‘ಮಹಾನಟಿ 2 ಶೋಗೆ ಆಡಿಷನ್: ನಿಮ್ಮ ಜಿಲ್ಲೆಯಲ್ಲಿ ಯಾವಾಗ ನೋಡಿ, ಷರತ್ತು ಗಮನಿಸಿ
ಮಹಾನಟಿ ರಿಯಾಲಿಟಿ ಶೋನ ಎರಡನೇ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ. 18 ರಿಂದ 28 ವರ್ಷದ ಯುವತಿಯರಿಗೆ ಈ ಆಡಿಷನ್‌ಗೆ ಅವಕಾಶವಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 5 ರಿಂದ ಆಡಿಷನ್‌ಗಳು ನಡೆಯಲಿವೆ. ರಮೇಶ್ ಅರವಿಂದ್ ಜಡ್ಜ್ ಆಗಿರಲಿದ್ದಾರೆ. ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ವಿಳಾಸ ಪುರಾವೆಯನ್ನು ತರಬೇಕು.

‘ಮಹಾನಟಿ’ ಶೋ ಮೊದಲ ಸೀಸನ್ ಪ್ರಸಾರ ಕಂಡು ಯಶಸ್ಸು ಪಡೆದಿತ್ತು. ರಮೇಶ್ ಅರವಿಂದ್ (Ramesh Aravind), ಪ್ರೇಮಾ ಮೊದಲಾದವರು ಈ ಶೋನ ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಈ ಶೋಗೆ ಎರಡನೇ ಸೀಸನ್ ಬರುತ್ತಿದೆ. ಕಲಾವಿದರಾಗಬೇಕು, ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಕನಸು ಕಾಣುವವರಿಗೆ ಇದು ವೇದಿಕೆ ಆಗಲಿದೆ. ತಮ್ಮ ನಟನಾ ಕಲೆಯನ್ನು ತೋರಿಸಲು ಇದು ಅವಕಾಶ ಮಾಡಿಕೊಡಲಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಆಡಿಷನ್ ನಡೆಯಲಿದೆ. ಯುವತಿಯರಿಗೆ ಮಾತ್ರ ಅವಕಾಶ ಇದೆ.
‘ಮಹಾನಟಿ’ ಶೋ ಗಮನ ಸೆಳೆದಿತ್ತು. ಇದರಲ್ಲಿ ಆಗಮಿಸಿದ ಅನೇಕರು ತಮ್ಮ ನಟನೆಯನ್ನು ತೋರಿಸಿದ್ದರು. ಕಲೆಯನ್ನು ಹೊರಹಾಕಲಾಗದೆ, ಸರಿಯಾದ ವೇದಿಕೆ ಸಿಗದೇ ಒದ್ದಾಡಿದ್ದ ಅನೇಕರಿಗೆ ಈ ಶೋ ವೇದಿಕೆ ಒದಗಿಸಿಕೊಟ್ಟಿತ್ತು. ಅಂತೆಯೇ ಈಗ ಮತ್ತೊಂದು ಸೀಸನ್ ಆರಂಭ ಆಗುತ್ತಿದೆ. ರಮೇಶ್ ಅರವಿಂದ್ ಅವರು ಈ ಬಾರಿ ಜಡ್ಜ್ ಸ್ಥಾನದಲ್ಲಿ ಇರೋದು ಬಹುತೇಕ ಖಚಿತವಾಗಿದೆ. ಉಳಿದಂತೆ ಯಾರೆಲ್ಲ ಇರುತ್ತಾರೆ ಅನ್ನೋದು ಸದ್ಯದ ಕುತೂಹಲ.
ರಮೇಶ್ ಅರವಿಂದ್ ಅವರು ಈ ಮೊದಲು ‘ಸರಿಗಮಪ’ ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಮಾಡಿದ್ದರು. ಶೀಘ್ರವೇ ‘ಮಹಾನಟಿ’ಗೆ ಹೊಸ ಸೀಸನ್ ಬರಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ಈ ಶೋಗೆ ಆಡಿಷನ್ ಆರಂಭ ಆಗಲಿದೆ ಎಂದು ಕೂಡ ಹೇಳಲಾಗಿತ್ತು. ಅಂತೆಯೇ ಆಡಿಷನ್‌ಗೆ ಕರೆ ನೀಡಲಾಗಿದೆ.
View this post on Instagram
ಏಪ್ರಿಲ್ 5ರಿಂದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಮಯಗಳಲ್ಲಿ ಆಡಿಷನ್ ನಡೆಯಲಿದೆ. ಏಪ್ರಿಲ್ 5ರಂದು ಮೈಸೂರು ಹಾಗೂ ಬೆಳಗಾವಿಯಲ್ಲಿ ಆಡಿಷನ್ ನಡೆಯಲಿದೆ. ಏಪ್ರಿಲ್ 6 ಬೆಂಗಳೂರು ಮತ್ತು ಹುಬ್ಬಳ್ಳಿ, ಏಪ್ರಿಲ್ 12 ಚಿಕ್ಕ ಮಗಳೂರು ಹಾಗೂ ಬಿಜಾಪುರ, ಏಪ್ರಿಲ್ 13 ಮಡಿಕೇರಿ ಹಾಗೂ ಕೊಪ್ಪಳ, ಏಪ್ರಿಲ್ 19 ಮಂಗಳೂರು ಹಾಗೂ ಶಿರಸಿ, ಏಪ್ರಿಲ್ 20 ಹಾಸನ ಹಾಗೂ ದಾವಣಗೆರೆ, ಏಪ್ರಿಲ್ 26 ತುಮಕೂರು ಹಾಗೂ ಬಳ್ಳಾರಿ, ಏಪ್ರಿಲ್ 27 ಶಿವಮೊಗ್ಗ ಹಾಗೂ ಶಿವಮೊಗ್ಗದಲ್ಲಿ ನಡೆಯಲಿದೆ.
ಇದನ್ನೂ ಓದಿ: ರಮೇಶ್ ಅರವಿಂದ್ ನೇತೃತ್ವದಲ್ಲಿ ಬರುತ್ತಿದೆ ಹೊಸ ಶೋ; ರಿವೀಲ್ ಆಯ್ತು ಮಾಹಿತಿ
ಷರತ್ತುಗಳೇನು?
ನಿಮ್ಮ ವಯಸ್ಸು 18ರಿಂದ 28 ವರ್ಷದವರೆಗೆ ಇರಬೇಕು. ಆಡಿಷನ್‌ಗೆ ಬರುವವರು ಪಾಸ್‌ಪೋರ್ಟ್ ಸೈಜ್ನ ಫೋಟೋ ಜೊತೆ ಅಡ್ರೆಸ್ ಪ್ರೂಫ್ನ ತರಬೇಕು. ಯುವತಿಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.