AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಚಿತ್ರದಲ್ಲಿ ಸಂಜಯ್ ದತ್ ಮಾಡಿರೋ ಚೌಧರಿ ಅಸ್ಲಾಂ ಪಾತ್ರ ಯಾರಿಂದ ಸ್ಫೂರ್ತಿ ಪಡೆದಿದೆ ಗೊತ್ತಾ?

'ಧುರಂಧರ್ 2' ಚಿತ್ರದಲ್ಲಿ ಸಂಜಯ್ ದತ್ ನಿರ್ವಹಿಸಿರುವ ಚೌಧರಿ ಅಸ್ಲಾಂ ಪಾತ್ರವು ಪಾಕಿಸ್ತಾನದ ಕರಾಚಿಯ ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ಚೌಧರಿ ಅಸ್ಲಾಂ ಖಾನ್ ಅವರ ನಿಜಜೀವನದಿಂದ ಸ್ಫೂರ್ತಿ ಪಡೆದಿದೆ. 1984ರಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿ ವೃತ್ತಿ ಆರಂಭಿಸಿದ ಅಸ್ಲಾಂ, ಗ್ಯಾಂಗ್ ವಾರ್ ಮತ್ತು ಅಪರಾಧಿಗಳನ್ನು ಎದುರಿಸುವಲ್ಲಿ ಹೆಸರುವಾಸಿಯಾಗಿದ್ದರು.

‘ಧುರಂಧರ್ 2’ ಚಿತ್ರದಲ್ಲಿ ಸಂಜಯ್ ದತ್ ಮಾಡಿರೋ ಚೌಧರಿ ಅಸ್ಲಾಂ ಪಾತ್ರ ಯಾರಿಂದ ಸ್ಫೂರ್ತಿ ಪಡೆದಿದೆ ಗೊತ್ತಾ?
ಸಂಜಯ್ ದತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 21, 2026 | 7:46 AM

Share

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಚಿತ್ರದ ಯಶಸ್ಸು ದೊಡ್ಡದಾಗಿದೆ. ಈ ಚಿತ್ರದಲ್ಲಿ ಸಂಜಯ್ ದತ್ ನಿರ್ವಹಿಸಿದ ಪಾತ್ರ ಗಮನ ಸೆಳೆದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ‘ಧುರಂಧರ್ ದಿ ರಿವೆಂಜ್’ ಚಿತ್ರದ ಅವಧಿ ಹೆಚ್ಚಿದೆ. ಪಾಕಿಸ್ತಾನದ ಕರಾಚಿ ನಗರದಲ್ಲಿ ಭೂಗತ ಜಗತ್ತನ್ನು ಬೆಚ್ಚಿಬೀಳಿಸಿದ ನಿಜ ಜೀವನದ ಎನ್‌ಕೌಂಟರ್ ಸ್ಪೆಷಲಿಸ್ಟ್ ‘ಚೌಧರಿ ಅಸ್ಲಾಂ ಖಾನ್’ ಅವರ ಜೀವನವು ಸಂಜಯ್ ದತ್ ಪಾತ್ರ ಸ್ಫೂರ್ತಿ. 1984ರಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ವಹಿಸಿಕೊಂಡ ಅಸ್ಲಾಂ, ಕರಾಚಿಯ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಕೆಲಸ ಮಾಡುವ ಮೂಲಕ ಗಮನ ಸೆಳೆದರು. 1990ರ ದಶಕದಲ್ಲಿ, ಕರಾಚಿ ಗ್ಯಾಂಗ್ ವಾರ್‌ಗಳಿಂದ ಛಿದ್ರಗೊಂಡಾಗ, ರೌಡಿ ಶೀಟರ್‌ಗಳು ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ನಿರ್ಮೂಲನೆ ಮಾಡುವಲ್ಲಿ ಚೌಧರಿ ಅಸ್ಲಾಂ ಪ್ರಮುಖ ಪಾತ್ರ ವಹಿಸಿದರು.

ಬಿಳಿ ಸಲ್ವಾರ್ ಕಮೀಜ್ ಧರಿಸಿ, ಕೈಯಲ್ಲಿ ಸಿಗರೇಟು ಹಿಡಿದು, ನಿರ್ಭೀತ ಮುಖಭಾವ ಹೊಂದಿದ್ದ ಅವರ ಸ್ಟೈಲ್ ಆ ಕಾಲದಲ್ಲಿ ಬ್ರ್ಯಾಂಡ್ ಆಗಿತ್ತು. ಭಯೋತ್ಪಾದಕರು ಮತ್ತು ಮಾಫಿಯಾ ಡಾನ್‌ಗಳು ಅವರ ಹೆಸರನ್ನು ಕೇಳಿದ ತಕ್ಷಣ ನಡುಗುವಂತೆ ಅವರು ತಮ್ಮ ಇಮೇಜ್ ಅನ್ನು ನಿರ್ಮಿಸಿಕೊಂಡರು. ಅದಕ್ಕಾಗಿಯೇ ಸ್ಥಳೀಯ ಮಾಧ್ಯಮಗಳು ಅವರಿಗೆ ಪಾಕಿಸ್ತಾನದ ‘ಕಠಿಣ ಪೊಲೀಸ್’ ಎಂಬ ಬಿರುದನ್ನು ನೀಡಿವೆ.

ತಮ್ಮ ಸೇವಾ ಅವಧಿಯಲ್ಲಿ ನೂರಕ್ಕೂ ಹೆಚ್ಚು ಎನ್‌ಕೌಂಟರ್ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಈ ಧೈರ್ಯಶಾಲಿ ಅಧಿಕಾರಿ, ಲಿಯಾರಿ ಪ್ರದೇಶದಲ್ಲಿ ಭುಗಿಲೆದ್ದ ಗ್ಯಾಂಗ್ ವಾರ್‌ಗಳನ್ನು ಮತ್ತು ಪಾಕಿಸ್ತಾನಿ ತಾಲಿಬಾನ್‌ನ ಅರಾಜಕತೆಯನ್ನು ಕಬ್ಬಿಣದ ಮುಷ್ಟಿಯಿಂದ ಹತ್ತಿಕ್ಕಿದರು. ಅಪರಾಧಿಗಳನ್ನು ನ್ಯಾಯಾಲಯಗಳಿಗೆ ಎಳೆಯುವ ಬದಲು ಸ್ಥಳದಲ್ಲೇ ಮುಗಿಸೋದು ಬೆಸ್ಟ್ ಎಂಬುದು ಅಸ್ಲಾಂ ಖಾನ್ ಅವರ ನಿಯಮ ಆಗಿತ್ತು. ನಿರ್ದೇಶಕ ಆದಿತ್ಯ ಧರ್ ‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಪಾತ್ರಕ್ಕೆ ಅಸ್ಲಾಂ ಖಾನ್ ಸ್ಫೂರ್ತಿ ಎನ್ನಲಾಗಿದೆ.

ಇದನ್ನೂ ಓದಿ: ಶುಕ್ರವಾರವೂ ಅಬ್ಬರಿಸಿದ ‘ಧುರಂಧರ್ 2’ ಸಿನಿಮಾ; ಕನ್ನಡದಲ್ಲಿ ಗಳಿಕೆ ಎಷ್ಟು? ಅಸ್ಲಾಂ ಅವರ ಸುತ್ತಲೂ ಅನೇಕ ವಿವಾದಗಳಿವೆ. ಮಾನವ ಹಕ್ಕುಗಳು ಅವರ ಕೃತ್ಯಗಳನ್ನು ತೀವ್ರವಾಗಿ ಟೀಕಿಸಿವೆ. ಅವುಗಳಲ್ಲಿ ಹೆಚ್ಚಿನವು ನಕಲಿ ಎನ್‌ಕೌಂಟರ್‌ಗಳು ಮತ್ತು ಅವರು ಅಮಾಯಕರ ಜೀವಗಳನ್ನು ಸಹ ತೆಗೆದುಕೊಂಡಿದ್ದಾರೆ ಎಂದು ಹೇಳಿವೆ. ಈ ಆರೋಪಗಳಿಗಾಗಿ ಅವರಿಗೆ 2006ರಲ್ಲಿ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ ಅವರನ್ನು ಕ್ಲೀನ್ ಚಿಟ್‌ನೊಂದಿಗೆ ಬಿಡುಗಡೆ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us