ಅರ್ಧಕ್ಕೆ ನಿಂತಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಜೂನ್ 21ರಿಂದ ಮತ್ತೆ ಆರಂಭವಾಗುತ್ತಿದೆ. ಎಲ್ಲಾ ಸ್ಪರ್ಧಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಂಡು, ಕ್ವಾರಂಟೈನ್ನಲ್ಲಿದ್ದು, ಬಿಗ್ ಬಾಸ್ ಮನೆ ಸೇರುತ್ತಿದ್ದಾರೆ. ಈಗ ಬಿಗ್ ಬಾಸ್ ಮನೆ ಒಳ ಹೋಗುವುದಕ್ಕೂ ಮೊದಲು ಶುಭಾ ಅವರು ಮಾತನಾಡಿರುವ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಶುಭಾ ತುಂಬಾನೇ ಜಾಲಿಯಾಗಿದ್ದರು. ಬಿಗ್ ಬಾಸ್ ಅರ್ಧಕ್ಕೆ ನಿಲ್ಲುತ್ತಿದೆ ಎನ್ನುವ ವಿಚಾರ ತಿಳಿದಾಗ ಅತಿ ಹೆಚ್ಚು ಅತ್ತಿದ್ದು ಶುಭಾ ಅವರೇ. ನನಗೆ ಮನೆ ಬಿಟ್ಟು ಹೋಗೋಕೆ ಮನಸ್ಸಿಲ್ಲ ಎಂದು ಶುಭಾ ಹೇಳಿಕೊಂಡಿದ್ದರು. ಈಗ ಬಿಗ್ ಬಾಸ್ ಮತ್ತೆ ಆರಂಭವಾಗುತ್ತಿದ್ದು, 12 ಸ್ಪರ್ಧಿಗಳು ಮನೆ ಒಳಗೆ ಸೇರುತ್ತಿದ್ದಾರೆ.
ಈಗ ಕಲರ್ಸ್ ಕನ್ನಡ ವಾಹಿನಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, ‘ಪ್ಲೀಸ್ ಚಿನ್ನಿಬಾಂಬ್ ನಿನ್ನನ್ನು ಬಿಟ್ಟು ಹೋಗಲ್ಲ. ನಿನ್ನನ್ನು ಬಿಟ್ಟು ಹೋಗೋಕೆ ಇಷ್ಟ ಇಲ್ಲ’ ಎಂದು ಹೇಳಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ, ‘ಆ್ಯಕ್ಚುಲಿ ಬಿಗ್ ಬಾಸ್ ಮನೆ ಒಳಗೆ ಹೋಗೋಕೆ ನನಗೆ ಸಖತ್ ಇಷ್ಟ ಎಂದು’ ಅವರು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
View this post on Instagram
ಬಿಗ್ ಬಾಸ್ ಅರ್ಧಕ್ಕೆ ನಿಲ್ಲುವಾಗ ಅರವಿಂದ್.ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಮನೆ ಒಳಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ನೀವು ಅಂದುಕೊಂಡಂತೆ ಇಲ್ಲ ಈ ಶುಭಾ ಪೂಂಜಾ; ಶೀಘ್ರವೇ ಬಯಲಾಗಲಿದೆ ಇನ್ನೊಂದು ಮುಖ