ಯಶ್ ಜತೆ ಕ್ಲ್ಯಾಶ್ ತಪ್ಪಿಸಿಕೊಂಡ ಶ್ರದ್ಧಾ ಕಪೂರ್; ‘ಟಾಕ್ಸಿಕ್’ ಎದುರು ಬರಲ್ಲ ‘ಈಠಾ’ ಚಿತ್ರ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗಲಿದೆ. ಆ ದಿನಾಂಕದ ಆಸುಪಾಸಿನಲ್ಲಿ ‘ಈಠಾ’ ಸಿನಿಮಾದ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಈಗ ‘ಈಠಾ’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಿಕೊಳ್ಳಲು ‘ಈಠಾ’ ಚಿತ್ರತಂಡ ಈ ನಿರ್ಧಾರ ಮಾಡಿದೆ.

ಯಶ್ ಜತೆ ಕ್ಲ್ಯಾಶ್ ತಪ್ಪಿಸಿಕೊಂಡ ಶ್ರದ್ಧಾ ಕಪೂರ್; ‘ಟಾಕ್ಸಿಕ್’ ಎದುರು ಬರಲ್ಲ ‘ಈಠಾ’ ಚಿತ್ರ
Yash, Shraddha Kapoor

Updated on: Aug 11, 2026 | 7:01 PM

ನಟಿ ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ‘ಈಠಾ’ (Eetha) ಸಿನಿಮಾದ ಬಿಡುಗಡೆ ದಿನಾಂಕ ಮುಂಡೂಡಲ್ಪಟ್ಟಿದೆ. ಆಗಸ್ಟ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಡಿಸೆಂಬರ್‌ಗೆ ಮುಂದೂಡಿಕೆಯಾಗಿದೆ. ಪರಿಣಾಮವಾಗಿ, ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ (Toxic: A FairyTale for GrownUps) ಜೊತೆಗಿನ ದೊಡ್ಡ ಬಾಕ್ಸ್ ಆಫೀಸ್ ಮುಖಾಮುಖಿ ತಪ್ಪಿದಂತಾಗಿದೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ಮ್ಯಾಡಾಕ್ ಫಿಲ್ಮ್ಸ್ ಈ ಕುರಿತು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವನ್ನು ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ‘ತೂಫಾನ್‌ಗೆ ಸಿದ್ಧರಾಗಿ… ಏಕೆಂದರೆ ಈಠಾ ಡಿಸೆಂಬರ್ 4ರಂದು ಆಗಮಿಸುತ್ತಿದ್ದಾಳೆ’ ಎಂಬ ಕ್ಯಾಪ್ಷನ್​ನೊಂದಿಗೆ ಹೊಸ ಬಿಡುಗಡೆ ದಿನಾಂಕವನ್ನು ಹಂಚಿಕೊಳ್ಳಲಾಗಿದೆ.

ನಿರೀಕ್ಷೆ ಮೂಡಿಸಿದ್ದ ಈಠಾ ಟೀಸರ್:

ಜೂನ್‌ನಲ್ಲಿ ಬಿಡುಗಡೆಯಾಗಿದ್ದ ‘ಈಠಾ’ ಟೀಸರ್ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಟೀಸರ್‌ನಲ್ಲಿ ಲಾವಣಿ ಕಲಾವಿದರು ರಂಗಸ್ಥಳದಲ್ಲಿ ಪ್ರದರ್ಶನ ನೀಡುತ್ತಿರುವಾಗ, ಕೋಪಗೊಂಡ ಪ್ರೇಕ್ಷಕರ ಗುಂಪೊಂದು ಈಠಾ (ಶ್ರದ್ಧಾ ಕಪೂರ್) ವೇದಿಕೆಗೆ ಬರಬೇಕೆಂದು ಪಟ್ಟು ಹಿಡಿಯುತ್ತದೆ. ಇನ್ನೊಂದೆಡೆ, ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಈಠಾ ಹೆರಿಗೆ ನೋವಿನಿಂದ ನರಳುತ್ತಾ ಪ್ರದರ್ಶನಕ್ಕೆ ಸಿದ್ಧಳಾಗುವುದನ್ನು ತೋರಿಸಲಾಗಿದೆ.

ಪ್ರಾಣಾಪಾಯದ ಎಚ್ಚರಿಕೆಯ ನಡುವೆಯೂ ಕಲೆಯ ಮೇಲಿನ ಪ್ರೀತಿ ಮತ್ತು ಸಮಾಜಕ್ಕೆ ಹೊಸ ಮಾದರಿ ಆಗುವ ಉದ್ದೇಶದಿಂದ, ಮಗುವಿಗೆ ಜನ್ಮ ನೀಡಿದ ತಕ್ಷಣವೇ ಆಕೆ ಮತ್ತೆ ರಂಗಸ್ಥಳಕ್ಕೆ ಮರಳುತ್ತಾಳೆ. ಈ ದೃಶ್ಯಗಳು ವೀಕ್ಷಕರನ್ನು ರೋಮಾಂಚನಗೊಳಿಸಿದ್ದವು. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೊತೆಗೆ ರಣದೀಪ್ ಹೂಡಾ ಮತ್ತು ಅನಂತ್ ಜೋಶಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿವಾದದ ಸುಳಿಯಲ್ಲಿ ಶ್ರದ್ಧಾ ಕಪೂರ್ ನಟನೆಯ ‘ಈಠಾ’ ಸಿನಿಮಾ; ಶೀರ್ಷಿಕೆಗೆ ತೀವ್ರ ವಿರೋಧ

ವಿಠಾಬಾಯಿ ನಾರಾಯಣಗಾಂವ್ಕರ್ ಬಯೋಪಿಕ್:

ಈ ಸಿನಿಮಾವು ಮಹಾರಾಷ್ಟ್ರದ ಪ್ರಸಿದ್ಧ ತಮಾಷಾ ಮತ್ತು ಲಾವಣಿ ಜಾನಪದ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಕಥೆಯಾಗಿದೆ. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಜಾನಪದ ರಂಗಭೂಮಿ ಕಲಾವಿದೆಯಾಗಿ ಬೆಳೆದ ಅವರ ಸಾಹಸಮಯ ಜೀವನವನ್ನು ಈ ಚಿತ್ರ ಒಳಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us