ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು

ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಶುಭಾ ಪೂಂಜಾಗೆ ರಘು ಎಚ್ಚರಿಕೆ ನೀಡಿದರು.

ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 25, 2021 | 2:44 PM

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ತುಂಬಾನೇ ಚೈಲ್ಡಿಶ್​ ಆಗಿ ನಡೆದುಕೊಳ್ಳುತ್ತಾರೆ. ಮನೆಯಲ್ಲಿ ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಬಿಗ್​ ಬಾಸ್​ ಮನೆಯ ಪುರುಷ ಸ್ಪರ್ಧಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ. ಎಲ್ಲರೂ ಒಬ್ಬರ ಮೆಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ.

ಶನಿವಾರದ (ಎಪ್ರಿಲ್​ 24) ಎಪಿಸೋಡ್​ನಲ್ಲಿ  ಮುಂಜಾನೆ ಬಿಗ್​ ಬಾಸ್​ ಸಿಗರೇಟ್​ ಕಳುಹಿಸಿದ್ದರು. ಇದನ್ನು ಸ್ಟೋರ್​​ ರೂಂನಲ್ಲಿ ಇಡಲಾಗಿತ್ತು. ಅರವಿಂದ್ ಅವರ ಸಿಗರೇಟ್​ ಪ್ಯಾಕ್​ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಸಿಗರೇಟ್​ ಪ್ಯಾಕ್​ಗಳನ್ನು ಶುಭಾ ಅಡಗಿಸಿಟ್ಟರು. ಅರವಿಂದ್​ ತಮ್ಮ ಪಾಲಿಗೆ ಬಂದ ಸಿಗರೇಟ್​ ಅನ್ನು ತೆಗೆದುಕೊಂಡು ಬಂದರು.

ರಘು ಗೌಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಸ್ಟೋರ್​​ ರೂಂಗೆ ಹೋಗಿ ನೋಡಿದರೆ ಅಲ್ಲಿ ಸಿಗರೇಟ್​ ಇರಲಿಲ್ಲ. ಇದನ್ನು ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ಅಲ್ಲದೆ, ನಮ್ಮ ಸಿಗರೇಟ್​ ಎಲ್ಲೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಅರವಿಂದ್​ ಒಬ್ಬರಿಗೆ ಮಾತ್ರ ಸಿಗರೇಟ್​ ಕಳುಹಿಸಿ ನಮಗೆ ಸಿಗರೇಟ್​ ಕಳುಹಿಸಿಲ್ಲ ಅಂದರೆ ಏನರ್ಥ? ನಮಗೆ ಕೊಟ್ಟಿದ್ದ ಸಿಗರೇಟ್​ ಪ್ಯಾಕ್​ಅನ್ನು ಬೇರೆಯಾರೋ ಕದ್ದಿದ್ದಾರೆ ಎನಿಸುತ್ತದೆ ಎಂದು ಮಂಜು ಎಲ್ಲರ ಮೇಲೂ ಅನುಮಾನಪಟ್ಟರು. ಬಿಗ್​ ಬಾಸ್​ ನಮಗೆ ಇನ್ನೂ ಸಿಗರೇಟ್​ ಕಳಿಸಿರದೇ ಇರಬಹುದು. ಕಾಯೋಣ ಎನ್ನುವ ಉತ್ತರ ಕೆಲವರಿಂದ ಬಂತು.

ಈ ವೇಳೆ ರಘು, ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಎಚ್ಚರಿಕೆ ನೀಡಿದರು. ಕೆಲ ಹೊತ್ತು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವುದು ನಡೆದೇ ಇತ್ತು. ಕೊನೆಗೆ ಶುಭಾ ಪೂಂಜಾ ಅಡಗಿಸಿಟ್ಟ ಸಿಗರೇಟ್​ಗಳನ್ನು ನೀಡಿದರು. ಈ ವೇಳೆ ಪ್ರಶಾಂತ್​, ಇದೇ ಕೆಲಸ ನಾನು ಮಾಡಿದ್ದರೆ ಇಷ್ಟು ಹೊತ್ತಿಗೆ ಮುಗಿದೇ ಹೋಗಿರುತ್ತಿತ್ತು ಎಂದು ನಕ್ಕರು.

ಇದನ್ನೂ ಓದಿ:  Shubha Poonja: ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ; ರಘು ಗೌಡ ಹೀಗ್ಯಾಕಾದ್ರು?

Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್