‘ಬಾಹುಬಲಿ’ ಶಿವಗಾಮಿ ಈಗ ‘ಡೇವಿಡ್ ರೆಡ್ಡಿ’; ರಗಡ್ ಅವತಾರದಲ್ಲಿ ರಮ್ಯಾ ಕೃಷ್ಣ

'ಬಾಹುಬಲಿ' ಖ್ಯಾತಿಯ ರಮ್ಯಾ ಕೃಷ್ಣನ್ 'ಡೇವಿಡ್ ರೆಡ್ಡಿ' ಚಿತ್ರದ ಮೂಲಕ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ 'ಕಮಲಾ ರೆಡ್ಡಿ' ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಕೈಯಲ್ಲಿ ಕತ್ತಿ ಹಿಡಿದು ರೌದ್ರಾವತಾರದಲ್ಲಿ ಕಾಣಿಸಿಕೊಂಡಿರುವ ಅವರ ಈ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

‘ಬಾಹುಬಲಿ’ ಶಿವಗಾಮಿ ಈಗ ‘ಡೇವಿಡ್ ರೆಡ್ಡಿ’; ರಗಡ್ ಅವತಾರದಲ್ಲಿ ರಮ್ಯಾ ಕೃಷ್ಣ
ಕಮಲಾ ರೆಡ್ಡಿ
Edited By:

Updated on: Sep 16, 2026 | 7:49 AM

ಮುಖ್ಯಾಂಶಗಳು

  • ಶಿವಗಾಮಿಯ ಹೊಸ ಅವತಾರ 'ಕಮಲಾ ರೆಡ್ಡಿ'
  • ಬ್ರಿಟಿಷರ ಕಾಲದ ಕಥೆಯಲ್ಲಿ ಮಂಚು ಮನೋಜ್-ರಮ್ಯಾ ಕೃಷ್ಣನ್
  • ರವಿ ಬಸ್ರೂರ್ ಸಂಗೀತದಲ್ಲಿ ಮೂಡಿಬರಲಿದೆ ಪ್ಯಾನ್ ಇಂಡಿಯಾ ಧಮಾಕಾ

‘ಬಾಹುಬಲಿ’ ಸಿನಿಮಾದ ಶಿವಗಾಮಿ ಪಾತ್ರ ಯಾರಿಗೆ ತಾನೆ ನೆನಪಿಲ್ಲ ಹೇಳಿ. ನಟಿ ರಮ್ಯಾ ಕೃಷ್ಣನ್ ಈಗ ಮತ್ತೊಮ್ಮೆ ಅಂತಹದ್ದೇ ಶಕ್ತಿಶಾಲಿ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಡೇವಿಡ್ ರೆಡ್ಡಿ’ ಎಂಬ ಹೊಸ ಸಿನಿಮಾದಲ್ಲಿ ಅವರು ಕಮಲಾ ರೆಡ್ಡಿ ಎಂಬ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಶುಭ ಕೋರಿದೆ.

ಕೈಯಲ್ಲಿ ಹಿಡಿದ ಕತ್ತಿ ಹಾಗೂ ಮುಖದಲ್ಲಿನ ಗಂಭೀರ ಭಾವನೆ ಅವರ ವಾರಿಯರ್ ಲುಕ್ ಅನ್ನು ಎತ್ತಿಹಿಡಿಯುತ್ತಿದೆ. ಈ ಹೊಸ ಪೋಸ್ಟರ್ ಕಂಡ ಅಭಿಮಾನಿಗಳಿಗೆ ತಕ್ಷಣಕ್ಕೆ ಶಿವಗಾಮಿ ದೇವಿ ನೆನಪಾಗುವುದು ಸಹಜ. ಆದರೆ ಈ ಕಮಲಾ ರೆಡ್ಡಿ ಪಾತ್ರವು ತನ್ನದೇ ಆದ ಆಳ ಮತ್ತು ಶಕ್ತಿಯನ್ನು ಹೊಂದಿರುವ ವಿಭಿನ್ನ ಪಾತ್ರವಾಗಿದೆ. ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಂಚು ಮನೋಜ್ ನಾಯಕನಾಗಿ ನಟಿಸುತ್ತಿರುವ ‘ಡೇವಿಡ್ ರೆಡ್ಡಿ’ ಬ್ರಿಟಿಷ್ ಆಳ್ವಿಕೆಯ ಕಾಲದ ಕಥೆಯಾಗಿದೆ. ಇದೊಂದು ಅದ್ಧೂರಿ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಮನೋಜ್ ಅವರ ಬಂಡಾಯಗಾರನ ರೂಪ ಎಲ್ಲರ ಗಮನ ಸೆಳೆದಿತ್ತು. ರಮ್ಯಾ ಕೃಷ್ಣನ್ ಅವರ ಈ ಹೊಸ ಪೋಸ್ಟರ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಬಿಗ್ ಬಜೆಟ್ ಸಿನಿಮಾವನ್ನು ವೆಂಕಟ್ ರೆಡ್ಡಿ ನಲ್ಲಗಂಗುಲ ಮತ್ತು ಭರತ್ ಮೊಟುಕೂರಿ ನಿರ್ಮಿಸುತ್ತಿದ್ದಾರೆ. ಹನುಮ ರೆಡ್ಡಿ ಯಕ್ಕಂಟಿ ಅವರ ನಿರ್ದೇಶನ ಈ ಚಿತ್ರಕ್ಕಿದೆ. ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆ ಈ ಆಕ್ಷನ್ ಸಿನಿಮಾಗೆ ದೊಡ್ಡ ಬಲ ನೀಡಲಿದೆ. ಮರಿಯಾ ರಿಯಾಬೋಶಾಪ್ಕಾ ನಾಯಕಿಯಾಗಿದ್ದು, ಅಭಯ್ ಡಿಯೋಲ್, ಸಮುದ್ರಕನಿ ಮತ್ತು ಕಾಂಚನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: ‘ಬಾಹುಬಲಿ’ ಮಾಡಲು ರಾಜಮೌಳಿ ಎದುರು ಹಲವು ಬೇಡಿಕೆ ಇಟ್ಟಿದ್ದ ಶ್ರೀದೇವಿ; ಆಮೇಲೆ ಆಗಿದ್ದೇನು?

ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಿಡುಗಡೆಯಾದ ಪ್ರತಿಯೊಂದು ಪೋಸ್ಟರ್ ಕೂಡ ಸಿನಿಮಾ ಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ರಮ್ಯಾ ಕೃಷ್ಣನ್ ಅವರ ಕಮಲಾ ರೆಡ್ಡಿ ಪಾತ್ರವು ಬೆಳ್ಳಿತೆರೆಯ ಮೇಲೆ ದೊಡ್ಡ ಧಮಾಕಾ ಮಾಡುವುದು ಖಚಿತವಾಗಿದೆ. ಈ ಸಿನಿಮಾ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us