ಲ್ಯಾಂಬೋರ್ಗಿನಿ ಬದಲು ಸ್ವಿಫ್ಟ್ ಕಾರಲ್ಲಿ ಬಂದ ಶ್ರದ್ಧಾ ಕಪೂರ್; ಸರಳತೆ ಹೊಗಳಿದ ಫ್ಯಾನ್ಸ್
ಶ್ರದ್ಧಾ ಕಪೂರ್ ಅವರು ಜುಹುನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಕಪೂರ್ ಬಳಿ ಲ್ಯಾಂಬೋರ್ಗಿನಿ ಕಾರು ಇದೆ. ಆದರೆ, ಅವರು ಮಾರುತಿ ಸ್ವಿಫ್ಟ್ ಕಾರಲ್ಲಿ ಬಂದಿದ್ದಾರೆ. ಬಿಳಿ ಬಣ್ಣದ ಕಾರು ಇದಾಗಿದ್ದು, ಶ್ರದ್ಧಾ ಸರಳತೆಯನ್ನು ಅನೇಕರು ಹೊಗಳಿದ್ದಾರೆ.
ನಟಿ ಶ್ರದ್ಧಾ ಕಪೂರ್ ಅವರು ಬಾಲಿವುಡ್ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಕುರ್ತಾ ಅಥವಾ ಟಿಶರ್ಟ್, ಜೀನ್ಸ್ ಹಾಕಿ ಕಾಣಿಸಿಕೊಳ್ಳುತ್ತಾರೆ. ಅವರು ಎಂದಿಗೂ ಬೋಲ್ಡ್ ಬಟ್ಟೆ ಹಾಕಿ ಹೊರಗೆ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. ಈ ಫೋಟೋ ವೈರಲ್ ಆಗುತ್ತವೆ. ಈಗ ಶ್ರದ್ಧಾ ಪೂರ್ ಅವರು ಮಾರುತಿ ಸುಜುಕಿ ಸ್ವಿಫ್ಟ್ ಕಾರಲ್ಲಿ ಬಂದು ಗಮನ ಸೆಳೆದಿದ್ದಾರೆ.
ಸೆಲೆಬ್ರಿಟಿಗಳು ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಓಡಾಡುವಾಗ ದುಬಾರಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಬ್ಬರು ಬೆಂಜ್ನಲ್ಲಿ ಬಂದರೆ ಮತ್ತೊಬ್ಬರು ಬಿಎಂಡಬ್ಲ್ಯೂ ಕಾರಲ್ಲಿ ಬರುತ್ತಾರೆ. ಅವರ ಬಳಿ ಕಡಿಮೆ ಬೆಲೆಯ ಕಾರಿದ್ದರೂ ಯಾರು ಏನು ಅಂದುಕೊಂಡು ಬಿಡುತ್ತಾರೇನೋ ಅಥವಾ ಸಮಾಜದಲ್ಲಿ ನಮ್ಮ ಲೆವೆಲ್ ಕಡಿಮೆ ಆಗಬಾರದು ಎನ್ನುವ ಕಾರಣಕ್ಕೆ ದುಬಾರಿ ಕಾರುಗಳಲ್ಲಿ ಓಡಾಟ ನಡೆಸಿದ ಅನೇಕರ ಸೆಲೆಬ್ರಿಟಿಗಳು ಇದ್ದಾರೆ. ಆದರೆ, ಶ್ರದ್ಧಾ ಕಪೂರ್ ಈ ವಿಚಾರದಲ್ಲಿ ಭಿನ್ನ.
ಶ್ರದ್ಧಾ ಕಪೂರ್ ಅವರು ಜುಹುನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾರುತಿ ಸ್ವಿಫ್ಟ್ ಕಾರಲ್ಲಿ ಬಂದಿದ್ದಾರೆ. ಬಿಳಿ ಬಣ್ಣದ ಕಾರು ಇದಾಗಿದ್ದು, ಶ್ರದ್ಧಾ ಸರಳತೆಯನ್ನು ಅನೇಕರು ಹೊಗಳಿದ್ದಾರೆ. ಶ್ರದ್ಧಾ ಕಪೂರ್ ಬಳಿ ಲ್ಯಾಂಬೋರ್ಗಿನಿ ಕಾರು ಇದೆ. ಇದನ್ನು ಅವರೇ ಅನೇಕ ಕಡೆಗಳಲ್ಲಿ ಚಲಾಯಿಸಿಕೊಂಡು ಓಡಾಡಿದ್ದನ್ನು ನಾವು ನೋಡಬಹುದು. ಇನ್ನು ಬೆಂಜ್ ರೀತಿಯ ಐಷಾರಾಮಿ ಕಾರುಗಳು ಇವೆ. ಆದರೆ, ಅವರು ಪ್ರಾಮುಖ್ಯತೆ ನೀಡಿದ್ದು ಸ್ವಿಫ್ಟ್ ಕಾರಿಗೆ ಅನ್ನೋದು ವಿಶೇಷ.
ಶ್ರದ್ಧಾ ಈ ಕಾರಿನ ಬಳಕೆ ಮಾಡಲು ಮತ್ತೊಂದು ಕಾರಣವೂ ಇದೆ. ಬೆಂಜ್ ಅಥವಾ ಇನ್ಯಾವುದೇ ಐಷಾರಾಮಿ ಕಾರಾದರೆ ದೊಡ್ಡದಾಗಿರುತ್ತದೆ. ಈ ಕಾರಿನಲ್ಲಿ ಪ್ರಯಾಣ ಮಾಡುವಾಗ ಅಭಿಮಾನಿಗಳು ಸುಲಭದಲ್ಲಿ ಕಂಡು ಹಿಡಿಯುತ್ತಾರೆ. ಆದರೆ, ಈ ರೀತಿಯ ಕಾರಾದರೆ ಪ್ರಯಾಣ ಮಾಡಲು ಸುಲಭ ಮತ್ತು ಯಾರೂ ಸುಲಭದಲ್ಲಿ ಗುರುತಿಸುವುದಿಲ್ಲ.
View this post on Instagram
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಹೇಗಿದೆ ಶ್ರದ್ಧಾ ಕಪೂರ್ ಫೋಟೋ? ಇಲ್ಲಿದೆ ವಿಡಿಯೋ
ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ಇತ್ತೀಚೆಗೆ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಾಲಿವುಡ್ನ ಯಾವ ಚಿತ್ರವೂ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Sat, 7 December 24