ಖ್ಯಾತ ನಟನಿಗೆ ಕಾಡುತ್ತಿದೆ ಮಾನಸಿಕ ಅಸ್ವಸ್ಥತೆ? ಹಬ್ಬಿದೆ ಸುದ್ದಿ

ತಮಿಳು ನಟ ಶ್ರೀ ನಟರಾಜನ್ ಅವರು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಲೋಕೇಶ್ ಕನಗರಾಜ್ ಅವರು ಖಾಸಗಿತನಕ್ಕಾಗಿ ಮನವಿ ಮಾಡಿದ್ದಾರೆ. ಆರ್ಥಿಕ ಸಮಸ್ಯೆಗಳು ಮತ್ತು ಚಿತ್ರರಂಗದಲ್ಲಿನ ಸವಾಲುಗಳು ಇದಕ್ಕೆ ಕಾರಣ ಎನ್ನಲಾಗಿದೆ. ಅವರ ಆಪ್ತ ಮಿತ್ರರು ಮತ್ತು ಕುಟುಂಬ ಸದಸ್ಯರು ಅವರಿಗೆ ಬೆಂಬಲ ನೀಡಲು ಪ್ರಯತ್ನಿಸುತ್ತಿದ್ದಾರೆ. ಮಾನಸಿಕ ಆರೋಗ್ಯದ ಮಹತ್ವ ಮತ್ತು ಸೆಲೆಬ್ರಿಟಿಗಳ ಮೇಲಿನ ಒತ್ತಡದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

ಖ್ಯಾತ ನಟನಿಗೆ ಕಾಡುತ್ತಿದೆ ಮಾನಸಿಕ ಅಸ್ವಸ್ಥತೆ? ಹಬ್ಬಿದೆ ಸುದ್ದಿ
Natarajan
Edited By:

Updated on: Apr 19, 2025 | 8:24 PM

ಅನೇಕ ಸೆಲೆಬ್ರಿಟಿಗಳಿಗೆ ಖಿನ್ನತೆ ಕಾಡಿದ ಉದಾಹರಣೆ ಇದೆ. ಇದಕ್ಕೆ ಕಾರಣ ಹಲವು. ಈಗ ತಮಿಳಿನ ಶ್ರೀ ನಟರಾಜನ್ (Sri Natarajan) ಅವರಿಗೂ ಇದೇ ರೀತಿ ಮಾನಸಿಕ ತೊಂದರೆ ಆಗಿದೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದು. ಈ ಬಗ್ಗೆ ಖ್ಯಾ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನದ ‘ಮಾನಗರಂ’ ಸಿನಿಮಾ ಮೂಲಕ ಜನಪ್ರೀಯತೆ ಹೆಚ್ಚಿಸಿಕೊಂಡರು.

ಶ್ರೀ ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆ ಆಗಿದೆ. ಈ ಬಗ್ಗೆ ಕುಟುಂಬದವರಿಗೆ ಆತಂಕ ಇದೆ. ಇದರ ಜೊತೆಗೆ ಅವರ ಬಗ್ಗೆ ಒಂದಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ವಿಚಾರವು ಕುಟುಂಬದವರನ್ನು ಮತ್ತಷ್ಟು ಚಿಂತೆಗೆ ಈಡು ಮಾಡಿದೆ. ಹೀಗಾಗಿ, ಖಾಸಗಿತನ ನೀಡುವಂತೆ ಅವರು ಜನರ ಬಳಿ ಕೋರಿದ್ದಾಗಿ ಲೋಕೇಶ್ ತಿಳಿಸಿದ್ದಾರೆ.  ನಟರಾಜನ್ ಅವರಿಗೆ ನಿಜಕ್ಕೂ ಆಗಿದ್ದು ಏನು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಶ್ರೀ ನಟರಾಜನ್ ಅವರು 2012ರಲ್ಲಿ ಚಿತ್ರರಂಗಕ್ಕೆ ಬಂದರು. ‘ವಾಲಕ್ಕು ಎನ್ 18/9’ ಅವರ ನಟನೆಯ ಮೊದಲ ಸಿನಿಮಾ ಆ ಬಳಿಕ ಕೆಲವು ಚಿತ್ರಗಳನ್ನು ಮಾಡಿದರು. ಅವರು ತಮಿಳು ಬಿಗ್ ಬಾಸ್​ನ ಮೊದಲ ಸೀಸನ್​ನಲ್ಲೂ ಭಾಗಿ ಆಗಿದ್ದರು. ವೈಯಕ್ತಿಕ ಕಾರಣ ನೀಡಿ ಅವರು ಕೇವಲ ನಾಲ್ಕನೇ ದಿನವೇ ಮನೆಯಿಂದ ಹೊರ ನಡೆದರು.

ಇತ್ತೀಎಗೆ ಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರ ಗುರುತೇ ಸಿಗದಷ್ಟು ಬದಲಾಗಿದ್ದರು. ಅವರು ಕುಟುಂಬದಿಂದ ದೂರವೇ ಇದ್ದಾರೆ ಎನ್ನಲಾಗುತ್ತಿದೆ. ಅವರ ಆಪ್ತ ಮಿತ್ರರು ಸಹಾಯ ಮಾಡುವ  ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ, ಯಾವುದೂ ಸಹಾಯ ಆಗುತ್ತಿಲ್ಲ ಎನ್ನಲಾಗಿದೆ.

ಶ್ರೀ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅನೇಕ ನಿರ್ಮಾಣ ಸಂಸ್ಥೆಗಳು ಅವರಿಗೆ ಹಣ ನೀಡುತ್ತಿಲ್ಲ. ಸಿನಿಮಾದಲ್ಲಿ ನಟಿಸಿದ ಬಳಿಕ ಸಂಭಾವನೆ ಕೊಡದೆ ಯಾಮಾರಿಸುತ್ತಿದ್ದಾರೆ. ಸೆಲೆಬ್ರಿಟಿ ಪಟ್ಟ ಪಡೆದ ಹೊರತಾಗಿಯೂ ಅವರಿಗೆ ಜೀವನ ನಡೆಸೋದು ಕಷ್ಟ ಆಗುತ್ತಿದೆ. ಈ ಎಲ್ಲಾ ವಿಚಾರಗಳು ಅವರನ್ನು ಸಾಕಷ್ಟು ಕುಗ್ಗಿಸಿದೆ. ಅವರು ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ