AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್​ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ

ಗಾಯಕ ಆದಿತ್ಯ ನಾರಾಯಣ್ ಚತ್ತೀಸಗಢದ ಕಾಲೇಜೊಂದರಲ್ಲಿ ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಪರ್ಫಾರ್ಮೆನ್ಸ್​ನ ಮೊಬೈಲ್​​ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.

ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್​ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ
ಆದಿತ್ಯ ನಾರಾಯಣ್
ರಾಜೇಶ್ ದುಗ್ಗುಮನೆ
|

Updated on: Feb 12, 2024 | 11:15 AM

Share

ಗಾಯಕ ಆದಿತ್ಯ ನಾರಯಣ್ (Aditya Narayan) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಹಾಗಂತ ಅವರ ಹಾಡು ಸೆನ್ಸೇಷನ್ ಸೃಷ್ಟಿ ಮಾಡಿಲ್ಲ. ಸಂಗೀತ ಕಾರ್ಯಕ್ರಮದ ವೇಳೆ ಆದಿತ್ಯ ಅವರು ಅಭಿಮಾನಿಯ ಫೋನ್​ನ ಕಸಿದು ಎಸೆದಿದ್ದಾರೆ. ಅವರು ಈ ರೀತಿ ವರ್ತನೆ ತೋರಿಸಿರುವುದಕ್ಕೆ ಅನೇಕರು ಆದಿತ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಈ ರೀತಿ ಅವರು ನಡೆದುಕೊಳ್ಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೆನ್ಸೇಷನ್ ಸೃಷ್ಟಿ ಮಾಡಿದೆ.

ಖ್ಯಾತ ಗಾಯಕರು ಸ್ಟೇಜ್ ಪರ್ಫಾರ್ಮೆನ್ಸ್ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣ ಪಡೆಯುತ್ತಾರೆ. ಚತ್ತೀಸಗಢದ ಕಾಲೇಜೊಂದರಲ್ಲಿ ಆದಿತ್ಯ ನಾರಾಯಣ್ ಅವರು ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಅವರ ಪರ್ಫಾರ್ಮೆನ್ಸ್​ನ ಮೊಬೈಲ್​​ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.

ಶಾರುಖ್ ಖಾನ್ ನಟನೆಯ ‘ಡಾನ್’ ಚಿತ್ರದ ‘ಆಜ್ ಕಿ ರಾತ್..’ ಹಾಡನ್ನು ಆದಿತ್ಯ ಹಾಡುತ್ತಿದ್ದರು. ಏಕಾಏಕಿ ಸಿಟ್ಟಾದ ಅವರು ಅಭಿಮಾನಿಯ ಮೊಬೈಲ್​ನ ಕಸಿದು ಜನರತ್ತ ಎಸೆದಿದ್ದಾರೆ. ಅವರ ವರ್ತನೆ ಅನೇಕರಿಗೆ ಸಿಟ್ಟು ಥರಿಸಿದೆ. ಅವರು ಈ ರೀತಿ ಮಾಡಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ.

‘ಆದಿತ್ಯ ಅವರೇ ಅಷ್ಟೊಂದು ಸಿಟ್ಟು ಏಕೆ? ಈ ರೀತಿ ಅಗೌರಯುತವಾಗಿ ನಡೆದುಕೊಳ್ಳೋದು ಎಷ್ಟು ಸರಿ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಅಭಿಮಾನಿಗಳು ಬರದೇ ಇದ್ದರೆ ನೀವು ವೇದಿಕೆ ಕಾರ್ಯಕ್ರಮ ಹೇಗೆ ನೀಡುತ್ತೀರಿ? ನಿಮ್ಮಿಂದಲೇ ನಾವು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತಾ ಶೃಂಗೇರಿ ಮೇಲಿರೋ ಅಭಿಮಾನ ಎಂಥದ್ದು? ಅದಕ್ಕೆ ಈ ವಿಡಿಯೋನೆ ಸಾಕ್ಷಿ 

ಅಸಲಿಗೆ ಆದಿತ್ಯ ನಾರಾಯಣ್ ಅವರಿಗೆ ಸಿಟ್ಟು ತರಿಸಿದ ವಿಚಾರ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದಿತ್ಯ ಅವರು ಈ ರೀತಿ ವಿವಾದ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. 2017ರಲ್ಲಿ ರಾಯಪುರ ವಿಮಾನ ನಿಲ್ದಾಣದಲ್ಲಿ ಅವರು ಸ್ಟಾಪ್​ಗಳ ಜೊತೆ ಫೈಟ್​ಗೆ ಇಳಿದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ