ಗುಟ್ಟಾಗಿ ದೇವಾಲಯದಲ್ಲಿ ಮದುವೆಯಾದ ನಟ ಸಿದ್ಧಾರ್ಥ್-ಅದಿತಿ ರಾವ್ ಹೈದರಿ

Siddarth-Aditi: ತಮಿಳಿನ ಜನಪ್ರಿಯ ನಟ ಸಿದ್ಧಾರ್ಥ್ ಹಾಗೂ ಹೈದರಾಬಾದ್ ಮೂಲದ ನಟಿ ಅದಿತಿ ರಾವ್ ಹೈದರಿ ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ಮದುವೆ.

ಗುಟ್ಟಾಗಿ ದೇವಾಲಯದಲ್ಲಿ ಮದುವೆಯಾದ ನಟ ಸಿದ್ಧಾರ್ಥ್-ಅದಿತಿ ರಾವ್ ಹೈದರಿ
ಅದಿತಿ ರಾವ್ ಹೈದರಿ
Follow us
ಮಂಜುನಾಥ ಸಿ.
|

Updated on: Mar 27, 2024 | 1:36 PM

ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ತಿರುಗಾಡುತ್ತಿದ್ದ ನಟ ಸಿದ್ಧಾರ್ಥ್ (Siddharth) ಹಾಗೂ ಅದಿತಿ ರಾವ್ ಹೈದರಿ (Aditi Rao Hydari) ಅವರುಗಳು ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು. ಈ ಜೋಡಿ ಲಿವ್ ಇನ್ ರಿಲೇಷನ್​ಶೀಪ್​ನಲ್ಲಿದೆ, ಆದಷ್ಟು ಬೇಗ ವಿವಾಹವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ತೆಲಂಗಾಣದ ದೇವಾಲಯವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರುಗಳು ಗುಟ್ಟಾಗಿ ಮದುವೆಯಾಗಲಿದ್ದಾರೆ.

ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಾಪುರದಲ್ಲಿನ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರು, ಕುಟುಂಬ ಸದಸ್ಯರು ಮಾತ್ರವೇ ಈ ವೇಳೆ ಹಾಜರಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆ ಕಾರ್ಯಕ್ರಮವನ್ನು ಈ ಜೋಡಿ ಬಹಳ ಗುಟ್ಟಾಗಿ ಇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಈ ಬಗ್ಗೆ ಯಾವುದೇ ಮಾಹಿತಿಯನ್ನು ಈ ಜೋಡಿ ಹಂಚಿಕೊಂಡಿಲ್ಲ.

2021ರಲ್ಲಿ ಬಿಡುಗಡೆ ಆದ ‘ಮಹಾ ಸಮುದ್ರಂ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು. ಅಲ್ಲಿಯೇ ಪ್ರೀತಿ ಬೆಳೆದು ಕಳೆದೊಂದು ವರ್ಷದಿಂದಲೂ ಈ ಜೋಡಿ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಇದೀಗ ಇಬ್ಬರೂ ವಿವಾಹವಾಗಿದ್ದಾರೆ. 44 ವರ್ಷದ ಸಿದ್ಧಾರ್ಥ್​ಗೆ ಇದು ಎರಡನೇ ಮದುವೆ. 2003 ರಲ್ಲಿಯೇ ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾ ಎಂಬುವರನ್ನು ವಿವಾಹವಾಗಿದ್ದರು. ಅದಾದ ಬಳಿಕ 2006 ರಿಂದ ಈ ಜೋಡಿ ಪ್ರತ್ಯೇಕವಾಗಿ ಇರಲಾರಂಭಿಸಿದ್ದರು. ಕೊನೆಗೆ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಸಿದ್ಧಾರ್ಥ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಕೆಲ ಕಾಲ ಸಿದ್ಧಾರ್ಥ್ ಹೆಸರು ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಅದಿತಿ ಜೊತೆ ವಿವಾಹವಾಗಿದ್ದಾರೆ.

ಇದನ್ನೂ ಓದಿ:ಸಂಪ್ರದಾಯಕ ಲೆಹೆಂಗಾದಲ್ಲಿ ಆಕರ್ಷಕವಾಗಿ ಮಿಂಚಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿಗೂ ಸಹ ಇದು ಎರಡನೇ ಮದುವೆ. ಈಶಾನ್ ಹೈದರಿ ಹಾಗೂ ವಿದ್ಯಾ ರಾವ್ ಅವರ ಪುತ್ರಿ ಅದಿತಿ ರಾವ್ ಹೈದರಿ, ಆಮಿರ್ ಖಾನ್​ರ ಮಾಜಿ ಪತ್ನಿ ಕಿರಣ್ ರಾವ್​ರ ಹತ್ತಿರದ ಸಂಬಂಧಿ ಸಹ. ಅದಿತಿ ರಾವ್ ಹೈದರಿ ತಮ್ಮ 23ನೇ ವಯಸ್ಸಿನಲ್ಲಿಯೇ ನಟ, ವಕೀಲ ಸತ್ಯದೀಪ್ ಮಿಶ್ರಾ ವಿವಾಹವಾಗಿದ್ದರು. ಆದರೆ ತಮ್ಮ ಮದುವೆಯನ್ನು ಗುಟ್ಟಾಗಿರಿಸಿದ್ದರು. ಕೊನೆಗೆ 2013ರಲ್ಲಿ ಸತ್ಯದೀಪ್ ಮಿಶ್ರಾರಿಂದ ಅದಿತಿ ದೂರಾದರು. ಇದೀಗ ಸಿದ್ಧಾರ್ಥ್ ಜೊತೆಗೆ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಅದಿತಿ ರಾವ್​ರ ಮೊದಲ ಪತಿ ಸತ್ಯದೀಪ್ ಮಿಶ್ರಾ, ಮೀನಾ ಗುಪ್ತಾ, ವೀವ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾರನ್ನು ವಿವಾಹವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ