ನಿರೂಪಕಿ ಅವಾಚ್ಯ ಶಬ್ದಗಳಿಂದ ಬೈದ ಖ್ಯಾತ ನಟ ಅರೆಸ್ಟ್; ತಕ್ಷಣವೇ ಸಿಕ್ತು ಜಾಮೀನು
ಶ್ರೀನಾಥ್ ಭಾಸಿ ಅವರು ಮಲಯಾಳಂನಲ್ಲಿ ಗುರುತಿಸಿಕೊಂಡಿದ್ದಾರೆ. ‘ಹೋಮ್’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಮಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಸೆಲೆಬ್ರಿಟಿಗಳು ಕೆಲವೊಮ್ಮೆ ಗೊತ್ತಿದ್ದೂ ತಪ್ಪು ಮಾಡುತ್ತಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಈಗ ಮಲಯಾಳಂ ನಟ ಶ್ರೀನಾಥ್ ಭಾಸಿ (Sreenath Bhasi) ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂಟ್ಯೂಬ್ (YouTube) ಚಾನೆಲ್ ಒಂದರ ಮಹಿಳಾ ಆ್ಯಂಕರ್ ವಿರುದ್ಧ ಅವರು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದರು. ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಶ್ರೀನಾಥ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ.
ಶ್ರೀನಾಥ್ ಭಾಸಿ ಅವರು ಮಲಯಾಳಂನಲ್ಲಿ ಗುರುತಿಸಿಕೊಂಡಿದ್ದಾರೆ. ‘ಹೋಮ್’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಮಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಶ್ರೀನಾಥ್ರನ್ನು ಬಂಧಿಸಿರುವ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.
ನಡೆದಿದ್ದೇನು?
ಶ್ರೀನಾಥ್ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಮಹಿಳಾ ಆ್ಯಂಕರ್ಗೆ ಕೆಟ್ಟ ಶಬ್ದಗಳಿಂದ ಶ್ರೀನಾಥ್ ಬೈದಿದ್ದಾರೆ. ಕ್ಯಾಮೆರಾ ಪರ್ಸನ್ ವಿರುದ್ಧವೂ ಅವಾಚ್ಯ ಶಬ್ದಗಳ ಬಳಕೆ ಆಗಿದೆ. ನಂತರ ಕ್ಯಾಮೆರಾ ಬಂದ್ ಮಾಡುವಂತೆ ಶ್ರೀನಾಥ್ ಆವಾಜ್ ಹಾಕಿದ್ದರು. ಈ ಬಗ್ಗೆ ಆ್ಯಂಕರ್ ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ವಕೀಲರ ಜತೆ ಬಂದ ನಟ
ಶ್ರೀನಾಥ್ ಅವರು ವಕೀಲರ ಜತೆಯೇ ಪೊಲೀಸ್ ಠಾಣೆಗೆ ಬಂದಿದ್ದಾರೆ. ಅವರು ಠಾಣೆಗೆ ಬಂದ ಕೆಲವೇ ಹೊತ್ತಿನಲ್ಲಿ ಜಾಮೀನು ಸಿಕ್ಕಿದೆ. ಈ ಕಾರಣಕ್ಕೆ ಅವರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತೀವ್ರತೆಯನ್ನು ಆಧರಿಸಿ ಮತ್ತಷ್ಟು ಕೇಸ್ ದಾಖಲಿಸಬೇಕೋ ಅಥವಾ ಬೇಡವೋ ಎಂಬುದು ನಿರ್ಧಾರ ಆಗಲಿದೆ.
ಕಿರಿಕ್ ಇದೇ ಮೊದಲಲ್ಲ
ಶ್ರೀನಾಥ್ ಅವರು ಈ ರೀತಿ ಕೆಟ್ಟದಾಗಿ ನಡೆದುಕೊಂಡಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅವರು ಆರ್ಜೆ ಜತೆ ಮಾತನಾಡುವಾಗ ಕೆಟ್ಟ ಪದಗಳನ್ನು ಪ್ರಯೋಗಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಮಲಯಾಳಂನ ನಟ ಶರತ್ ಚಂದ್ರನ್ ಇನ್ನಿಲ್ಲ; ಸಣ್ಣ ವಯಸ್ಸಿಗೆ ನಿಧನ ಹೊಂದಿದ ಹೀರೋ
2021ರಲ್ಲಿ ತೆರೆಗೆ ಬಂದ ಮಮ್ಮೂಟಿ ನಟನೆಯ ‘ಭೀಷ್ಮ ಪರ್ವಂ’ ಚಿತ್ರದಲ್ಲಿ ಶ್ರೀನಾಥ್ ಕೊನೆಯದಾಗಿ ಕಾಣಿಸಿಕೊಂಡರು. ಅದಾದ ಬಳಿಕ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ ಹಲವು ಚಿತ್ರಗಳಲ್ಲಿ ಶ್ರೀನಾಥ್ ಬ್ಯುಸಿ ಇದ್ದಾರೆ.