
ಶಾರುಖ್ ಖಾನ್ ಹಾಗೂ ಅವರ ಕೋ ಸ್ಟಾರ್ ಕಾಜೋಲ್ ಜೊತೆ ಒಳ್ಳೆಯ ಕೆಮಿಸ್ಟ್ರಿ ಇತ್ತು. ಇವರು ತೆರೆಮೇಲೆ ರೊಮ್ಯಾಂಟಿಕ್ ಜೋಡಿ ಆಗಿ ಕಾಣಿಸಿಕೊಂಡಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೂಡಿದೆ ಎಂದೆಲ್ಲ ಮಾತನಾಡಿಕೊಂಡಿದ್ದು ಇದೆ. ಇವರು ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಕೊನೆಯಲ್ಲಿ ಅಜಯ್ ದೇವಗನ್ ಅವರನ್ನು ಮದುವೆ ಆಗುವ ಮೂಲಕ ಕಾಜೋಲ್ ಅವರು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಈ ವಿಚಾರದ ಬಗ್ಗೆ ಸ್ವತಃ ಶಾರುಖ್ ಖಾನ್ ಅವರು ಮಾತನಾಡಿದ್ದರು.
ಸಂದರ್ಶನ ಒಂದರಲ್ಲಿ ಶಾರುಖ್ ಖಾನ್ಗೆ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದರು. ‘ನಾನು ಹಾಗೂ ಕಾಜೋಲ್ ಡೇಟಿಂಗ್ ಮಾಡುತ್ತಿದ್ದೇವೆಯೇ? ಅವಳು ಇನ್ನೂ ಸಣ್ಣವಳು. ಅವಳು ತನುಜಾ ಮಗಳು. ನನ್ನ ತಂಗಿ ಇದ್ದಂತೆ. ಗೌರಿಗೂ ಅವಳು ಇಷ್ಟ’ ಎಂದಿದ್ದರು ಶಾರುಖ್. ‘ನಾನು ಜೂಹಿ, ಮಾಧುರಿ, ಮನಿಶಾ, ಶಿಲ್ಪಾ, ಸೋನಾಲಿ, ನಗ್ಮಾ ಜೊತೆ ಕೆಲಸ ಮಾಡಿದ್ದೇನೆ. ನಾನು ಅವರ ಜೊತೆ ಮಂಚ ಏರಲ್ಲ. ಕಾಜೋಲ್ ಜೊತೆಯೂ ನಾನು ಮಲಗಲ್ಲ’ ಎಂದಿದ್ದರು ಶಾರುಖ್ ಖಾನ್.
‘ಗೌರಿ ಖಾನ್ ಬಳಿ ಎಲ್ಲಾ ಗುಣಗಳು ಇವೆ. ಹೀಗಿರುವಾಗ ಬೇರೆ ಹುಡುಗಿಯರ ಹಿಂದೆ ನಾನೇಕೆ ಹೋಗಲಿ? ನಾನು ಯಾರ ಜೊತೆಗಾದರೂ ಸಂಬಂಧ ಹೊಂದಿದ್ದರೆ ಯಾರಿಗೂ ಅದು ಗೊತ್ತಾಗುವುದಿಲ್ಲ. ನಾನು ಸಖತ್ ಸ್ಮಾರ್ಟ್. ಇದೆಲ್ಲ ನಾನ್ಸೆನಸ್. ಜುಹಿ ಹಾಗೂ ನನ್ನ ಬಗ್ಗೆ ಸುದ್ದಿ ಹರಡಿದಾಗ ನಾನು ಅವರ ಜೊತೆ ಸಿನಿಮಾ ಮಾಡೋದು ನಿಲ್ಲಿಸಿದೆ. ಇದೇ ರೀತಿಯ ಸುದ್ದಿ ಮುಂದುವರಿದರೆ ನಾನು ಕಾಜೋಲ್ ಜೊತೆಯೂ ಸಿನಿಮಾ ಮಾಡಲ್ಲ’ ಎಂದಿದ್ದರು ಅವರು.
ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾ ತಲೆ ಕೂದಲಿಗೆ ಧರಿಸಿರುವ ಕ್ಲಿಪ್ಪಿನ ಬೆಲೆ ಎಷ್ಟು ಸಾವಿರ ಗೊತ್ತೆ?
ಶಾರುಖ್ ಖಾನ್ ಹಾಗೂ ಕಾಜೋಲ್ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಕಾಜೋಲ್ಗೆ ಶಾರುಖ್ ಮೇಲೆ ಕ್ರಶ್ ಇತ್ತು ಎಂದು ಹೇಳಲಾಗಿದೆ. ಈ ವಿಚಾರವನ್ನು ಕಾಜೋಲ್ ಈ ಮೊದಲು ಒಪ್ಪಿಕೊಂಡಿದ್ದರು. ಇಂದು (ಆಗಸ್ಟ್ 5) ಕಾಜೋಲ್ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:53 am, Mon, 5 August 24