Dhamaka: 100 ಕೋಟಿ ರೂಪಾಯಿ ಗಳಿಸಿದ ‘ಧಮಾಕಾ’ ಚಿತ್ರ; ತೆಲುಗಿನಲ್ಲಿ ಹೆಚ್ಚಿತು ಕನ್ನಡತಿ ಶ್ರೀಲೀಲಾ ಹವಾ

| Updated By: ಮದನ್​ ಕುಮಾರ್​

Updated on: Jan 06, 2023 | 7:40 PM

Dhamaka Movie Box Office Collection: ಅನೇಕ ಚಿತ್ರಮಂದಿರಗಳಲ್ಲಿ ಇಂದಿಗೂ ‘ಧಮಾಕಾ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಿಂದ ಶ್ರೀಲೀಲಾ ಅವರ ಚಾರ್ಮ್​ ಹೆಚ್ಚಿದೆ.

Dhamaka: 100 ಕೋಟಿ ರೂಪಾಯಿ ಗಳಿಸಿದ ‘ಧಮಾಕಾ’ ಚಿತ್ರ; ತೆಲುಗಿನಲ್ಲಿ ಹೆಚ್ಚಿತು ಕನ್ನಡತಿ ಶ್ರೀಲೀಲಾ ಹವಾ
ರವಿತೇಜ, ಶ್ರೀಲೀಲಾ
Follow us on

ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ನಟಿ ಶ್ರೀಲೀಲಾ ಅವರಿಗೆ ಟಾಲಿವುಡ್​ನಲ್ಲಿ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ರವಿತೇಜ ಜೊತೆ ಅವರು ನಟಿಸಿರುವ ‘ಧಮಾಕಾ’ ಸಿನಿಮಾ (Dhamaka Movie)  ಧೂಳೆಬ್ಬಿಸುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ರವಿತೇಜ (Ravi Teja) ಅವರ ವೃತ್ತಿಜೀವನಕ್ಕೆ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ಅವರಿಗೆ ಜೋಡಿಯಾಗಿ ನಟಿಸಿರುವ ಕನ್ನಡದ ಹುಡುಗಿ ಶ್ರೀಲೀಲಾ ಅವರ ಖ್ಯಾತಿ ಕೂಡ ಟಾಲಿವುಡ್​ ವಲಯದಲ್ಲಿ ಹೆಚ್ಚಾಗಿದೆ. ಅವರಿಗೆ ಇನ್ನಷ್ಟು ಅವಕಾಶಗಳು ಹರಿದುಬರಲು ಆರಂಭಿಸಿವೆ. ಶ್ರೀಲೀಲಾ (Sreeleela) ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

2022ರ ಡಿಸೆಂಬರ್​ 23ರಂದು ‘ಧಮಾಕಾ’ ಚಿತ್ರ ಬಿಡುಗಡೆ ಆಯಿತು. ಆರಂಭದಲ್ಲಿಯೇ ಈ ಸಿನಿಮಾಗೆ ಒಳ್ಳೆಯ ಓಪನಿಂಗ್​ ಸಿಕ್ಕಿತು. ತ್ರಿನಾದ ರಾವ್​ ನಕ್ಕಿನ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವನ್ನು ಚಿತ್ರಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ರವಿತೇಜ ಅವರ ಎನರ್ಜಿಗೆ ಚಪ್ಪಾಳೆ ಸಿಕ್ಕಿದೆ. ಜೊತೆಗೆ ಹೀರೋಯಿನ್ ಶ್ರೀಲೀಲಾ ಕೂಡ ಮಿಂಚಿದ್ದಾರೆ. ಈ ಸಿನಿಮಾದ ಗೆಲುವಿನಿಂದ ಅವರ ಚಾರ್ಮ್​ ಹೆಚ್ಚಿದೆ. ಬಿಡುಗಡೆಯಾಗಿ 14ನೇ ದಿನಕ್ಕೆ ಈ ಚಿತ್ರದ ಒಟ್ಟು ಕಲೆಕ್ಷನ್​ 100 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ
Sreeleela: ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಶ್ರೀಲೀಲಾ; ಇಲ್ಲಿದೆ ಇಂಟರೆಸ್ಟಿಂಗ್​ ಅಪ್​ಡೇಟ್​
ಗಂಡನ ಮನೆಯ ಬೀಗ ಮುರಿದ ಶ್ರೀಲೀಲಾ ತಾಯಿ ಸ್ವರ್ಣಲತಾ; ಇಲ್ಲಿದೆ ವಿಡಿಯೋ
Swarnalatha: ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಮತ್ತೆ ಎಫ್​ಐಆರ್​; ಪತಿಯಿಂದಲೇ ಪತ್ನಿ ವಿರು​ದ್ಧ ದೂರು
Swarnalatha: ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾಗೆ ಬಂಧನ ಭೀತಿ; ಪೊಲೀಸರಿಂದ ಹುಡುಕಾಟ: ಏನಿದು ಕೇಸ್​?

ಇದನ್ನೂ ಓದಿ: ‘ಧಮಾಕ’ ಚಿತ್ರದಲ್ಲಿ ಮಿಂಚಿದ ಶ್ರೀಲೀಲಾ

ಅನೇಕ ಚಿತ್ರಮಂದಿರಗಳಲ್ಲಿ ಇಂದಿಗೂ ‘ಧಮಾಕಾ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲಿನ ಫ್ಯಾನ್ಸ್​ ಕೂಡ ಮುಗಿಬಿದ್ದು ನೋಡುತ್ತಿದ್ದಾರೆ. ಅಚ್ಚರಿ ಎಂದರೆ ನಾನ್​-ಥಿಯಟ್ರಿಕಲ್​ ಹಕ್ಕುಗಳಿಂದಲೇ ಈ ಸಿನಿಮಾಗೆ ಸಖತ್​ ಹಣ ಸಿಕ್ಕಿದೆ. ಸಿನಿಮಾಗೆ ಹಾಕಿದ ಬಂಡವಾಳ ಅದರಿಂದಲೇ ವಾಪಸ್​ ಬಂದಿದೆ. ಚಿತ್ರಮಂದಿರದಲ್ಲಿ ಕಲೆಕ್ಟ್​ ಆಗಿದ್ದೆಲ್ಲವೂ ನಿರ್ಮಾಪಕರು ಮತ್ತು ವಿತರಕರ ಪಾಲಿಗೆ ಹೆಚ್ಚುವರಿ ಲಾಭ ಮಾಡಿಕೊಟ್ಟಿದೆ.

ಇದನ್ನೂ ಓದಿ: ಬೋಲ್ಡ್ ಲುಕ್​ನಲ್ಲಿ ಶ್ರೀಲೀಲಾ

ಈ ವಾರ ಪೂರ್ತಿ ‘ಧಮಾಕಾ’ ಧೂಳೆಬ್ಬಿಸುವ ಸಾಧ್ಯತೆ ಇದೆ. ಇನ್ನೊಂದು ವೀಕೆಂಡ್​ ಕೂಡ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಂಡರೆ ಒಟ್ಟು ಕಲೆಕ್ಷನ್ 120 ಕೋಟಿ ರೂಪಾಯಿ ದಾಟುವ ಸಂಭವ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾವ್​ ರಮೇಶ್​, ಪವಿತ್ರಾ ಲೋಕೇಶ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶ್ರೀಲೀಲಾ ಅವರು ತೆಲುಗಿನಲ್ಲಿ ಮೊದಲು ನಟಿಸಿದ ಸಿನಿಮಾ ‘ಪೆಳ್ಳಿ ಸಂದಡಿ’. ಈ ಚಿತ್ರದಲ್ಲಿ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡರು. 2ನೇ ಸಿನಿಮಾ ‘ಧಮಾಕಾ’ ಸೂಪರ್​ ಹಿಟ್​ ಆಗಿದೆ. ಹಾಗಾಗಿ ಟಾಲಿವುಡ್​ ಪ್ರೇಕ್ಷಕರಿಗೆ ಶ್ರೀಲೀಲಾ ಹೆಚ್ಚು ಇಷ್ಟ ಆಗಿದ್ದಾರೆ. ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್​’ ಚಿತ್ರಕ್ಕೂ ಅವರೇ ನಾಯಕಿ. ಕನ್ನಡ-ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:40 pm, Fri, 6 January 23