರೆ.

ಇದನ್ನೂ ಓದಿ: ಸೀತಾ ರಾಮ ಧಾರಾವಾಹಿಯ ಬಾಲನಟಿ ಸಿಹಿ ಕುರಿತ ಇಂಟರೆಸ್ಟಿಂಗ್​​ ಸಂಗತಿ ಇಲ್ಲಿದೆ

ಮನೆಯಲ್ಲಿ ರಾಮ್ ಚಿಕ್ಕಪ್ಪನಿಗೆ ಭಾರ್ಗವಿ ನನ್ನ ಹತ್ತಿರ ಮಾತನಾಡಲು ಭಯವಾ ಎಂಬ ಪ್ರಶ್ನೆ ಮುಂದಿಟ್ಟಿದ್ದು ಇದಕ್ಕೆ ಸತ್ಯನ ಉತ್ತರ ಕೇಳಿ, ಪ್ರೇಕ್ಷಕನಿಗೆ ಭಾರ್ಗವಿಯ ರಹಸ್ಯ ಖಜಾನೆಯ ಮೊದಲ ಕೀ ಸಿಕ್ಕಂತಾಗಿದೆ. ‘ನಿಜ ನನಗೆ ಗೊತ್ತಿದೆ. ಸತ್ಯ ಹೇಳಿದರೆ ತಂದೆ ನೊಂದುಕೊಳ್ಳುತ್ತಾರೆಂಬ ಭಯದಿಂದ, ರಾಮ್​ಗೆ ನೋವಾಗುತ್ತದೆ ಎಂಬ ಆತಂಕ ಇದೆ’ ಎಂಬುದು ಸತ್ಯನ ಮಾತು. ಆದರೆ ಅದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ರಾಮ್ ಚಿಕ್ಕಮ್ಮ ಭಾರ್ಗವಿ, ತನ್ನ ಆಟಕ್ಕೆ ತಕ್ಕಂತೆ ಮನೆಯವರನ್ನೆಲ್ಲಾ ಕುಣಿಸುತ್ತಿದ್ದಾಳೆ. ಆಕೆ ಸತ್ಯನಿಗೆ ಅತ್ತೆ ಮಗಳು ಹೌದು, ಅಣ್ಣನ ಹೆಂಡತಿಯೂ ಹೌದು. ಹಾಗಾದರೆ ಭಾರ್ಗವಿ ಆಸ್ತಿಗೋಸಕ್ಕರ ರಾಮ್ ತಂದೆ ತಾಯಿಯನ್ನು ಕೊಂದಿದ್ದಾಳಾ? ಸತ್ಯನಿಗೆ ಈ ವಿಷಯ ಗೊತ್ತಿದೆಯಾ? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್