ನಟಿಯರಿಗೆ ಹೋಲಿಸಿದರೆ ಹೀರೋಗಳಿಗೆ ಕಾರ್ ಕ್ರೇಜ್ ಇರೋದು ಹೆಚ್ಚು. ಈ ಕಾರಣಕ್ಕೆ ಅನೇಕ ಹೀರೋಗಳ ಬಳಿ ಸಾಕಷ್ಟು ದುಬಾರಿ ಹಾಗೂ ಸ್ಪೋರ್ಟ್ಸ್ ಕಾರುಗಳು ಇವೆ. ಆದರೆ, ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಭಿನ್ನ. ಶ್ರದ್ಧಾ ಕಪೂರ್ ಅವರಿಗೆ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಈ ಕಾರಣಕ್ಕೆ ಕೇವಲ ಅವರು ಕಾರಿನಲ್ಲಿ ಕೂತು ಹಾಯಾಗಿ ಬರೋದಿಲ್ಲ. ಅವರು ಕಾರನ್ನು ಡ್ರೈವ್ ಕೂಡ ಮಾಡುತ್ತಾರೆ. ಈಗ ಅವರು ದುಬಾರಿ ಲೆಕ್ಸಸ್ ಎಲ್ಎಂ 350h 4 ಸೀಟರ್ ಕಾರ್ನ ಖರೀದಿ ಮಾಡಿದ್ದಾರೆ.
ಶ್ರದ್ಧಾ ಕಪೂರ್ ಅವರ ಬಳಿ 4 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಹುರಾಕಾನ್ ಟೆಕ್ನಿಕಾ ಕಾರು ಇದೆ. ಈ ಕಾರನ್ನು ಡ್ರೈವ್ ಮಾಡಿಕೊಂಡು ಅವರು ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದರು. ಇದನ್ನು ಅವರು 2023ರಲ್ಲಿ ಖರೀದಿ ಮಾಡಿದ್ದರು. ಈಗ ಅವರು ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದು, ಇದರ ಬೆಲೆ 3 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಶ್ರದ್ಧಾ ಕಪೂರ್ ಅವರು ಶುಕ್ರವಾರ ಜಿಮ್ ಸೆಷನ್ ಮುಗಿಸಿ ಹೊರಟಿದ್ದಾರೆ. ಈ ವೇಳೆ ಅವರನ್ನು ಕರೆದುಕೊಂಡು ಹೋಗಲು ಈ ದುಬಾರಿ ಲೆಕ್ಸಸ್ ಕಾರು ಬಂದಿದೆ. ಈ ಕಾರು ತುಂಬಾನೇ ಉದ್ದ ಇದ್ದರೂ ಇದರಲ್ಲಿ ಕೇವಲ ನಾಲ್ಕು ಜನರು ಮಾತ್ರ ಆಸೀನರಾಗಬಹುದು. ಇದಕ್ಕೆ ಕಾರಣ ಕಾರಿನ ಐಷಾರಾಮಿತನ. ಹೌದು, ಹಿಂಬದಿಯಲ್ಲಿ ತುಂಬಾನೇ ಐಷಾರಾಮಿ ವ್ಯವಸ್ಥೆಗಳು ಇರುವುದರಿಂದ ಈ ಕಾರಿನಲ್ಲಿ ಕೇವಲ ನಾಲ್ಕು ಜನ ಮಾತ್ರ ಕೂರಬಹುದು.
ಇದನ್ನೂ ಓದಿ: ಲ್ಯಾಂಬೋರ್ಗಿನಿ ಬದಲು ಸ್ವಿಫ್ಟ್ ಕಾರಲ್ಲಿ ಬಂದ ಶ್ರದ್ಧಾ ಕಪೂರ್; ಸರಳತೆ ಹೊಗಳಿದ ಫ್ಯಾನ್ಸ್
ಹಿಂಭಾಗದಲ್ಲಿ ರಿಕ್ಲೈನರ್ ಸೀಟ್ ವ್ಯವಸ್ಥೆ ಇದೆ. 48 ಇಂಚಿನ ಡಿಸ್ಪ್ಲೇ ಇದೆ. ಸನ್ರೂಪ್, ಫ್ರಿಡ್ಜ್ ಕೂಡ ಕಾರಿನಲ್ಲಿ ಇದೆ. 2487 ಸಿಸಿ ಇಂಜಿನ್ ಹೊಂದಿರುವ ಈ ಕಾರು ಪೆಟ್ರೋಲ್ ವೇರಿಯಂಟ್ನಲ್ಲಿ ಮಾತ್ರ ಲಭ್ಯ. ಇದು ಆಟೋಮ್ಯಾಟಿಕ್ ಗೇರಿಂಗ್ ಸಿಸ್ಟಮ್ನ ಹೊಂದಿದೆ. ಈ ಕಾರಿಗೆ ಬರೋಬ್ಬರಿ 752 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ. ಈ ಕಾರು ಈಗಾಗಲೇ ಜಾನ್ವಿ ಕಪೂರ್, ರಣಬೀರ್ ಕಪೂರ್ ಮೊದಲಾದವರ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:19 pm, Sat, 29 March 25