AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆದ ‘ಸ್ಪೈಡರ್​ ಮ್ಯಾನ್’ ಒಟ್ಟು ಗಳಿಕೆ ಎಷ್ಟು?

Spider Man Brand New Day: ಇತ್ತೀಚೆಗಷ್ಟೆ ಬ್ಲಾಕ್ ಬಸ್ಟರ್ ಎನಿಸಿಕೊಂಡ ‘ಧುರಂಧರ್ 2’ ಸಿನಿಮಾ 1850 ಕೋಟಿ ರೂಪಾಯಿ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿತ್ತು. ಇದು ಭಾರತೀಯ ಸಿನಿಮಾದ ಮಟ್ಟಿಗೆ ಬಲು ದೊಡ್ಡ ಗಳಿಕೆ. ಆದರೆ ಹಾಲಿವುಡ್ ಸಿನಿಮಾಗಳಿಗೆ ಈ ಮೊತ್ತ ಲೆಕ್ಕವೇ ಇಲ್ಲ. ಕೆಲ ವಾರಗಳ ಹಿಂದಷ್ಟೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರ ಆಶ್ಚರ್ಯ ಮೂಡಿಸುವಂತಿದೆ.

ವಿಶ್ವಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆದ ‘ಸ್ಪೈಡರ್​ ಮ್ಯಾನ್’ ಒಟ್ಟು ಗಳಿಕೆ ಎಷ್ಟು?
Spider Man
ಮಂಜುನಾಥ ಸಿ.
|

Updated on:Sep 01, 2026 | 2:21 PM

Share

ಭಾರತದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದಾದಲ್ಲಿ 1500 ಕೋಟಿಯಿಂದ 2000 ಕೋಟಿ ಗಳಿಕೆ ಮಾಡುತ್ತವೆ. ಇತ್ತೀಚೆಗಷ್ಟೆ ಬ್ಲಾಕ್ ಬಸ್ಟರ್ ಎನಿಸಿಕೊಂಡ ‘ಧುರಂಧರ್ 2’ (Dhurandhar) ಸಿನಿಮಾ 1850 ಕೋಟಿ ರೂಪಾಯಿ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿತ್ತು. ಇದು ಭಾರತೀಯ ಸಿನಿಮಾದ ಮಟ್ಟಿಗೆ ಬಲು ದೊಡ್ಡ ಗಳಿಕೆ. ಆದರೆ ಹಾಲಿವುಡ್ ಸಿನಿಮಾಗಳಿಗೆ ಈ ಮೊತ್ತ ಲೆಕ್ಕವೇ ಇಲ್ಲ. ಕೆಲ ವಾರಗಳ ಹಿಂದಷ್ಟೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರ ಆಶ್ಚರ್ಯ ಮೂಡಿಸುವಂತಿದೆ.

ಟಾಮ್ ಹಾಲಂಡ್ ಅಭಿನಯದ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾವು ಜುಲೈ 30ರಂದು ವಿಶ್ವದೆಲ್ಲೆಡೆ ಬಿಡುಗಡೆ ಆಗಿತ್ತು. ಈ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಖ್ಯಾತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರ ‘ಅವತಾರ್: ದಿ ವೇ ಆಫ್ ವಾಟರ್’ ಹಾಗೂ ಅವರದ್ದೇ ನಿರ್ದೇಶನದ ‘ಟೈಟಾನಿಕ್’ ಸಿನಿಮಾಗಳ ದಾಖಲೆಗಳನ್ನು ಮುರಿದು ವಿಶ್ವದ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.

ಮಾರ್ವೆಲ್ ಅವರ ಈ ಸೂಪರ್‌ಹೀರೋ ಸಿನಿಮಾ ವಿಶ್ವಾದ್ಯಂತ 2.3 ಬಿಲಿಯನ್ ಡಾಲರ್ ಗಳಿಕೆ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ 22.8 ಸಾವಿರ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅದೂ ಕೇವಲ ಒಂದು ತಿಂಗಳ ಅವಧಿಯಲ್ಲಿ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗಿನಿಂದಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಚಲನಚಿತ್ರವು, ಹಾಲಿವುಡ್‌ ಸಿನಿಮಾಗಳ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಸಿನಿಮಾಗಳ ಸಾಲಿಗೆ ಸೇರಿದೆ.

ಇದನ್ನೂ ಓದಿ:‘ಇರುಮುಡಿ’ ಸಿನಿಮಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ‘ಟಾಕ್ಸಿಕ್’ ಡಿಸ್ಟ್ರಿಬ್ಯೂಟರ್

‘ಸ್ಪೈಡರ್​ಮ್ಯಾನ್’ ಸಿನಿಮಾ ಕ್ಕೆ ಮುಂಚೆ ‘ಅತಾರ್: ದಿ ವೇ ಆಫ್ ವಾಟರ್’ ಸಿನಿಮಾ ಮೂರನೇ ಸ್ಥಾನದಲ್ಲಿತ್ತು. ಈ ಸಿನಿಮಾ ಸಹ 22 ಸಾವಿರ ಕೋಟಿ ಗಳಿಕೆ ಮಾಡಿತ್ತು. ಆ ದಾಖಲೆಯನ್ನು ಹಿಂದಿಕ್ಕಿ, ಇದೀಗ ‘ಸ್ಪೈಡರ್​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಮೂರನೇ ಸ್ಥಾನಕ್ಕೇರಿದೆ. ಎರಡನೇ ಸ್ಥಾನದಲ್ಲಿ ಮಾರ್ವೆಲ್ ಅವರದ್ದೇ ಆಗಿರುವ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾ ಇದೆ. ಈ ಸಿನಿಮಾ 26.50 ಸಾವಿರ ಕೋಟಿ ಗಳಿಕೆ ಮಾಡಿತ್ತು. ಮೊದಲ ಸ್ಥಾನದಲ್ಲಿ 17 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಇದೆ. ಈ ಸಿನಿಮಾ ಆಗಿನ ಕಾಲದಲ್ಲೇ ಬಾಕ್ಸ್ ಆಫೀಸ್​​ನಲ್ಲಿ 28 ಸಾವಿರ ಕೋಟಿ (ಈಗಿನ ಡಾಲರ್ ಲೆಕ್ಕಾಚಾರದಲ್ಲಿ) ಗಳಿಕೆ ಮಾಡಿತ್ತು.

‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಸಹ ಒಳ್ಳೆಯ ಗಳಿಕೆ ಮಾಡಿದೆ. ಈ ಸಿನಿಮಾ ಈ ವರೆಗೆ ಭಾರತದಲ್ಲಿ ಸುಮಾರು 590 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲೂ ದಾಖಲೆ ಬರೆದಿರುವ ಈ ಸಿನಿಮಾ, ಭಾರತದ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾ ಎನಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Tue, 1 September 26

Follow Us
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಕೆಪಿಎಸ್​ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ
ಇನ್ಸ್‌ಪೆಕ್ಟರ್ ಧನಂಜಯ್​ಗೆ ಮತ್ತೊಂದು ಪ್ರಕರಣದಲ್ಲಿ ಸಂಕಷ್ಟ