Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್​ಗೆ ಶಾರುಖ್ ಖಾನ್​ ಹೊಗಳಿಕೆ; ಯಾವುದು ಆ ಮಾತು?

Shah Rukh Khan: ದಕ್ಷಿಣ ಭಾರತದಲ್ಲೂ ಶಾರುಖ್​​ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ದಳಪತಿ ವಿಜಯ್​ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಇನ್ನಷ್ಟು ಜನರನ್ನು ಅವರು ಸೆಳೆದುಕೊಂಡಿದ್ದಾರೆ.

Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್​ಗೆ ಶಾರುಖ್ ಖಾನ್​ ಹೊಗಳಿಕೆ; ಯಾವುದು ಆ ಮಾತು?
ದಳಪತಿ ವಿಜಯ್​, ಶಾರುಖ್​ ಖಾನ್​

Updated on: Jun 26, 2021 | 9:46 AM

ಬಾಲಿವುಡ್​​ನ ಸ್ಟಾರ್ ನಟ ಶಾರುಖ್​ ಖಾನ್​ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. #AskSrk ಹ್ಯಾಶ್​ಟ್ಯಾಗ್​ ಮೂಲಕ ಟ್ವಿಟರ್​ನಲ್ಲಿ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಿದರು. ಈ ವೇಳೆ ಅವರಿಗೆ ಫ್ಯಾನ್ಸ್​ ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್​ ನಟರಲ್ಲಿ ಒಬ್ಬರಾದ ದಳಪತಿ ವಿಜಯ್​ ಬಗ್ಗೆಯೂ ಈ ಪ್ರಶ್ನೋತ್ತರದಲ್ಲಿ ಪ್ರಸ್ತಾಪ ಆಯಿತು. ಅದಕ್ಕೆ ಒಂದೇ ಮಾತಿನಲ್ಲಿ ಶಾರುಖ್​ ಪ್ರತಿಕ್ರಿಯೆ ನೀಡಿದರು.

ಈ ವರ್ಷ ಆರಂಭದಲ್ಲಿ ತೆರೆಕಂಡ ಮಾಸ್ಟರ್​ ಸಿನಿಮಾದ ಯಶಸ್ಸಿನಿಂದಾಗಿ ದಳಪತಿ ವಿಜಯ್​ ಅವರ ಖ್ಯಾತಿ ಹೆಚ್ಚಿದೆ. ಬಾಲಿವುಡ್​ ಮಂದಿಗೂ ವಿಜಯ್​ ತಾಕತ್ತು ಏನೆಂಬುದು ಗೊತ್ತಿದೆ. ಹಾಗಾಗಿ, ‘ದಳಪತಿ ವಿಜಯ್​ ಬಗ್ಗೆ ಒಂದು ಪದ ಹೇಳಿ’ ಎಂದು ಅಭಿಮಾನಿಯೊಬ್ಬ ಶಾರುಖ್​ಗೆ ಬೇಡಿಕೆ ಇಟ್ಟಿದ್ದಾನೆ. ಅದಕ್ಕೆ ಉತ್ತರಿಸಿರುವ ಶಾರುಖ್​, ‘ವೆರಿ ಕೂಲ್​’ ಎಂದು ಟ್ವೀಟ್​ ಮಾಡಿದ್ದಾರೆ.

50.9 ಸಾವಿರ ಮಂದಿ ಈ ಟ್ವೀಟ್​ ಅನ್ನು ಲೈಕ್​ ಮಾಡಿದ್ದಾರೆ. 14 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿವೆ. ವಿಜಯ್​ ಮತ್ತು ಶಾರುಖ್​ ಫೋಟೋಗಳನ್ನು ಜೊತೆಯಾಗಿ ಶೇರ್​ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲೂ ಶಾರುಖ್​​ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಲ್ಲಿಯೂ ಅವರ ಸಿನಿಮಾಗಳು ಸೂಪರ್ ಹಿಟ್​ ಆಗುತ್ತವೆ. ಈಗ ವಿಜಯ್​ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಇನ್ನಷ್ಟು ಜನರನ್ನು ಅವರು ಸೆಳೆದುಕೊಂಡಿದ್ದಾರೆ.

ಜೂ.22ರಂದು ವಿಜಯ್​ ಜನ್ಮದಿನ. ಆ ಪ್ರಯುಕ್ತ ಅವರ ಹೊಸ ಸಿನಿಮಾದ ಟೈಟಲ್​ ಅನೌನ್ಸ್​ ಮಾಡಲಾಯಿತು. ವಿಜಯ್​ ನಟಿಸುತ್ತಿರುವ 65ನೇ ಸಿನಿಮಾ ಇದಾಗಿದ್ದು, ‘ಬೀಸ್ಟ್​’ ಎಂದು ಹೆಸರು ಇಡಲಾಗಿದೆ. ಇದರಲ್ಲಿ ವಿಜಯ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದಾರೆ. ಸನ್​ ಪಿಕ್ಚರ್ಸ್​ ಮೂಲಕ ‘ಬೀಸ್ಟ್’ ತಯಾರಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಫಸ್ಟ್​ಲುಕ್​ ಪೋಸ್ಟರ್​ನಲ್ಲಿ ವಿಜಯ್​ ಗನ್​ ಹಿಡಿದು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ:

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us