AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಒಟ್ಟು ಆಸ್ತಿ, ನನ್ನ ಬಾತ್​ರೂಂ ಮೌಲ್ಯಕ್ಕೆ ಸಮವಲ್ಲ: ನಗ್ಮಾಗೆ ಹಿಯಾಳಿಸಿದ್ದ ನಾಯಕ

ಶೋಭನ್ ಬಾಬು ತೆಲುಗಿನ ಹಿರಿಯ ನಟ ಮಾತ್ರವಲ್ಲ ಅತ್ಯಂತ ಬುದ್ಧಿವಂತ ಮತ್ತು ಶ್ರೀಮಂತ ನಟ. ಒಮ್ಮೆ ನಟಿ ನಗ್ಮಾಗೆ, ‘ನಿನ್ನ ಇಡೀ ಆಸ್ತಿ ಮಾರಿದರೂ ನನ್ನ ಬಾತ್​ರೂಂ ಸಹ ಖರೀದಿಸಲಾರೆ’ ಎಂದಿದ್ದರಂತೆ ಶೋಭನ್ ಬಾಬು. ಅಷ್ಟಕ್ಕೂ ಶೋಭನ್ ಬಾಬು ಬಳಿ ಎಷ್ಟು ಆಸ್ತಿ ಇತ್ತು.

ನಿನ್ನ ಒಟ್ಟು ಆಸ್ತಿ, ನನ್ನ ಬಾತ್​ರೂಂ ಮೌಲ್ಯಕ್ಕೆ ಸಮವಲ್ಲ: ನಗ್ಮಾಗೆ ಹಿಯಾಳಿಸಿದ್ದ ನಾಯಕ
ಮಂಜುನಾಥ ಸಿ.
|

Updated on: Oct 15, 2024 | 5:33 PM

Share

ನಗ್ಮಾ, 90ರ ದಶಕದ ಅತ್ಯಂತ ಜನಪ್ರಿಯ ನಟಿ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ, ಬಾಲಿವುಡ್​ ಹಾಗೂ ಒಂದು ಚೈನೀಸ್ ಸಿನಿಮಾದಲ್ಲಿಯೂ ನಟಿಸಿದ್ದರು. ಕನ್ನಡದ ‘ಕುರುಬನ ರಾಣಿ’, ‘ಹೃದಯವಂತ’ ಸಿನಿಮಾಗಳಲ್ಲಿಯೂ ನಗ್ಮಾ ನಟಿಸಿದ್ದಾರೆ. ವರ್ಷಕ್ಕೆ 6 ರಿಂದ 10 ಸಿನಿಮಾಗಳ ವರೆಗೆ ನಟಿಸುತ್ತಿದ್ದರು ನಗ್ಮಾ. ಸ್ಟಾರ್ ನಟಿಯಾಗಿದ್ದ ಕಾರಣ ದೊಡ್ಡ ಮೊತ್ತದ ಹಣವನ್ನೇ ಸಂಪಾದನೆ ಮಾಡುತ್ತಿದ್ದರು. ಆದರೆ ತೆಲುಗಿನ ನಟರೊಬ್ಬರು ನಗ್ಮಾ ಜೊತೆ ಮಾತನಾಡುತ್ತಾ, ‘ನಿನ್ನ ಇಡೀ ಆಸ್ತಿ ಮಾರಿದರೂ ನನ್ನ ಬಾತ್​ರೂಂ ಅನ್ನು ಸಹ ಕೊಳ್ಳಲಾರೆ’ ಎಂದಿದ್ದರಂತೆ.

ಹೌದು, ತೆಲುಗಿನಲ್ಲಿ ಚಿರಂಜೀವಿ, ಬಾಲಕೃಷ್ಣ ಇನ್ನು ಕೆಲವರು ವರ್ಷಗಳಿಂದಲೂ ನಟಿಸುತ್ತಾ ಬಂದಿದ್ದಾರೆ. ಆದರೆ ಇವರೆಲ್ಲರಿಗಿಂತಲೂ ಶ್ರೀಮಂತ ನಟರೆಂದರೆ ಅದು ಶೋಬನ್ ಬಾಬು. ಈ ನಟ ಎನ್​ಟಿಆರ್, ನಾಗೇಶ್ವರ ರಾವ್, ಸೂಪರ್ ಸ್ಟಾರ್ ಕೃಷ್ಣ ಇನ್ನೂ ಕೆಲವು ಹಳೆಯ ತೆಲುಗು ಹೀರೋಗಳಿಗೆ ಹೋಲಿಸಿದರೆ ಜನಪ್ರಿಯತೆಯಲ್ಲಿ ತುಸು ಕಡಿಮೆಯೇ ಆಗಿದ್ದರೂ ಸಹ ಎಲ್ಲರಗಿಂತಲೂ ಬಹಳ ಬುದ್ಧಿವಂತರಾಗಿದ್ದರು. ಹಾಗಾಗಿ ತೆಲುಗು ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಶೋಬನ್ ಬಾಬು.

ಶೋಬನ್ ಬಾಬು ಯಾವುದೇ ಒಂದು ಸಿನಿಮಾದಲ್ಲಿ ನಟಿಸಿದರೂ ಸಹ ಆ ಸಿನಿಮಾದ ನೆನಪಿಗಾಗಿ ಜಮೀನು ಖರೀದಿ ಮಾಡುತ್ತಿದ್ದರಂತೆ. ಪ್ರತಿ ಸಿನಿಮಾಕ್ಕೂ ಒಂದೊಂದು ಸೈಟು ಅಥವಾ ಎಕರೆ ಜಮೀನು ಹೀಗೆ ಖರೀದಿ ಮಾಡುತ್ತಲೇ ಇದ್ದರಂತೆ. ಅವರನ್ನು ನೋಡಿ ಅವರ ಕೆಲವು ಗೆಳೆಯರು ಸಹ ಇದೇ ಅಭ್ಯಾಸ ಆರಂಭಿಸಿದ್ದಾರೆ. ಹೈದರಾಬಾದ್​ನಲ್ಲಿ ರಿಯಲ್ ಎಸ್ಟೇಟ್ ಆರಂಭ ಆಗುವವೇಳೆಗಾಗಲೆ ಶೋಭನ್ ಬಾಬು ಬಳಿ ಸಾಕಷ್ಟು ಆಸ್ತಿ ಇತ್ತಂತೆ.

ಇದನ್ನೂ ಓದಿ:ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕ್ರಿಕೆಟಿಗ ಡೇವಿಡ್ ವಾರ್ನರ್

ಅಂದಹಾಗೆ ಶೋಬನ್ ಬಾಬು 2008 ರಲ್ಲಿಯೇ ನಿಧನ ಹೊಂದಿದರು. ಆ ವೇಳೆಗಾಗಲೆ ಶೋಭನ್ ಬಾಬು ಬಳಿ ಸಾವಿರಾರು ಎಕರೆ ಜಮೀನು ಇತ್ತಂತೆ! ಶೋಭನ್ ಬಾಬು, ಹೈದರಾಬಾದ್, ಮದ್ರಾಸ್, ವಿಶಾಖಪಟ್ಟಣ, ಮಧುರೈ ಇಂಥಹಾ ಪ್ರಮುಖ ನಗರಗಳ ಬಳಿಯೇ ಜಮೀನು ಖರೀದಿ ಮಾಡಿದ್ದರು. ಅಲ್ಲಿಗೆ ಇಂದಿಗೆ ಆ ಜಮೀನಿನ ಮೌಲ್ಯ ಸುಮ್ಮನೆ ಅಂದಾಜು ಮಾಡಿಕೊಳ್ಳಿ. ಈಗ ಅದರ ಮೌಲ್ಯ ಲಕ್ಷ ಕೋಟಿಗೂ ಹೆಚ್ಚಿರುತ್ತದೆ. ಹಾಗಾಗಿಯೇ ಶೋಭನ್ ಬಾಬು ತೆಲುಗು ಚಿತ್ರರಂಗದ ಅತ್ಯಂತ ಶ್ರೀಮಂತ ನಟ.

ಶೋಭನ್ ಬಾಬು ಹಾಗೂ ನಗ್ಮಾ ‘ಅಡವಿ ದೊಂಗ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆಗ ನಗ್ಮಾ, ಶೋಭನ್ ಬಾಬು ಅನ್ನು ಶಾಟ್​ಗೋಸ್ಕರ ಗಂಟೆಗಳ ಕಾಲ ಕಾಯಿಸಿದಾಗ ಸಿಟ್ಟಾದ ಶೋಭನ್ ಬಾಬು, ನಗ್ಮಾ ಜೊತೆ ಜಗಳವಾಡುತ್ತಾ ‘ನೀನೇನೋ ಭಾರಿ ದೊಡ್ಡ ನಟಿ ಎಂದು ಮೆರೆಯಬೇಡ, ನಿನ್ನ ಇಡೀ ಆಸ್ತಿ ಮಾರಿದರೆ ನನ್ನ ಬಾತ್​ರೂಂ ಸಹ ಖರೀದಿ ಮಾಡಲಾಗುವುದಿಲ್ಲ’ ಎಂದಿದ್ದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ