ಮಗ ವಿನೀಶ್ ಜನ್ಮದಿನಕ್ಕೆ ಜೈಲಿನಿಂದಲೇ ದೊಡ್ಡ ಗಿಫ್ಟ್ ಕೊಟ್ಟ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಮಗ ವಿನೀಶ್ 18ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗದೆ ಭಾವುಕರಾಗಿದ್ದಾರೆ. ಜೈಲಿನಲ್ಲಿ ಸಿಕ್ಕ ಕಿಟ್‌ಕ್ಯಾಟ್ ಚಾಕೊಲೇಟ್ ನೀಡಿ ಆಶೀರ್ವದಿಸಿದ ಅಪ್ಪನ ಈ ಗಿಫ್ಟ್ ನೋಡಿ ಮಗ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ದರ್ಶನ್ ಬುದ್ಧಿವಾದ ಹೇಳಿ ಶುಭ ಹಾರೈಸಿದ್ದಾರೆ.

ಮುಖ್ಯಾಂಶಗಳು
- ದರ್ಶನ್ ಮಗ ವಿನೀಶ್ಗೆ 18ನೇ ಹುಟ್ಟುಹಬ್ಬ
- ದರ್ಶನ್ ಮಗ ವಿನೀಶ್ಗೆ 18ನೇ ಹುಟ್ಟುಹಬ್ಬ
- ಅಪ್ಪನ ಆಶೀರ್ವಾದಕ್ಕೆ ಮಗ ಕಂಪ್ಲೀಟ್ ಭಾವುಕ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಬಾರಿ ತಮ್ಮ ಮಗ ವಿನೀಶ್ ಅವರ 18ನೇ ವರ್ಷದ ಹುಟ್ಟುಹಬ್ಬವನ್ನು ಅವರಿಗೆ ಆಚರಿಸಲು ಸಾಧ್ಯವಾಗುತ್ತಿಲ್ಲ. ವಿನೀಶ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು, ಮಗನ ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. 18ನೇ ವರ್ಷದ ಜನ್ಮದಿನ ಆಚರಣೆಗೆ ತಂದೆ ಜೊತೆಗಿಲ್ಲ ಎಂಬ ಬೇಸರ ವಿನೀಶ್ಗೆ ಕಾಡುತ್ತಿದೆ.
ಇಂದು ದರ್ಶನ್ ಅವರನ್ನು ಭೇಟಿ ಮಾಡಲು ಮಗ ವಿನೀಶ್ ಹಾಗೂ ಸಂಬಂಧಿ ಸುಶಾಂತ್ ನಾಯ್ಡು ಜೈಲಿಗೆ ಆಗಮಿಸಿದ್ದರು. 18ನೇ ವಯಸ್ಸಿಗೆ ಕಾಲಿಟ್ಟ ಮಗನನ್ನು ಕಂಡ ದರ್ಶನ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಜೈಲಿನಲ್ಲಿ ತಮಗೆ ಲಭ್ಯವಿದ್ದ ‘ಕಿಟ್‌ಕ್ಯಾಟ್’ ಚಾಕೊಲೇಟ್ ಅನ್ನು ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ.
ಅಪ್ಪ ಜೈಲಿನಲ್ಲಿ ನೀಡಿದ ಈ ಸರಳ ಉಡುಗೊರೆಗೆ ಮಗ ವಿನೀಶ್ ಸಂಪೂರ್ಣ ಭಾವುಕರಾಗಿದ್ದಾರೆ. ‘ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.
View this post on Instagram
ಇದೇ ವೇಳೆ ಮಗನಿಗೆ ಕಿವಿಮಾತು ಹೇಳಿದ ದರ್ಶನ್, “ಈಗ ನೀನು ಟಿನೇಜ್‌ಗೆ ಕಾಲಿಟ್ಟಿದ್ದೀಯಾ. ಇನ್ಮುಂದೆ ನಿನ್ನ ಬಗ್ಗೆ ಯಾವುದೇ ದೂರುಗಳು ಅಥವಾ ಕಂಪ್ಲೇಂಟ್‌ಗಳು ಬರಬಾರದು. ಜವಾಬ್ದಾರಿಯಿಂದ ನಡೆದುಕೋ’ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ, ಶುಭ ಹಾರೈಸಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿಗೆ ಹೋದ ಬಳಿಕ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದಾರೆ. ಈಗ ಅವರ ವಿರುದ್ಧ ಆಪ್ತ ಎನಿಸಿಕೊಂಡಿದ್ದ ಧನ್ವೀರ್ ಬಂಡಾಯ ಎದ್ದಿದ್ದು, ಕುಟುಂಬದ ಚಿಂತೆಯನ್ನು ಹೆಚ್ಚಿಸಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ಕೇಸ್ ದಾಖಲು ಮಾಡಿದರೆ, ಧನ್ವೀರ್ ತಂದೆ ಪ್ರತಿ ದೂರು ದಾಖಲು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:28 pm, Sat, 31 October 26




