ನಿರ್ದೇಶಕ ಶಂಕರ್ ಅವರ ಹೆಸರು ಒಂದು ಕಾಲದಲ್ಲಿ ಬ್ರಾಂಡ್ ಆಗಿತ್ತು. ಅವರ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಹಲವಾರು ವರ್ಷಗಳಿಂದ ಅವರ ರೇಂಜ್ನಲ್ಲಿ ಒಂದೇ ಒಂದು ಸಿನಿಮಾ ಬರಲಿಲ್ಲ. ವಿಕ್ರಮ್ ಅಭಿನಯದ ‘ಐ’ ಚಿತ್ರದ ನಂತರ ಶಂಕರ್ ಅವರ ‘ನಂಬನ್’ ಸಿನಿಮಾ ಬಂದು ಹೆಚ್ಚು ಗಮನ ಸೆಳೆದಿಲ್ಲ. ಭಾರೀ ನಿರೀಕ್ಷೆಗಳ ನಡುವೆ ಬಂದ ‘2.0’ ಅಷ್ಟಾಗಿ ಗಮನ ಸೆಳೆದಿಲ್ಲ. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರ್ಮಾಪಕರಿ ಭಯ ಶುರುವಾಗಿದೆ. ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.
ಕಳೆದ ವರ್ಷ ರಿಲೀಸ್ ಆದ ‘ಇಂಡಿಯನ್ 2’ ತೀವ್ರವಾಗಿ ಸೋತಿತ್ತು. ಬಿಗ್ ಬಜೆಟ್ನಲ್ಲಿ ಬಂದ ಸಿನಿಮಾ ನಷ್ಟ ಉಂಟು ಮಾಡಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಗೇಮ್ ಚೇಂಜರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಫಲಿತಾಂಶದ ಮೇಲೆ ಶಂಕರ್ ಅವರ ವೃತ್ತಿ ಜೀವನ ನಿಂತಿದೆ ಎನ್ನಲಾಗಿದೆ. ಇತ್ತೀಚಿಗೆ ಹೆಚ್ಚಾಗಿ ವಿಎಫ್ ಎಕ್ಸ್ ಚಿತ್ರಗಳನ್ನು ಮಾಡುತ್ತಿರುವ ಶಂಕರ್ ಬಹಳ ವರ್ಷಗಳ ನಂತರ ರಾಜಕೀಯ ಸಿನಿಮಾ ಮಾಡಿದ್ದಾರೆ.
‘ಗೇಮ್ ಚೇಂಜರ್’ ನಂತರ ‘ಇಂಡಿಯನ್ 3’ ಮಾಡಬೇಕಿದೆ. ಸದ್ಯ ಈ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಒಂದು ವೇಳೆ ‘ಗೇಮ್ ಚೇಂಜರ್’ ಮೂಲಕ ನಷ್ಟ ಆದರೆ ‘ಇಂಡಿಯನ್ 3’ ಸೆಟ್ಟೇರುವುದು ಅನುಮಾನ ಆಗಲಿದೆ. ‘ಇಂಡಿಯನ್ 2’ ದುರಂತ ಆಗಿರುವುದರಿಂದ ಮೂರನೇ ಭಾಗಕ್ಕಾಗಿ ಯಾರೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಲ್ಲ. ಶಂಕರ್ ಈಗಾಗಲೇ ಮೂರನೇ ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಂಕರ್ ಅವರು ‘ವೀರಯುಗ ನಾಯಗನ್ ವೇಲ್ಪಾರಿ’ ಪುಸ್ತಕವನ್ನು ಆಧರಿಸಿ 3 ಭಾಗಗಳ ಚಿತ್ರವನ್ನು ಮಾಡಲು ಯೋಜಿಸಿದ್ದಾರೆ.
ಇದನ್ನೂ ಓದಿ: ಶಂಕರ್ನಾಗ್ ಸ್ಟೈಲ್ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ
ವಾಸ್ತವವಾಗಿ ‘ವೀರಯುಗ ನಾಯಗನ್ ವೇಲ್ಪಾರಿ’ ಶಂಕರ್ ಅವರ ಕನಸಿನ ಯೋಜನೆಯಾಗಿದೆ. ಶಂಕರ್ ಕೂಡ ಈ ಸಿನಿಮಾವನ್ನು ಖಚಿತಪಡಿಸಿದ್ದಾರೆ. ಆದರೆ, ಈಗ ಶಂಕರ್ ಅವರ ಚಾರ್ಮ್ ನೋಡಿದರೆ ನಿರ್ಮಾಪಕರಿಗೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.