ವಿಡಿಯೋ ಗೇಮ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಎಸ್ಎಸ್ ರಾಜಮೌಳಿ
SS Rajamouli-Karthikeya: ಎಸ್ಎಸ್ ರಾಜಮೌಳಿ ತಂತ್ರಜ್ಞಾನದ ಬಗ್ಗೆ ವಿಪರೀತ ಕುತೂಹಲ, ನಂಬಿಕೆ ಹೊಂದಿದ್ದಾರೆ. ತಮ್ಮ ಸಿನಿಮಾಗಳಲ್ಲಿಯೂ ಸಹ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಾರೆ. ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ, ಎಸ್ಎಸ್ ರಾಜಮೌಳಿ ವಿಡಿಯೋ ಗೇಮ್ ಕ್ಷೇತ್ರಕ್ಕೆ ನುಗ್ಗಿದ್ದಾರೆ. ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಒಂದರಲ್ಲಿ ರಾಜಮೌಳಿ ಮತ್ತು ಅವರ ಪುತ್ರ ಕಾಣಿಸಿಕೊಂಡಿದ್ದಾರೆ.

ರಾಜಮೌಳಿ, ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ‘ಆರ್ಆರ್ಆರ್’ ಸಿನಿಮಾ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಆ ಸಿನಿಮಾದ ಬಳಿಕ ಹಾಲಿವುಡ್ನ ದಿಗ್ಗಜ ನಿರ್ದೇಶಕರಾದ ಜೇಮ್ಸ್ ಕ್ಯಾಮರನ್, ಸ್ಟೀಫನ್ ಸ್ಪೀಲ್ಬರ್ಗ್ ಅಂಥಹವರೇ ರಾಜಮೌಳಿಯನ್ನು ಹಾಲಿವುಡ್ಗೆ ಆಹ್ವಾನಿಸಿದ್ದಾರೆ. ಕೆಲ ದೊಡ್ಡ ನಿರ್ಮಾಣ ಸಂಸ್ಥೆಗಳು ಸಹ ರಾಜಮೌಳಿ ಜೊತೆ ಕೆಲಸ ಮಾಡಲು ಮುಂದೆ ಬಂದಿದ್ದವು. ಆದರೆ ರಾಜಮೌಳಿ ಎಲ್ಲವನ್ನೂ ನಿರಾಕರಿಸಿ, ಇದೀಗ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಅತ್ಯುತ್ತಮ ಸಿನಿಮಾ ನಿರ್ದೇಶಕ ಆಗಿರುವ ರಾಜಮೌಳಿ, ಇದೀಗ ವಿಡಿಯೋ ಗೇಮ್ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.
ರಾಜಮೌಳಿ, ವಿಡಿಯೋ ಗೇಮ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಡೆತ್ ಸ್ಟ್ರಾಡಿಂಗ್ ಎಂಬುದು ಜನಪ್ರಿಯ ವಿಡಿಯೋ ಗೇಮ್ ಇದೀಗ ಇದರ ಎರಡನೇ ಆವೃತ್ತಿ ‘ಡೆತ್ ಸ್ಟ್ರಾಡಿಂಗ್: ಆನ್ ದಿ ಬೀಚ್’ನಲ್ಲಿ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಈ ಗೇಮ್ನ ಮುಖ್ಯ ಪಾತ್ರ ಅಲ್ಲ ಬದಲಿಗೆ ಅತಿಥಿ ಪಾತ್ರದಲ್ಲಿ ಮಾತ್ರವೇ ರಾಜಮೌಳಿ ಕಾಣಿಸಿಕೊಂಡಿದ್ದು, ಡೆತ್ ಸ್ಟ್ರಾಡಿಂಗ್ 2ನಲ್ಲಿ ಒಂದು ವಿಶೇಷ ಆಪರೇಷನ್ನಲ್ಲಿ ರಾಜಮೌಳಿ ಮುಖ್ಯ ಆಟಗಾರನಿಗೆ ಸಹಾಯ ಮತ್ತು ಸುಳಿವುಗಳನ್ನು ನೀಡುತ್ತಾರೆ ಎನ್ನಲಾಗಿದೆ.
ಹೈಡಿಯೋ ಕೊಜಿಮಾ ಅವರ ಗೇಮ್ ಇದಾಗಿದ್ದು, ಗೇಮ್ನಲ್ಲಿ ರಾಜಮೌಳಿ ಮಾತ್ರವೇ ಅಲ್ಲದೆ ಅವರ ಪುತ್ರ ಕಾರ್ತಿಕೇಯ ಸಹ ಕಾಣಿಸಿಕೊಂಡಿದ್ದಾರೆ. ಇಬ್ಬರದ್ದೂ ಸಹ ಅತಿಥಿ ಪಾತ್ರವೇ ಆಗಿದೆ. ಸಾಹಸ ಯಾತ್ರೆ ಮಾಡುವವರ ಪಾತ್ರದಲ್ಲಿ ರಾಜಮೌಳಿ ಮತ್ತು ಅವರ ಮಗ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಗುಂಪೊಂದು ಬಂಧಿಸಿ ಒತ್ತೆ ಇಟ್ಟುಕೊಂಡಿರುತ್ತಾರೆ. ಗೇಮ್ನಲ್ಲಿ ಆಟಗಾರರು (ವಿಶೇಷ ಸೈನಿಕರು) ವ್ಯಕ್ತಿಯೊಬ್ಬನನ್ನು ಉಳಿಸುವ ಆಪರೇಷನ್ಗಾಗಿ ಹೋಗುತ್ತಾರೆ. ಅವರು ಉಳಿಸುವ ವ್ಯಕ್ತಿ ರಾಜಮೌಳಿಯೇ ಆಗಿರುತ್ತಾರೆ. ಗೇಮ್ನಲ್ಲಿ ತಮ್ಮ ಬಿಳಿ ಸಾಲ್ಟ್ ಆಂಡ್ ಪೆಪ್ಪರ್ ಗಡ್ಡದಲ್ಲಿಯೇ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಗೇಮ್ನ ಸಣ್ಣ ತುಣಕು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
ಈ ಗೇಮ್, ಜೂನ್ 26 ರಂದು ಪ್ಲೇಸ್ಟೇಷನ್ 5 ನಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಜಪಾನಿನ ಹೈಡಿಯೋ ಕೊಜಿಮಾ ಅವರು ಈ ವಿಡಿಯೋ ಗೇಮ್ ಅನ್ನು ಕ್ರಿಯೇಟ್ ಮಾಡಿದ್ದಾರೆ. ಕೆಲ ಗೇಮರ್ಗಳಿಗೆ ಗೇಮ್ ಮುಂಚಿತವಾಗಿ ಲಭ್ಯವಾಗಿದ್ದು, ರಾಜಮೌಳಿಯ ಕ್ಯಾಮಿಯೋ ಅನ್ನು ಹಲವರು ಗುರುತಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ರಾಜಮೌಳಿ-ಕಾರ್ತಿಕೇಯ ಅವರುಗಳು ಹೈಡಿಯೋ ಕೊಜಿಮಾ ಅವರೊಟ್ಟಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆಯಾಡಿ ಗೇಮ್ನಲ್ಲಿ ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದರು. ಆ ಬಗ್ಗೆ ರಾಜಮೌಳಿ ಪೋಸ್ಟ್ ಸಹ ಹಂಚಿಕೊಂಡಿದ್ದರು. ಬಳಿಕ ರಾಜಮೌಳಿ ಹಾಗೂ ಅವರ ಪುತ್ರ ಕಾರ್ತಿಕೇಯ ಅವರ ಮುಖಚಹರೆ, ಅಭಿನಯವನ್ನು ಮೋಷನ್ ಕ್ಯಾಮೆರಾ ಮೂಲಕ ಶೂಟ್ ಮಾಡಿಕೊಳ್ಳಲಾಗಿತ್ತು. ಅದನ್ನೇ ಈಗ ಗೇಮ್ನಲ್ಲಿ ಬಳಸಿಕೊಳ್ಳಲಾಗಿದೆ.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ ರಾಜಮೌಳಿ, ಮಹೇಶ್ ಬಾಬು ನಟನೆಯ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣಕ್ಕಾಗಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಇನ್ನೂ ಹಲವರು ಇದೀಗ ಕೀನ್ಯಾಗೆ ತೆರಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




